ರಿಪ್ಪನ್ಪೇಟೆ;- ರಾಜ್ಯದ ಗೃಹ ಮಂತ್ರಿಗಳು ಹಾಗೂ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರು ಆದ ಆರಗ ಜ್ಞಾನೇಂದ್ರ ರವರ ಕ್ಷೇತ್ರದ ಹೆದ್ದಾರಿಪುರ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಬೆಳಕೋಡು-ಕರಡಿಗ ಗ್ರಾಮದ ಸಂಪರ್ಕವೂ ಮೃತ್ಯುವಿನ ಜೊತೆಗೆ ಸರಸವಾಡಿದಂತಾಗಿದ್ದು ಪ್ರತಿನಿತ್ಯ ನೂರಾರು ಜನ ಇಲ್ಲಿನ ಅಸುರಕ್ಷಿತ ಕಾಲಸಂಕ ಬಳಸಿ ತಮ್ಮ ದೈನಂದಿನ ಕಾರ್ಯಚಟುವಟಿಕೆಗಾಗಿ ಸಂಚರಿಸುವ ಅನಿವಾರ್ಯತೆ ಎದುರಾಗಿದೆ.
ಪ್ರತಿವರ್ಷದ ಮಳೆಗಾಲದಲ್ಲಿ ಗ್ರಾಮದ ಜನರು ನಿತ್ಯ ಸಂಚಾರದ ಮಾರ್ಗ ಹಳ್ಳದ ಹರಿವಿನಿಂದ ಕಡಿತಗೊಂಡು ಸುತ್ತಿಬಳಸಿ ದೂರದ ಪ್ರಯಾಣದಿಂದ ಜನರು ಶಾಲಾ ಕಾಲೇಜ್ ವಿದ್ಯಾರ್ಥಿಗಳು ಪೇಟೆ ಪಟ್ಟಣ ಸೇರಬೇಕಾಗಿದೆ.
ಪ್ರತಿವರ್ಷದ ಮಳೆಗಾಲದಲ್ಲಿ ಗ್ರಾಮದ ಜನರು ನಿತ್ಯ ಸಂಚಾರದ ಮಾರ್ಗ ಹಳ್ಳದ ಹರಿವಿನಿಂದ ಕಡಿತಗೊಂಡು ಸುತ್ತಿಬಳಸಿ ದೂರದ ಪ್ರಯಾಣದಿಂದ ಜನರು ಶಾಲಾ ಕಾಲೇಜ್ ವಿದ್ಯಾರ್ಥಿಗಳು ಪೇಟೆ ಪಟ್ಟಣ ಸೇರಬೇಕಾಗಿದೆ.
ನೇರ ಸಂಪರ್ಕದ ದಾರಿ ನೀರಿನಿಂದ ಮುಳುಗಡೆಗೊಂಡು ಸಂಚಾರ ನಿರ್ಬಂಧಿತವಾಗುವುದರಿಂದ ಇಲ್ಲಿನ ಜನರು ಪಟ್ಟಣ ಸನಿಹ ಸಂಚಾರಕ್ಕಾಗಿ ಶರ್ಮಿಣ್ಯಾವತಿ ಹೊಳೆಯ ಎರಡು ಕಡೆಯಲ್ಲಿರುವ ದಂಡೆಗೆ ಮರದ ಉದ್ದದ ಮರದ ದಿಮ್ಮಿಗಳನ್ನು ಬಳಸಿ ಏಕವ್ಯಕ್ತಿ ದಾಟುವ ಕಾಲಸಂಕವನ್ನು ನಿರ್ಮಿಸಿಕೊಂಡಿದ್ದಾರೆ.ಅದರೆ ಇಲ್ಲಿನ ಸಂಚಾರ ಬಹಳ ದುಸ್ತರವಾಗಿದ್ದು ವಯೋವೃದ್ದರು ಗರ್ಭೀಣಿಯರು ಮಹಿಳೆಯರು ಶಾಲಾ ಕಾಲೇಜ್ ವಿದ್ಯಾರ್ಥಿಗಳು ಸಂಕ ದಾಟುವಾಗ ಸ್ವಲ್ಪ ಅಜಾಗರೂಕರಾದರೂ ಹೊಳೆಯ ಪಾಲಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಇಂತಹ ರಭಸದಿಂದ ಹರಿಯುವ ಹೊಳೆಯ ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗುವ ಮಾರಣಾಂತಿಕ ಅಪಾಯ ಎದುರಿಸಬೇಕಾಗುತ್ತದೆ ಅದರೂ ಅನಿವಾರ್ಯದ ಬಳಕೆ ಇದಾಗಿದ್ದು ಜನಪ್ರತಿನಿಧಿಗಳ ನಿರ್ಲಕ್ಷದಿಂದಾಗಿ ನಮ್ಮ ಗೋಳು ಕೇಳೋರೀಲ್ಲದ ಸ್ಥಿತಿಯಾಗಿದೆ ಸ್ವಾಮಿ ಎಂದು ತಮ್ಮ ಅಸಹಾಯಕತೆಯನ್ನು ಪೋಸ್ಟ್ ಮ್ಯಾನ್ ಸುದ್ದಿ ಬಳಗದೊಂದಿಗೆ ಗ್ರಾಮಸ್ಥರು ಹಂಚಿಕೊಂಡರು.
ಈ ಗ್ರಾಮದ ಜನಗಳು ಕೃಷಿ ಮತ್ತು ಹೈನುಗಾರಿಕೆಯನ್ನು ನೆಚ್ಚಿಕೊಂಡಿದ್ದು ಜೀವನ ನಡೆಸುತ್ತಿದ್ದಾರೆ ಸುಮಾರು ನೂರಕ್ಕೂ ಅಧಿಕ ಕುಟುಂಬಗಳಿರುವ ಇಲ್ಲನ ಜನ ಮಕ್ಕಳು ಶಾಲೆ, ಅಸ್ಪತ್ರೆ, ಸಂತೆ ಇನ್ನಿತರ ದೈನಂದಿನ ಕಾರ್ಯಗಳಿಗೆ ರಿಪ್ಪನ್ಪೇಟೆ ಪಟ್ಟಣಕ್ಕೆ ಬರಬೇಕಾಗಿದೆ. ಗ್ರಾಮಗಳ ಸಮೀಪದ ಮಾರ್ಗ ಅಸುರಕ್ಷತ ಕಾಲಸಂಕವನ್ನು ಬಳಸಬೇಕಿದೆ ಸರಕುಸರಂಜಾಮುಗಳನ್ನು ವಾಹನದಲ್ಲಿ ಬದಲಿ ಮಾರ್ಗದಲ್ಲಿ ಕೊಂಕಣ ಸುತ್ತಿ ಮೈಲಾರಕ್ಕೆ ಹೋದಂತೆ ಕಣಬಂದೂರು ಮಾರ್ಗದ ಸುಮಾರು 10 ಕಿ.ಮೀ.ದೂರ ಸುತ್ತಾಡಿಕೊಂಡು ಸಾಗಬೇಕಿದೆ ಸಣ್ಣಪುಟ್ಟ ಮಕ್ಕಳನ್ನು ಅಂಗನವಾಡಿಗಳಿಗೆ ಹಾಗೂ ಪ್ರಾಥಮಿಕ ಶಾಲೆಗಳಿಗೆ ಕಳುಹಿಸುವುದು ಹರಸಾಹಸವಾಗಿದ್ದಯ ಮಕ್ಕಳ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಕಳೆದ 10 ವರ್ಷದಲ್ಲಿ ಚಿಕ್ಕಜೇನಿ ಬಳಿಯಲ್ಲಿ ಕಾಲಸಂಕ ದಾಟುವಾಗ ಎರಡು ಮಕ್ಕಳು ಅಕಸ್ಮಿಕ ಕಾಲು ಜಾರಿ ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದು ಕಳೆದ ವರ್ಷದಲ್ಲಿ ಸಹ ತೀರ್ಥಹಳ್ಳಿ ವ್ಯಾಪ್ತಿಯಲ್ಲಿ ಇಂತಹ ದುರ್ಘಟನೆಗಳು ಸಂಭವಿಸಿದ್ದರೂ ಕೂಡಾ ಕ್ಷೇತ್ರದ ಶಾಸಕರು ಹಾಗೂ ರಾಜ್ಯ ಗೃಹ ಸಚಿವರಿಗೆ ಬೆಳಕೋಡು ಕರಡಿಗ ಗ್ರಾಮಸ್ಥರುಗಳು ನೀಡಿರುವ ಮನವಿ ಗಮನಕ್ಕೆ ಬಂದಂತೆ ಕಾಣುತ್ತಿಲ್ಲವೇ,ವಿಧಾನಸಭಾ ಅಧಿವೇಶನದಲ್ಲಿ ಸಾಗರ-ಹೊಸನಗರ ತಾಲೂಕಿನ ಕಾಲಸಂಕ ವಿಚಾರವಾಗಿ ದ್ವನಿ ಎತ್ತಿದರೆ ಹೊರತು ಅನುಷ್ಟಾನಗೊಳಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆಂದು ಗ್ರಾಮಸ್ಥರು ಅಕ್ರೋಶಿತರಾಗಿದ್ದಾರೆ.
ಇನ್ನಾದರೂ ಈ ಕ್ಷೇತ್ರದ ಜನಪ್ರತಿನಿದಿಗಳು ಗಮನಹರಿಸಿ ಜಂಬಳ್ಳಿ-ಯಡಗುಡ್ಡೆ,ಸಂಪಳ್ಳಿ, ಕಾರಗೋಡು, ಬೆಳಕೋಡು, ಕರಡಿಗ ಗ್ರಾಮಗಳ ಜನರ ಸಮಸ್ಯೆಗೆ ಪರಿಹಾರ ಕಲ್ಪಿಸಲು ಮುಂದಾಗುವರೇ ಕಾದು ನೋಡಬೇಕಾಗಿದೆ ಎಂದು ಗ್ರಾಮದ ರೈತ ರಾಮಪ್ಪ ಕರಡಿಗ ರವರು ಹೇಳಿದರು.

ನಮ್ಮೂರಿನ ಹಳ್ಳಕ್ಕೆ ಸೇತುವೆ ನಿರ್ಮಿಸಿ ಕೊಡುವಂತೆ ಸಚಿವರಿಗೆ ಸಂಸದರಿಗೆ ಮನವಿ ಸಲ್ಲಿಸಿದ್ದೇವೆ ಸಚಿವರು ಮಂಜೂರು ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ ಇಲ್ಲಿನ ಜನಗಳಿಗೆ ಅತೀ ಅಗತ್ಯವಾಗಿರುವ ಈ ಕಾಲಸಂಕ ಕಾಮಗಾರಿಯನ್ನು ಕೂಡಲೇ ಮಾಡುವಂತೆ ನಾನು ಸತತ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೆದ್ದಾರಿಪುರ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಲಲಿತಾ ರವರು ಹೇಳುತ್ತಾರೆ.
ಒಟ್ಟಾರೆಯಾಗಿ ಶಿವಮೊಗ್ಗ ಜಿಲ್ಲೆಯ ಮೂವರು ಮುಖ್ಯಮಂತ್ರಿಗಳನ್ನು ನೀಡಿದ್ದು ಮುಂದುವರಿದ ಜಿಲ್ಲೆಗಳ ಪೈಕಿ ಗೃಹ ಸಚಿವರ ತವರು ಕ್ಷೇತ್ರವಾದ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಒಂದು ಕುಗ್ರಾಮ ಕರಡಿಗ-ಬೆಳಕೋಡು ಗ್ರಾಮಸ್ಥರಿಗೆ, ರೈತ, ಕೂಲಿ ಕಾರ್ಮಿಕರಿಗೆ ಸುವ್ಯವಸ್ತೆಯ ರಸ್ತೆ ಸಂಪರ್ಕ ವಿಲ್ಲದೆ ಇರುವುದು ನಾಚಿಕೆಗೇಡಿನ ವಿಷಯವಾಗಿದೆ.