ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಬಾಳೂರು ಗ್ರಾಮ ಸ ನಂ 14 ರಲ್ಲಿ 50 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಜಮೀನಿನಲ್ಲಿ ಬೆಳೆದ ಬಾಳೆ ಬೆಳೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ನಾಶಪಡಿಸಲು ಮುಂದಾಗಿದ್ದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ತಾ ಪಂ ಮಾಜಿ ಅಧ್ಯಕ್ಷರಾದ ವೀರೇಶ್ ಆಲವಳ್ಳಿ ಏಕಾಏಕಿ ಬಾಳೆ ಗೆಡ್ಡೆಗಳನ್ನು ಕಿತ್ತು,ಕೊಚ್ಚಿ ನಾಶಪಡಿಸುತ್ತಿರುವ ಘಟನೆಯನ್ನು ಖಂಡಿಸಿ ಅರಣ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಂತರ ಹಿರಿಯ ಅರಣ್ಯಾಧಿಕಾರಿಗಳೊಂದಿಗೆ ಮಾತನಾಡಿ ಬಾಳೂರು ಗ್ರಾಮ, ಸರ್ವೆ ನಂ 14 ರಲ್ಲಿ ಗೋಮಾಳ,ಮೀಸಲು ಅರಣ್ಯವಿದೆ ಜಂಠಿ ಸರ್ವೆಕಾರ್ಯ ನಡೆದಿರುವುದಿಲ್ಲಾ,ರೈತರ ಬಗರುಹುಕುಂ ಅರ್ಜಿಗಳು ಇತ್ಯರ್ಥವಾಗಿಲ್ಲದರಿಂದ ಅರಣ್ಯ ಇಲಾಖೆಯವರು ಏಕಾಏಕಿ ತೀರ್ಮಾನ ಕೈಗೊಳ್ಳಲು ಬರುವುದಿಲ್ಲಾ ಎಂದು ಮನವೊಲಿಸುವಲ್ಲಿ ಯಶಸ್ವಿಯಾದರು.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇