Headlines

ರಾಜ್ಯಾದ್ಯಂತ ಸೆ.24 ರ ರಾತ್ರಿಯಿಂದ 108 ಆಂಬ್ಯುಲೆನ್ಸ್ ಸೇವೆ ಸ್ಥಗಿತ : 108 ನಂಬರ್ ಗೆ ಕರೆ ಮಾಡಿದರೆ ಇಲ್ಲಾ ರೆಸ್ಪಾನ್ಸ್

ರಾಜ್ಯಾದ್ಯಂತ ಸೆಪ್ಟೆಂಬರ್​ 24ರ ರಾತ್ರಿಯಿಂದ 108 ಆಂಬುಲೆನ್ಸ್​ ಸೇವೆ ಸ್ಥಗಿತಗೊಂಡಿದೆ. ಜಿವಿಕೆ ಏಜೆನ್ಸಿ ನಡೆಸುತ್ತಿರುವ 108 ಸಹಾಯವಾಣಿಗೆ, ಆರೋಗ್ಯ ಎಮರ್ಜನ್ಸಿ ಎಂದು ಯಾರೇ ಕರೆಮಾಡಿದರೂ ಅದನ್ನು ಸ್ವೀಕರಿಸುತ್ತಿಲ್ಲ.

ಹೀಗಾಗಿ ಅನೇಕ ರೋಗಿಗಳು ಪರದಾಡುವಂತಾಗಿದೆ. ಆಂಬುಲೆನ್ಸ್​ಗಳು ಸಿಗದೆ ಕಷ್ಟಪಡುವಂತಾಗಿದೆ.

ಹೀಗೆ ಆಂಬುಲೆನ್ಸ್​ ಸೇವೆ ಸ್ಥಗಿತಗೊಳ್ಳಲು ತಾಂತ್ರಿಕ ದೋಷವೇ ಕಾರಣ ಎಂದು ಹೇಳಲಾಗಿದೆ. 108 ತುರ್ತು ಸೇವೆಗೆ ದಿನವೊಂದಕ್ಕೆ ಏನಿಲ್ಲವೆಂದರೂ ರಾಜ್ಯದೆಲ್ಲೆಡೆಯಿಂದ 20 ಸಾವಿರ ಕರೆಗಳು ಬರುತ್ತದೆ. ಆದರೆ ನಿನ್ನೆ ರಾತ್ರಿಯಿಂದ 108ಕ್ಕೆ ಕರೆ ಮಾಡಿದರೆ ಫೋನ್​ ಸಂಪರ್ಕ ಸಿಗುತ್ತಿಲ್ಲ. 

ಒಮ್ಮೆ ರಿಂಗ್​ ಆದರೂ ಅತ್ತಲಿಂದ ಉತ್ತರವೂ ಬರುವುದಿಲ್ಲ ಎಂದು ಹೇಳಲಾಗಿದೆ. ಇಷ್ಟಾದರೂ ರಾಜ್ಯ ಸರ್ಕಾರ, ಆರೋಗ್ಯ ಇಲಾಖೆ ಗಮನ ಹರಿಸಿಲ್ಲ ಎಂದು ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ತುರ್ತು ಸಂದರ್ಭ ಇರುವವರು ಹಣಕೊಟ್ಟು ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಹೋಗುತ್ತಿದ್ದಾರೆ.ಬಡವರ ಪಾಡೇನು …ಅನಾಮಧೇಯ ಅಪಘಾತಗಳಾದಗ 108 ಕ್ಕೆ ಕರೆ ಮಾಡಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗುತಿತ್ತು.

Leave a Reply

Your email address will not be published. Required fields are marked *