Headlines

ಅಮ್ಮನಘಟ್ಟವನ್ನು ಪ್ರವಾಸಿ ತಾಣವನ್ನಾಗಿಸಲಾಗುವುದು : ಆರಗ ಜ್ಞಾನೇಂದ್ರ

ರಿಪ್ಪನ್‌ಪೇಟೆ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪುರಾಣ ಪ್ರಸಿದ್ಧ ಅಮ್ಮನಘಟ್ಟವನ್ನು ಪ್ರವಾಸಿ ತಾಣವನ್ನಾಗಿಸುವುದರೊಂದಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಹೆಚ್ಚಿನ ಅಧ್ಯತೆ ನೀಡುವುದಾಗಿ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಭರವಸೆ ನೀಡಿದರು.


ಸಮೀಪದ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಎರಡನೇ ದಿನದ ವಿಶೇಷ ಪೂಜಾ ಕಾರ್ಯದಲ್ಲಿ ಭಾಗವಹಿಸಿ ದೇವಸ್ಥಾನ ಸಮಿತಿಯವರೊಂದಿಗೆ ಸಮಾಲೋಚನಾ ಸಭೆ ನಡೆಸಿ ಇದೊಂದು ಧಾರ್ಮೀಕ ಐತಿಹಾಸಿಕ ಕ್ಷೇತ್ರವಾಗಿದ್ದ ವರ್ಷಧಲ್ಲಿ ಭಾದ್ರಪದ ಮಾಸದ ಪಿತೃಪಕ್ಷದಲ್ಲಿ ಮಂಗಳವಾರ ಮತ್ತು ಶುಕ್ರವಾರದ ಜಾತ್ರಾಮಹೋತ್ಸವ ಮತ್ತು ನಾಡಿನ ಮೈಸೂರು ಚಾಮುಂಡೇಶ್ವರಿ ದೇವಿಯಂತೆ ಮಲೆನಾಡಿಗರಿಗೆ ಜೇನುಕಲ್ಲಮ್ಮ ಚಾಮುಂಡೇಶ್ವರಿಯನ್ನಾಗಿ ಭಾವಿಸಿ ಶರನ್ನವರಾತ್ರಿಯನ್ನು ಶ್ರದ್ದಾ ಭಕ್ತಿಯಿಂದ ಆಚರಿಸಲಾಗುತ್ತದೆ.ಆ ಕಾರಣ ಸೌಲಭ್ಯಗಳ ಅವಶ್ಯಕತೆ ಹೆಚ್ಚು ಇದ್ದು ರಸ್ತೆ ನೀರು ಯಾತ್ರಾರ್ಥಿಗಳಿಗೆ ಯಾತ್ರಿ ನಿವಾಸದ ಅಗತ್ಯತೆ ಕುರಿತು ಸಾಧ್ಯವಾದಷ್ಟು ಸರ್ಕಾರದಿಂದ ಅನುದಾನ ಕೊಡಿಸುವ ಭರವಸೆ ನೀಡಿ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಮತ್ತು ನಾನು ಹಾಗೂ ಸಂಸದರೊಂದಿಗೆ ದೇವಸ್ಥಾನ ಸೇವಾ ಸಮಿತಿಯವರೊಂದಿಗೆ ಕ್ಷೇತ್ರದ ಅಭಿವೃದ್ದಿ ಕಾರ್ಯಗಳ ಕುರಿತು ಚರ್ಚಿಸಿ ನೀಲನಕ್ಷೆ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಶೀಘ್ರದಲ್ಲಿ ಕಳುಹಿಸುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಜೇನುಕಲ್ಲಮ್ಮ ದೇವಸ್ಥಾನ ಸೇವಾ ಸಮಿತಿ ಮತ್ತು ಕೋಡೂರು ಗ್ರಾಮ ಪಂಚಾಯ್ತಿಯವರು ಗೃಹ ಸಚಿವ ಆರಗ ಜ್ಞಾನೇಂದ್ರರನ್ನು ಸನ್ಮಾನಿಸಿ ಗೌರವಿಸಿದರು.

[ರಾಜ್ಯದಲ್ಲಿ ಪಿಎಫ್‌ಐ ಸೇರಿದಂತೆ ಇತರ ಸಂಘಟನೆಗಳ ನಿಷೇಧಿಸುವ ಅಧಿಕಾರ ಕೇಂದ್ರ ಸರ್ಕಾರದಾಗಿದ್ದು ಈಗಾಗಲೇ ರಾಜ್ಯದಲ್ಲಿನ ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವ ದೇಶದ್ರೋಹಿ ಸಂಘಟನೆಗಳನ್ನು ನಿಷೇಧಿಸುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ –ಆರಗ ಜ್ಞಾನೇಂದ್ರ ರಾಜ್ಯ ಗೃಹಸಚಿವರು]



Leave a Reply

Your email address will not be published. Required fields are marked *