ಭವ್ಯ ಭಾರತ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಹೆಸರೇ ನಮಗೆ ಸ್ಪೂರ್ತಿಯಾಗಿದೆ ಅಂತಹ ಮಹಾನ್ ವ್ಯಕ್ತಿತ್ವ ಅವರದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಪ್ರಧಾನಿ ಮೋದಿ ಯವರ 72 ನೇ ಹುಟ್ಟುಹಬ್ಬದ ಅಂಗವಾಗಿ ಶಿವಮೊಗ್ಗ ಜಿಲ್ಲಾ ರೈತ ಮೋರ್ಚಾ ಹುಂಚದಲ್ಲಿ ನಡೆಸಿದ್ದ ಜಿಲ್ಲಾ ಮಟ್ಟದ ಪುರುಷರ ವಾಲಿಬಾಲ್ ಪಂದ್ಯಾವಳಿಯ ಯಶಸ್ಸಿನ ಬಗ್ಗೆ ಹುಂಚ ಅಂಬೇಡ್ಕರ್ ಭವನದಲ್ಲಿ ಭಾನುವಾರ ಸಂಜೆ ಜಿಲ್ಲಾ ಬಿಜೆಪಿ ರೈತ ಮೋರ್ಚಾ ದವರು ಅಯೋಜಿಸಿದ್ದ ಅವಲೋಕನ ಸಭೆಯಲ್ಲಿ ಅವರು ಮಾತನಾಡಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಲು ಕಾರ್ಯಕರ್ತರ ಪರಿಶ್ರಮವೇ ಕಾರಣವೆಂದರು.ಯಾವುದೇ ಕಾರ್ಯಕ್ರಮಗಳು ಅಯೋಜಿಸುವ ಮೊದಲು ಮತ್ತು ನಂತರದಲ್ಲಿ ಅಗಿರುವ ಅನಾನುಕೂಲಗಳ ಕುರಿತು ಚರ್ಚಿಸಿ ಮುಂದಿನ ಕಾರ್ಯಕ್ರಮಗಳಲ್ಲಿ ಹೇಗೆ ನಡೆಸಬೇಕು ಎಂಬುದರ ಬಗ್ಗೆ ಜಾಗೃತರಾಗಲು ಅವಲೋಕನ ಸಭೆ ದಾರಿ ದೀಪವೆಂದರು.
ಕಾರ್ಯಕ್ರಮದಲ್ಲಿ ಶ್ರಮಿಸಿದವರೊಂದಿಗೆ ವಿಮರ್ಶೆ ಮಾಡುವುದರಿಂದಾಗಿ ನಮ್ಮಗಳಿಂದಾದ ನ್ಯೂನತೆಗಳನ್ನು ಮುಂದಿನ ಸಭೆ ಸಮಾರಂಭಗಳಲ್ಲಿ ಹೇಗೆ ಅಯೋಜಿಸಬೇಕು ಎಂಬುದರ ಬಗ್ಗೆ ತಿಳಿದುಕೊಂಡತಾಗುವುದು.ಶೂನ್ಯದಿಂದ ಬಿಜೆಪಿ ಪಕ್ಷವನ್ನು ಇಂದು ಅಧಿಕಾರದ ಚುಕ್ಕಾಣಿಯವರೆಗೆ ತರುವಲ್ಲಿ ಶ್ರಮಿಸಿದವರ ಮಾರ್ಗದರ್ಶನ ಇಂದಿನ ಕಾರ್ಯಕರ್ತರಿಗೆ ಸಿಗಬೇಕಾಗಿದೆ.ಸಂಘಟನಾ ಚತುರ ಸಾಲೆಕೊಪ್ಪ ರಾಮಚಂದ್ರರವರು ಈ ಕಾರ್ಯಕ್ರಮದ ರೂವಾರಿಯಾಗಿ ಯಶಸ್ವಿಯಾಗಿ ನಡೆಸಿರುವುದು ಪ್ರಶಂಸೆಗೆ ಕಾರಣವಾಗಿದೆ ಎಂದರು.
ಈ ಸಂಧರ್ಭದಲ್ಲಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಗೃಹ ಸಚಿವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಹೊಸನಗರ ತಾಲ್ಲೂಕ್ ರೈತ ಮೋರ್ಚಾ ಅಧ್ಯಕ್ಷ ನಾಗರಾಜ್ ಅವಲೋಕನ ಸಭೆಯ ಆಧ್ಯಕ್ಷೆ ವಹಿಸಿದ್ದರು.
ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಸಾಲೆಕೊಪ್ಪ ರಾಮಚಂದ್ರ, ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಎಂ.ಬಿ.ಮಂಜುನಾಥ,ಜಿ.ಪಂ.ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್,ತಾ.ಪಂ.ಮಾಜಿ ಸದಸ್ಯ ಕುಕ್ಕೆ ಪ್ರಶಾಂತ್,ಬೆಳ್ಳೂರು ತಿಮ್ಮಪ್ಪ,ವಿಲ್ಸನ್,ಕದೀರೆಶ್ ಭದ್ರಾವತಿ,ಎಸ್.ಕುಮಾರ್ ಭದ್ರಾವತಿ,ಹಾಲೇಶಪ್ಪ ಕೋಡ್ಲಿಗೆರೆ,ಪ್ರಭಾಕರ್,ವಿನಾಯಕ,ಪುರುಷೋತ್ತಮ ಚಿಟ್ಟೆಗದ್ದೆ,ಅರುಣ್‌ನಿಟ್ಟೂರು,ಸಚಿನ್ ಗೌಡ_ಅಭಿಷೇಕ್ ಹುಂಚ ಹಾಗೂ ಇನ್ನಿತರ ಪಕ್ಷದ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.