ದರ್ಶನ್ ನಂತಹ ನಿಜ ಜೀವನದ ಖಳನಾಯಕನನ್ನು ಸೃಷ್ಟಿಸಿದ ನಾವೇ ತಪ್ಪಿತಸ್ಥರು – ನಟ ಚೇತನ್
ಬೆಂಗಳೂರು : ನಿಜ ಜೀವನದಲ್ಲಿ ನಟ ದರ್ಶನ್ ನಂತಹ ಖಳನಾಯಕನನ್ನು ಸೃಷ್ಠಿಸಿದ ನಾವೇ ತಪ್ಪಿತಸ್ಥರು ಎಂಬುದಾಗಿ ನಟ ಚೇತನ್ ಅಹಿಂದಾ ಅವರು ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿರುವಂತ ಅವರು, ನಟ ದರ್ಶನ ಮತ್ತು ಆತನ ಸಹಚರರ ವಿರುದ್ಧ ಕೊಲೆ ಆರೋಪಗಳು ಗಂಭೀರವಾಗಿವೆ.
ನಮ್ಮ ರಾಜ್ಯ ಪೊಲೀಸರು ಅದಕ್ಕೆ ಅನುಗುಣವಾಗಿ ತನಿಖೆ ನಡೆಸುತ್ತಾರೆ ಎಂದು ನಾವು ನಂಬುತ್ತೇವೆ ಎಂದಿದ್ದಾರೆ.
ಅಲ್ಲದೆ, ಚಲನಚಿತ್ರ ತಾರೆಯರು ಸುಮಾರು ಒಂದು ಶತಮಾನದಿಂದ ಅವರು ಪಡೆದಿರುವ ಜೀವನಕ್ಕಿಂತ ದೊಡ್ಡ ಸ್ಥಾನಮಾನಕ್ಕೆ ಅರ್ಹರಲ್ಲ. ಇಂತಹ ನಿಜ-ಜೀವನದ ಖಳನಾಯಕರನ್ನು ಸೃಷ್ಟಿಸಿದವರು ನಾವು ಒಂದು ಸಮಾಜವಾಗಿ ತಪ್ಪಿತಸ್ಥರು ಎಂಬುದಾಗಿ ತಿಳಿಸಿದ್ದಾರೆ.