ರಿಪ್ಪನ್‌ಪೇಟೆಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವಕ್ಕೆ ಭರದ ಸಿದ್ದತೆ : ಕಾರ್ಯಕ್ರಮದ ಅಹ್ವಾನ ಪತ್ರಿಕೆ ಬಿಡುಗಡೆ|Ripponpet

ರಿಪ್ಪನ್‌ಪೇಟೆ ;-ಇಲ್ಲಿನ ಕಸ್ತೂರಿ ಕನ್ನಡ ಸಂಘದ ನವಂಬರ್ 1 ರಂದು 67 ನೇ ಕನ್ನಡ ರಾಜ್ಯೋತ್ಸವ ಮತ್ತು ದಿ.ಪುನಿತ್‌ರಾಜ್ “ಪುಣ್ಯ ಸ್ಮರಣೆ’’ ಕಾರ್ಯಕ್ರಮದ ಅಹ್ವಾನ ಪತ್ರಿಕೆಯ ಬಿಡುಗಡೆಯನ್ನು ಹಿರಿಯ ಸಾಹಿತಿ ಹ.ಅ..ಪಾಟೀಲ್ ಬಿಡುಗಡೆಗೊಳಿಸಿದರು.

ಗ್ರಾಮ ಪಂಚಾಯ್ತಿ ಸಭಾ ಭವನದಲ್ಲಿ ಕಸ್ತೂರಿ ಕನ್ನಡ ಸಂಘದ ಅಹ್ವಾನ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕನ್ನಡ ರಾಜ್ಯೋತ್ಸವ ನವಂಬರ್ ತಿಂಗಳಿಗೆ ಸೀಮಿತಗೊಳ್ಳದೆ ನಿತ್ಯೋತ್ಸವವಾಗಲಿ ಎಂದು ಅಶಿಸಿದರು.




ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷ ಮೆಣಸೆ ಅನಂದ ಅಧ್ಯಕ್ಷತೆ ವಹಿಸಿ ಮಾತನಾಡಿ ಭೂಪಾಳಂ ಚಂದ್ರಶೇಖರಯ್ಯ ಸಭಾ ಭವನದಲ್ಲಿ 67 ನೇ ಕನ್ನಡ ರಾಜ್ಯೋತ್ಸವ ಮತ್ತು ಪುನಿತ್‌ರಾಜ್ ಸ್ಮರಣೆ ಕಾರ್ಯಕ್ರಮ ಅಯೋಜಿಸಲಾಗಿದೆ.
ನವಂಬರ್ 1 ರಂದು ಬೆಳಗ್ಗೆ ತಾಯಿ ಭುವನೇಶ್ವರಿಯ ಅಲಂಕೃತ ಭಾವಚಿತ್ರ ರಾಜಬೀದಿ ಉತ್ಸವಕ್ಕೆ ಸಾಹಿತಿ ಹ.ಅ.ಪಾಟೀಲ ಚಾಲನೆ ನೀಡುವರು.

ರಾಜಬೀದಿ ಉತ್ಸವದ ನಂತರ ಉದ್ಘಾಟನಾ ಸಮಾರಂಭವು ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜ್ ಕನ್ನಡ ವಿಭಾಗದ ಸಹಪ್ರಾಧ್ಯಾಪಕ ಡಾ.ಹಾ.ಮಾ.ನಾಗಾರ್ಜುನ ಉದ್ಘಾಟಿಸುವರು.




ಸಮಾರಂಭದ ಅಧ್ಯಕ್ಷತೆಯನ್ನು ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷ ಮೆಣಸೆ ಅನಂದ ವಹಿಸುವರು.ಈ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತು ಅಡಳಿತ ಮಂಡಳಿ ಸದಸ್ಯರು ಪಾಲ್ಗೊಳಲ್ಲಿದ್ದಾರೆ.

ಸಮಾರೋಪ ಸಮಾರಂಭ;-

ಇದೇ ದಿನ ಸಂಜೆ 5.30 ಕ್ಕೆ ಸಮಾರೋಪ ಸಮಾರಂಭವು ಜರುಗಲಿದ್ದು ಈ ಕಾರ್ಯಕ್ರಮಕ್ಕೆ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ,ಸಮಸದ ಬಿ.ವೈ.ರಾಘವೇಂದ್ರ,ಶಾಸಕ ಹರತಾಳು ಹಾಲಪ್ಪ,ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ  ,ಆರ್ ಎಂ ಮಂಜುನಾಥಗೌಡ,ಕಲಗೋಡು ರತ್ನಾಕರ,ಸುರೇಶ್ ಸ್ವಾಮಿರಾವ್,ಬಂಡಿ ರಾಮಚಂದ್ರ, ಆರ್.ಎ.ಚಾಬುಸಾಬ್ ಇನ್ನಿತರ ಮುಖಂಡರು ಭಾಗವಹಿಸುವರು ಎಂದು ಪ್ರಕಟಣೆಯಲ್ಲಿ ವಿವರಿಸಿದರು.




ಅಹ್ವಾನ ಪತ್ರಿಕೆ ಬಿಡುಗಡೆ ಸಂದರ್ಭದಲ್ಲಿ ಆರ್.ಎ.ಚಾಬುಸಾಬ್,ಧನಲಕ್ಷ್ಮಿ, ಲಕ್ಷ್ಮಿ ಶ್ರೀನಿವಾಸ್,ಶ್ರೀನಿವಾಸ್ ಅಚಾರ್,ಟಿ.ಆರ್.ಕೃಷ್ಣಪ್ಪ, ಜಿ.ಎಸ್.ವರದರಾಜ್,ಕುಕ್ಕಳಲೇಈಶ್ವರಪ್ಪಗೌಡ,ಹಸನಬ್ಬ,ಆರ್.ರಾಘವೇಂದ್ರ,ರಮೇಶ್ ಫ಼್ಯಾನ್ಸಿ,
ಪ್ರಕಾಶಪಾಲೇಕರ್,ಆರ್.ಎನ್.ಮಂಜುನಾಥ,ಜಿ.ಡಿ.ಮಲ್ಲಿಕಾರ್ಜುನ, ಗಣಪತಿಗವಟೂರು, ಚೋಳರಾಜ್,ಬಿಎಸ್‌ಎನ್
ಎಲ್ ಶ್ರೀಧರ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *