ಗೃಹಸಚಿವರ ತವರಿನಲ್ಲೇ ಅಕ್ರಮ ಮದ್ಯಕ್ಕೆ ವ್ಯಕ್ತಿ ಬಲಿ !!!!!!!?|Guddekoppa

ತೀರ್ಥಹಳ್ಳಿ : ಗೃಹಸಚಿವ ಆರಗ ಜ್ಞಾನೇಂದ್ರ ಅವರ ತವರೂರು ಹೊದಲ ಗ್ರಾಮಪಂಚಾಯಿತಿ ವ್ಯಾಪ್ತಿಯ ಗುಡ್ಡೆಕೊಪ್ಪ ಸಮೀಪದ ತಲವಡ್ಕದ ಕುಟ್ರ ಎಂಬ ಹಳ್ಳಿಯಲ್ಲಿ ಅಕ್ರಮ ಮದ್ಯಕ್ಕೆ ವ್ಯಕ್ತಿ ಬಲಿಯಾದ ಘಟನೆ ಶನಿವಾರ ರಾತ್ರಿ ನೆಡೆದಿದೆ.


ಕೆಲವು ದಿನಗಳ ಹಿಂದೆ ಊರಿನ ಗ್ರಾಮಸ್ಥರೆಲ್ಲರೂ ಸೇರಿ ದೈವ ಸಾನಿಧ್ಯದಲ್ಲಿ ನಮ್ಮ ಊರಿನ ಯಾವುದೇ ಅಂಗಡಿ, ಮಳಿಗೆ, ಮನೆ, ಕೈಚೀಲ, ಮತ್ತು ಹೊರ ಊರಿನಿಂದ ಅಥವಾ ಬೇರೆ ಯಾವ ವ್ಯಕ್ತಿಯೂ ಹೊರಗಡೆಯಿಂದ ಮದ್ಯವನ್ನು ತಂದು ಈ ಊರಿನಲ್ಲಿ ಮಾರಾಟ ಮಾಡಬಾರದೆಂದು ದೈವ  ನ ಮುಂದೆ ಪ್ರತಿಜ್ಞೆ ಮಾಡಿರುತ್ತಾರೆ. ಅಷ್ಟೇ ಅಲ್ಲದೆ ಇದನ್ನು ಮೀರಿಯೂ ಯಾರಾದರೂ ಅಕ್ರಮ ಮದ್ಯ ಮಾರಾಟ ಮಾಡಿ ಅವರಿಗೆ ಏನಾದರು ದೈವ ನಿಂದ ತೊಂದರೆ ಆದರೆ ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ಪ್ರಮಾಣ ಮಾಡಿರುತ್ತಾರೆ.


ಇಷ್ಟೆಲ್ಲದರ ನಡುವೆ ವಿಶ್ವಾಸ್ ಚಿಕನ್ ಸ್ಟಾಲ್ ನಲ್ಲಿ ಅಕ್ರಮ ಮದ್ಯ ಮಾರಾಟ ಮಾಡಿದ ಹಿನ್ನಲೆಯಲ್ಲಿ ರಮೇಶ್ ( 50 ವರ್ಷ ) ಸಾವನಪ್ಪಿದ್ದಾನೆ.

ಸಾವಿನಲ್ಲೂ ಅನುಮಾನ !?

ರಮೇಶ್ ಎಂಬುವನು ಕಲಾಸಿಪಾಳ್ಯ ಎಂದೇ ಚಿರಪರಿಚಿತನಾಗಿದ್ದು ಈತನ ಸಾವಿನಲ್ಲೂ ಹಲವು ಅನುಮಾನಗಳು ಕಾಣುತ್ತಿವೆ. ಅಕ್ರಮ ಮದ್ಯ ಕುಡಿದ ಎಂಬ ಕಾರಣಕ್ಕೆ ಆತನ ಮೇಲೆ ರಾಡ್ ನಿಂದ ಹಲ್ಲೆ ನೆಡೆಸಿ ಗದ್ದೆಗೆ ಬಿಸಾಕಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದು ಇದು ಮದ್ಯ ಕುಡಿದು ಸಾವನ್ನಪ್ಪಿದ್ದ ಅಥವಾ ಹಲ್ಲೆ ನೆಡೆಸಿ ಸಾಯಿಸಿದ್ದ ಪೊಲೀಸ್ ಇಲಾಖೆಯಿಂದ ತಿಳಿದು ಬರಬೇಕಿದೆ.


ಗೃಹಸಚಿವರ ತವರೂರಿನಲ್ಲೇ ಇಂತಹ ಅಕ್ರಮ ಮದ್ಯ ಮಾರಾಟ ನೆಡೆಯುತ್ತಿದ್ದು ಹಲವು ಅನುಮಾನಗಳಿಗೆ ಎಡಿಮಾಡಿಕೊಟ್ಟಿದೆ.
ಕೊಟ್ರ ಗ್ರಾಮಕ್ಕೆ ಈಗಾಗಲೇ ಸಿಪಿಐ ಅಶ್ವಥ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದು ಅಂಗಡಿಯನ್ನು ಸೀಜ್ ಮಾಡಲಾಗಿದೆ. ಅಂಗಡಿ ಮಾಲೀಕ ವಸಂತ ಎನ್ನುವವನನ್ನು ವಶಕ್ಕೆ ಪಡೆದಿದ್ದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇


Leave a Reply

Your email address will not be published. Required fields are marked *