ತುಂಗಾ ನದಿಗೆ ಬಾಗಿನ ಅರ್ಪಿಸಿದ ಗೃಹಸಚಿವ ಆರಗ ಜ್ಞಾನೇಂದ್ರ

ತೀರ್ಥಹಳ್ಳಿ : ಮಲೆನಾಡಿನಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು ತೀರ್ಥಹಳ್ಳಿಯ ಪವಿತ್ರ ತುಂಗಾ ನದಿಯ ನೀರು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದ್ದು ಗುರುವಾರ ಸಂಜೆ ರಾಜ್ಯ ಸರ್ಕಾರದ ಗೃಹಸಚಿವರು, ತೀರ್ಥಹಳ್ಳಿ ಕ್ಷೇತ್ರದ ಶಾಸಕರು ಆಗಿರುವ ಆರಗ ಜ್ಞಾನೇಂದ್ರ ಅವರು ತುಂಗಾ ನದಿಗೆ  ಬಾಗಿನ ಅರ್ಪಿಸಿದರು.


ನಂತರ ಮಾಧ್ಯಮಗಳೊಂದಿಗೆ ಮಾತನಾಡಿ ಮಳೆ ಎಷ್ಟು ಬೇಕಾದರೂ ಬರಲಿ, ನದಿ ಉಕ್ಕಿ ಹರಿಯಲಿ ಅದು ಸಮೃದ್ಧಿಯ ಸಂಕೇತ ಆದರೆ ಎಲ್ಲೂ ಕೂಡ ಹನಿಯಾಗದ ರೀತಿಯಲ್ಲಿ ಕಾಪಾಡು ಎಂದು ರಾಮೇಶ್ವರನಲ್ಲಿ ಬೇಡಿ ಬಾಗಿನ ಅರ್ಪಿಸಿದ್ದೇವೆ ಎಂದು ತಿಳಿಸಿದರು. ತೀರ್ಥಹಳ್ಳಿ ಕ್ಷೇತ್ರದಲ್ಲಿ ಹಲವಾರು ಮನೆಗಳು ಬಿದ್ದು ಹೋಗಿವೆ. ಅದಕ್ಕೆ ಸರ್ಕಾರ ಪ್ರತಿ ಮನೆಗೆ ಹತ್ತು ಸಾವಿರ ರೂ ಆರಂಭದ ಹಣವಾಗಿ ನೀಡುತ್ತಿದೆ. ನಂತರ ಅದರ ಸಂಪೂರ್ಣ ಮಾಹಿತಿ ತಿಳಿದು 5 ಲಕ್ಷದ ವರೆಗೆ ದುರಸ್ಥಿಗೆ ಮತ್ತು ಹೊಸ ಮನೆ ಕಟ್ಟಲು ನೀಡುತ್ತದೆ ಎಂದು ತಿಳಿಸಿದರು. 

ಮೊದಲಿನ ಸರ್ಕಾರ ಇದ್ದಾಗ ಜಿಲ್ಲಾಧಿಕಾರಿ ಹತ್ತಿರ ಮಾತ್ರ ಹಣ ಇರುತ್ತಿತ್ತು ಆದರೆ ನಮ್ಮ ಸರ್ಕಾರ ಬಂದ ನಂತರ ತಹಸೀಲ್ದಾರ್ ಹತ್ತಿರವು ಹಣ ಇರುತ್ತದೆ. ತಕ್ಷಣದ ಪರಿಹಾರಕ್ಕೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಈ ವ್ಯವಸ್ಥೆ ತಂದಿದ್ದೆವೆ ಎಂದು ತಿಳಿಸಿದರು. 

ಆಗುಂಬೆ ಘಾಟಿ ಬಗ್ಗೆ ಮಾತನಾಡಿ ಸಧ್ಯಕ್ಕೆ ಸಣ್ಣ ಪುಟ್ಟ ವಾಹನಗಳ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಸ್ವಲ್ಪ ದಿನದಲ್ಲಿ ಬಸ್ ಓಡಾಡಲು ಅವಕಾಶ ಮಾಡಿಕೊಡಲಾಗುವುದು ಎಂದರು 

ಶಿವಮೊಗ್ಗದಲ್ಲಿ ನೆಡೆದ ರೌಡಿ ಶೀಟರ್ ಹತ್ಯೆ ಬಗ್ಗೆ ಮಾತನಾಡಿ ಸದ್ಯದಲ್ಲೇ ಅವರನ್ನು ಬಂಧಿಸುವ ಕೆಲಸ ಆಗುತ್ತದೆ. ಪೊಲೀಸರಿಗೆ ಅದರ ಬಗ್ಗೆ ಈಗಾಗಲೇ ಮಾಹಿತಿ ಇದೆ ಅದೊಂದು ಗುಂಪು ಅದನ್ನು ಸಂಪೂರ್ಣ ತಡೆಗಟ್ಟಬೇಕಿದೆ. ಶಿವಮೊಗ್ಗ ರೌಡಿಗಳ ಸೆಂಟರ್ ಆಗಿದೆ. ಕೊತ್ವಾಲ ರಾಮಚಂದ್ರನಿಂದ ಪರಂಪರೆ ಬೆಳೆದುಕೊಂಡು ಬಂದಿದೆ. ಅದನ್ನು ಹೇಗಾದರೂ ಮಾಡಿ ಇಲ್ಲಿಗೆ ಮಂಗಳ ಹಾಡಬೇಕು ಎಂದು ಈಗಾಗಲೇ ಪೊಲೀಸರಿಗೆ ಸೂಚಿಸಿದ್ದೇನೆ ಎಂದರು. 

ಇನ್ನು ಪಿಎಸ್ಐ ನೇಮಕಾತಿ ಪ್ರಕರಣದಲ್ಲಿ ಬಂಧನವಾದ ಗಣಪತಿ ಭಟ್ ಬಗ್ಗೆ ಮಾತನಾಡಿ ಉತ್ತರ ಕನ್ನಡದಲ್ಲಿ ಗಜಾನನ ಭಟ್, ಗಣಪತಿ ಭಟ್ ಈ ರೀತಿಯ ಹೆಸರು ಮಾಮೂಲಿ. ನನ್ನ ಜೊತೆ ಇದ್ದಿದ್ದು ಗಣಪತಿ ಭಟ್ ಹೌದು ಆದರೆ ಅವರು ಶಿರಸಿ ಇವರು ಕುಮುಟಾ ಗಣಪತಿ ಭಟ್ ಅಷ್ಟೇ. ನಮ್ಮ ವಿರೋಧಿಗಳು ಅಂತೂ ಸಿಕ್ಕಿ ಹಾಕಿಕೊಂಡ ಅಂತ ನನ್ನ ಬಗ್ಗೆ ಅಂದುಕೊಂಡಿದ್ರು, ಬಹಳ ಸಂತೋಷ ಪಟ್ಟಿದ್ರು ಆದರೆ ಅದು ಹಾಗಾಗಲಿಲ್ಲ. ನನ್ನ ಜೊತೆ ಇರುವವರು ಹೇಗಿದ್ದಾರೋ ಹಾಗೆ ಇದ್ದಾರೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ, ತಹಸೀಲ್ದಾರ್ ಅಮೃತ್ ಅತ್ರೇಶ್, ಪಟ್ಟಣ ಪಂಚಾಯತ್ ಅಧ್ಯಕ್ಷೆ ಶಬನಮ್, ಬಾಳೆಬೈಲು ರಾಘವೇಂದ್ರ, ಸೊಪ್ಪುಗುಡ್ಡೆ ರಾಘವೇಂದ್ರ ಸೇರಿ ಹಲವರು ಉಪಸ್ಥಿತರಿದ್ದರು.

ಸಂಪೂರ್ಣ ವಿಡಿಯೋ ಇಲ್ಲಿದೆ ವೀಕ್ಷಿಸಿ



ವರದಿ : ಅಕ್ಷಯ್ ಕುಮಾರ್

Leave a Reply

Your email address will not be published. Required fields are marked *