Headlines

ರಿಪ್ಪನ್‌ಪೇಟೆ : ಶಿವಮಂದಿರದ ಬಳಿ ಬೈಕ್ ಗಳ ನಡುವೆ ಡಿಕ್ಕಿ – ಇಬ್ಬರ ಸ್ಥಿತಿ ಗಂಭೀರ, ಮೆಗ್ಗಾನ್ ಗೆ ದಾಖಲು|Accident

ರಿಪ್ಪನ್‌ಪೇಟೆ : ಇಲ್ಲಿನ ಶಿವಮೊಗ್ಗ ರಸ್ತೆಯ ಶಿವಮಂದಿರದ ಬಳಿ ಎರಡು ಬೈಕ್​ಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.



ಗಾಳಿಬೈಲ್ ನಿವಾಸಿ ಆಸೀಫ಼್ ಮತ್ತು ಮಾದಪುರ ಗ್ರಾಮದ ಪ್ರಶಾಂತ್ ಗಂಭೀರ ಗಾಯಗೊಂಡವರು.


ಗಾಳಿಬೈಲ್ ಗ್ರಾಮದ ಆಸೀಪ್ ಎಂಬುವವನು ಬಜಾಜ್ ಪಲ್ಸರ್(NS) ಬೈಕ್‌ನಲ್ಲಿ ರಿಪ್ಪನ್‌ಪೇಟೆಯಿಂದ ಗಾಳಿಬೈಲ್ ಕಡೆಗೆ ತೆರಳುತಿದ್ದನು, ಮಾದಾಪುರ ಗ್ರಾಮದ ಪ್ರಶಾಂತ್ ಎಂಬುವವನು ಬಜಾಜ್ ಡಿಸ್ಕವರಿ ಬೈಕ್ ನಲ್ಲಿ ಅದೇ ಮಾರ್ಗದಲ್ಲಿ ತೆರಳುತಿದ್ದಾಗ ಆಸೀಫ಼್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ನಡೆದಿದೆ.


ಅಪಘಾತದಲ್ಲಿ ಆಸೀಪ್ ಎಂಬಾತನಿಗೆ ತಲೆಗೆ ಹಾಗೂ ಕಾಲಿಗೆ ಗಂಭೀರ ಗಾಯವಾಗಿದ್ದು,ಪ್ರಶಾಂತ್ ಗೆ ಬೆನ್ನು ,ಸೊಂಟಕ್ಕೆ ಗಂಭೀರ ಗಾಯಗಳಾಗಿರುವುದರಿಂದ ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಲಾಗಿದೆ.



ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

About The Author

Leave a Reply

Your email address will not be published. Required fields are marked *