ಹೊಸನಗರ ಪಟ್ಟಣ ಹಾಗೂ ಜಯನಗರದಲ್ಲಿ ಇಂದು ಮುಸ್ಲಿಂ ಬಾಂಧವರು ಸಂಭ್ರಮ ಸಡಗರದಿಂದ ಈದ್ ಮಿಲಾದ್ ಮೆರವಣಿ ಗೆಯಲ್ಲಿ ಪಾಲ್ಗೊಂಡು ಪ್ರವಾದಿ ಮಹಮದ್ ರವರ ಜನ್ಮದಿನವನ್ನು ಶ್ರದ್ದಾಪೂರ್ವಕವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಮಸೀದಿಯ ಧರ್ಮ ಗುರುಗಳು ಸಂದೇಶ ನೀಡಿ ಪ್ರವಾದಿ ಅವರ ಆಲೋಚನೆಗಳು ಅತ್ಯಂತ ಪ್ರಸ್ತುತವಾಗಿದೆ ಉತ್ತಮ ಸಮಾಜ ನಿರ್ಮಾಣಕ್ಕೆ ಅವರ ಗುರಿ ಸಂದೇಶಗಳು ಪೂರಕವಾಗಿದೆ ಮಾನವ ಜೀವನದ ಸಮಗ್ರ ಸುಧಾರಣೆ ಪ್ರವಾದಿ ಅವರ ಗುರಿಯಾಗಿತ್ತು.ಪ್ರವಾದಿಯವರ ಆಶೋತ್ತರಗಳು ಕೇವಲ ಇಸ್ಲಾಂ ಸಮುದಾಯಕ್ಕೆ ಮಾತ್ರವಲ್ಲದೆ ಜಗತ್ತಿನ ಮಾನವ ಕುಲದ ಪ್ರತಿಯೊಬ್ಬರಿಗೂ ಪ್ರಸ್ತುತವಾಗಿದೆ ಎಂದರು.
ಈದ್ ಮಿಲಾದ್ ಆಚರಣೆ ಸಂಭ್ರಮ ಸಲುವಾಗಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಮಸೀದಿಯ ಸ್ವಾಗತ ಫಲಕದಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತ ರ ಸಂದೇಶ ಸಾರುವ ಸಾಮರಸ್ಯತೆ ಪ್ರತಿಬಿಂಬಿಸುವ ಲೋಗೋ ಮುದ್ರಿಸುವ ಮೂಲಕ ಸಾಮರಸ್ಯತೆ ಪ್ರತಿಬಿಂಬಿಸಲಾಗಿತ್ತು.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇