Headlines

ಕೋಡೂರು ಸಮೀಪದಲ್ಲಿ ಅಬಕಾರಿ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ : ಕಾರು ಸಮೇತ ಅಕ್ರಮ ಗಾಂಜಾ ವಶಕ್ಕೆ

ಕೋಡೂರು  : ಇಲ್ಲಿನ ಸಮೀಪದ ಕೇಶವಪುರ ಗ್ರಾಮದಲ್ಲಿ ಕಾರಿನಲ್ಲಿ‌ ಗಾಂಜಾ ಸಾಗಾಟ ಮಾಡುತಿದ್ದ ಕಾರು ಮತ್ತು 60ಗ್ರಾಂ ಗಾಂಜಾ ವಶಪಡಿಸಿಕೊಂಡಿರುವ ಘಟನೆ ನಡೆದಿದೆ.

ಕೇಶವಪುರ ಗ್ರಾಮದ ಶೇಕ್ ಫೈಝರ್ ಮಸೂದ್ ಗೆ ಸೇರಿದ ಕಾರಿನ ಮೇಲೆ ದಾಳಿ ಮಾಡಿ ಕಾರಿನಲ್ಲಿ ಸಾಗಣಿಕೆ ಮಾಡಲು ಹೊಂದಿದ್ದ 60 ಗ್ರಾಂ ಒಣ ಗಾಂಜಾ ಸೊಪ್ಪುನ್ನು ಮತ್ತು ಒಂದು ಕಾರನ್ನು ವಶಪಡಿಸಿಕೊಂಡು ಆರೋಪಿತನ ವಿರುದ್ಧ ಅಬಕಾರಿ ನಿರೀಕ್ಷಕರು ಹೊಸನಗರ ವಲಯ ರವರು NDPS ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದೆ‌.

ಈ ದಾಳಿಯಲ್ಲಿ  ಅಬಕಾರಿ ಉಪ ಆಯುಕ್ತರು ಶಿವಮೊಗ್ಗ  ಜಿಲ್ಲೆ ರವರ ನಿರ್ದೇಶನದಲ್ಲಿ ಹಾಗೂ ಅಬಕಾರಿ ಉಪ ಅಧಿಕ್ಷಕರು ತೀರ್ಥಹಳ್ಳಿ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಖಚಿತ ಮಾಹಿತಿ ಮೇರೆಗೆ ಹೊಸನಗರ ವಲಯದ ಅಬಕಾರಿ ನೀರಿಕ್ಷಕರಾದ ಶ್ರೀ ನಾಗರಾಜ ಎ ಜೆ, ಕೆಂಪರಾಮು. ಅಬಕಾರಿ ಮುಖ್ಯ ಪೇದೆ, ಪಾಂಡು ಅಂಬವ್ವಗೊಳ್ ಅಬಕಾರಿ ಪೇದೆ ಹಾಗೂ ವಾಹನ ಚಾಲಕ ಉಮೇಶ್ ಎಸ್ ಡಿ ರವರು ಭಾಗವಹಿಸಿರುತ್ತಾರೆ

About The Author

Leave a Reply

Your email address will not be published. Required fields are marked *