ರಿಪ್ಪನ್‌ಪೇಟೆ : ಗ್ರಾಪಂ ಸದಸ್ಯರ ಕಡೆಗಣನೆ ವಿರೋಧಿಸಿ ಕಾಂಗ್ರೆಸ್ ಸದಸ್ಯರ ಪ್ರತಿಭಟನೆ – ಕಾಮಗಾರಿ ಉದ್ಘಾಟನೆಯ ಪ್ಲೆಕ್ಸ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯನ ಫೋಟೋನೂ ಇಲ್ಲ, ಹೆಸರು ಇಲ್ಲ..!!!!!|Ripponpet

ರಿಪ್ಪನ್‌ಪೇಟೆ : ಇಲ್ಲಿನ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗವಟೂರು ವಾರ್ಡ್ ನಲ್ಲಿ ಶನಿವಾರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ನೆರವೇರಿಸಿದ  ಸಂಪರ್ಕ ರಸ್ತೆ ಡಾಂಬರೀಕರಣ ಕಾಮಗಾರಿ ಗುದ್ದಲಿಪೂಜೆಯ ಸಂದರ್ಭದಲ್ಲಿ ವಾರ್ಡ್ ನ ಸದಸ್ಯ ಗಣಪತಿ ಪೋಟೋವನ್ನು ಪ್ಲೆಕ್ಸ್ ನಲ್ಲಿ ಹಾಕದೇ ನಿರ್ಲಕ್ಷಿಸಿದ್ದಾರೆಂದು ಅರೋಪಿಸಿ ಇಂದು ಗ್ರಾಮ ಪಂಚಾಯ್ತಿ ಕಛೇರಿ ಎದುರು ಗಾಂಧಿ ಭಾವಚಿತ್ರವನ್ನಿಟ್ಟುಕೊಂಡು ಕಾಂಗ್ರೆಸ್ ಬೆಂಬಲಿತ ಸದಸ್ಯರು ಪ್ರತಿಭಟನೆ ನಡೆಸಿದರು.

ಗವಟೂರು ವಾರ್ಡ್ ನಲ್ಲಿ ಬಿಜೆಪಿ ಬೆಂಬಲಿತ ಸದಸ್ಯರಾಗಿ ಇಬ್ಬರು, ಓರ್ವ ಕಾಂಗ್ರೆಸ್ ಬೆಂಬಲಿತ ಸದಸ್ಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು ಈ ಕಾಮಗಾರಿ ಉದ್ಘಾಟನೆಯ ಸಮಯದಲ್ಲಿ ಪ್ಲೆಕ್ಸ್ ಅಳವಡಿಕೆಯಲ್ಲಿ ಅವರಿಬ್ಬರ ಭಾವಚಿತ್ರ ಹಾಗೂ ಶಾಸಕರ ಭಾವಚಿತ್ರವನ್ನು ಗ್ರಾಮ ಪಂಚಾಯ್ತಿ ಹೆಸರಿನಲ್ಲಿ ಹಾಕಿ ನನ್ನನ್ನು ಕಡೆಗಣಿಸಿದ್ದಾರೆಂದು ಈ ಬಗ್ಗೆ ಪಿಡಿಓ ಮತ್ತು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಕೇತಾರ್ಜಿರಾವ್ ಕ್ಷಮೆಯಾಚಿಸಬೇಕು ಮತ್ತು ಇನ್ನೂ ಮುಂದೆ ಇಂತಹ ಘಟನೆಗಳು ಅಗದಂತೆ ಎಚ್ಚರ ವಹಿಸಬೇಕು ಎಂದು ಮೌನಪ್ರತಿಭಟನೆಯನ್ನು ನಡೆಸುತ್ತಿರುವುದಾಗಿ ಮಾಧ್ಯಮದವರಿಗೆ  ತಿಳಿಸಿದರು.

 ಗ್ರಾಮ ಪಂಚಾಯಿತಿ ಸದಸ್ಯರಾದ ಗಣಪತಿ, ಡಿ.ಈ.ಮಧುಸೂದನ್,ಧನಲಕ್ಷಿö್ಮ,ಅಶೀಫ್,ಸಾರಾಭಿ,ಪ್ರಕಾಶ್ ಪಾಲೇಕರ್ ಎನ್.ಚಂದ್ರೇಶ್, ಹಾಗೂ ಜನಜಾಗೃತಿ ವೇದಿಕೆ ಅಧ್ಯಕ್ಷ ಟಿ ಆರ್ ಕೃಷ್ಣಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 ಪ್ರತಿಭಟನೆಕಾರರ ಮನವೊಲಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್ ರವರು ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆ ಸಂಭವಿಸಿದ ಹಾಗೆ ಗಮನಹರಿಸುವುದಾಗಿ ತಿಳಿಸಿದರ ಹಿನ್ನೆಲೆಯಲ್ಲಿ ತಮ್ಮ ಪ್ರತಿಭಟನೆಯನ್ನು ಹಿಂತಗೆದುಕೊಂಡರು.

Leave a Reply

Your email address will not be published. Required fields are marked *