ಶೈಕ್ಷಣಿಕ ಕೆಂದ್ರಗಳನ್ನು ಸುಸಜ್ಜಿತವಾಗಿ,ಶುಚಿತ್ವವಾಗಿ, ಸುಂದರವಾಗಿ ರೂಪುಗೊಳಿಸಬೇಕು ಕಾರಣ ಪರಿಸರವು ಅಲ್ಲಿ ಕಲಿಯುತ್ತಿರುವ ವಿಧ್ಯಾರ್ಥಿಗಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಶಾಸಕ ಎಂಎಸ್ಐಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.
ರಿಪ್ಪನ್ಪೇಟೆ ಪಟ್ಟಣದಲ್ಲಿ 20 ಲಕ್ಷ ವೆಚ್ಚದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರವೇಶ ರಸ್ತೆಯ ಕಾಮಗಾರಿಯ ಶಂಕುಸ್ಥಾಪನಾ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರದ ಕಾರ್ಯಕ್ರಮದಲ್ಲಿ ಮಾತನಾಡಿ ಕಾಲೇಜುಗಳ ಕ್ಯಾಂಪಸ್ ವಿದ್ಯಾರ್ಥಿ, ಸಾರ್ವಜನಿಕರ ಗಮನ ಸೆಳೆಯುವಂತಿರಬೇಕು ಅದಕ್ಕಾಗಿ ಕಾಲೇಜಿಗೆ ದ್ವಿಪಥ ಆಗಮನ ಮತ್ತು ನಿರ್ಗಮನ ವ್ಯವಸ್ಥೆಯ ಸುಸಜ್ಜಿತ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಜೊತೆಗೆ ಅಗತ್ಯತೆಗಳನ್ನು ಅರಿತು ಹಂತಹಂತವಾಗಿ ಅಭಿವೃದ್ದಿ ಮಾಡುತ್ತೇವೆ, ಶಂಕುಸ್ಥಾಪನೆ ಮಾಡಬೇಕೆಂಬ ಉದ್ದೇಶ ನನಗಿಲ್ಲ. ಆದರೆ ಇಂತಹ ಕಾರ್ಯಕ್ರಮಗಳಿಂದ ಸ್ಥಳಕ್ಕಾಗಮಿಸಿದಾಗ ತಾಂತ್ರಿಕ ಅಧಿಕಾರಿಗಳು, ಆಡಳಿತ ಸಿಬ್ಬಂದಿಗಳು, ಹಾಗೂ ಸಾರ್ವಜನಿಕರಿಂದ ಕೆಲವು ಮಾಹಿತಿ ಮತ್ತು ಸಲಹೆಗಳು ಪಡೆದುಕೊಂಡು ಹೆಚ್ಚು ಸುಂದರತೆಯನ್ನು ಕೊಡಲು ಸಾಧ್ಯವಾಗುತ್ತದೆ ಎಂದರು.
ಕಾಲೇಜಿನಲ್ಲಿ ಯಾವುದೇ ಮಕ್ಕಳು ದಡ್ಡರಲ್ಲ ಎಲ್ಲರೂ ಒಂದಿಲ್ಲೋಂದು ವಿಷಯದಲ್ಲಿ ಪ್ರಾವಿಣ್ಯತೆಯನ್ನು ಹೊಂದಿರುತ್ತಾರೆ. ನಾನು ಯಾವಗಲೂ ಸರಾಸರಿ ಅಂಕ ಇಲ್ಲದವರ ಪರವಾಗಿಯೇ ಇರುತ್ತೇನೆ ಕಾರಣ ಎಲ್ಲಾ ಮಕ್ಕಳಲಿಯೂ ಸಮಾನ ಶಿಕ್ಷಣ ತರಬೇಕೆಂಬ ಉದ್ದೇಶದಿಂದ. ಕಡಿಮೆ ಅಂಕ ಗಳಿಸಿರುವೆನೆಂದು ಕೀಳರಿಮೇಯನ್ನು ಹೊಂದದೇ ವಿಧ್ಯಾರ್ಥಿಗಳು ಹೆಚ್ಚು ಒದುತ್ತಿರುವ ರಾಜಕೀಯ ಪುಡಾರಿಗಳ ಮಕ್ಕಳು, ಕಾನ್ವೆಂಟ್ ಕಲಿಯುತ್ತಿರುವ ಮಕ್ಕಳು ಶಿಕ್ಷಕರ ಮಕ್ಕಳ ಜೊತೆ ಸ್ಪರ್ಧೆ ಮಾಡಿ ಸಾಧಿಸಬೇಕು ಕಠಿಣ ಪರಿಶ್ರಮ ನಿಮ್ಮ ಜೀವನವನ್ನು ರೂಪಿಸುತ್ತದೆ ಎಂದರು.
ಇದೇ ಸಂಧರ್ಭದಲ್ಲಿ 2021-22 ನೇ ಸಾಲಿನಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿನಿಯರಾದ ಕಾವ್ಯಾ ಮತ್ತು ಸಿಂಧು ರವರನ್ನು ಶಾಸಕರು ಈ ಸಂಧರ್ಭದಲ್ಲಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ಮಹಾಲಕ್ಷಿ, ಎಂ.ಬಿ.ಮಂಜುನಾಥ, ಆರ್.ಟಿ.ಗೋಪಾಲ, ಮೆಣಸೆ ಆನಂದ, ದುಂಡರಾಜಪ್ಪ ಗೌಡ, ಕೇತಾರ್ಜಿರಾವ್, ಸುರೇಶ, ಜಾನಕಮ್ಮ, ಪ್ರಾಚಾರ್ಯ ಚಂದ್ರಶೇಖರ್, ಉದ್ಯಮಿ ನಾಗರಾಜ ಶೆಟ್ಟಿ, ಇನ್ನಿತರರಿದ್ದರು.