Headlines

ಅಕ್ರಮ ಕಸಾಯಿಖಾನೆ ಮೇಲೆ ದಾಳಿ : 8 ಗೋವುಗಳ ರಕ್ಷಣೆ – 7 ಗೋವುಗಳ ದಾರುಣ ಹತ್ಯೆ

ಶಿವಮೊಗ್ಗ ನಗರದ ಸೂಳೆಬೈಲ್​ನ ಸಮೀಪ ಇವತ್ತು ತುಂಗಾನಗರ ಪೊಲೀಸರು ಹಾಗೂ ನಗರಸಭೆ ಅಧಿಕಾರಿಗಳು ಕಸಾಯಿಖಾನೆಯ ಮೇಲೆ ದಾಳಿ ನಡೆಸಿದ್ದಾರೆ. ಗೋಹತ್ಯೆ ನಿಷೇಧದ ನಡುವೆಯು, ಗೋವುಗಳನ್ನು ಮಾಂಸಕ್ಕಾಗಿ ಕೊಂದು ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದ ಬೆನ್ನಲ್ಲೆ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. 




ಸೂಳೆಬೈಲಿನ ಕಸಾಯಿ ಖಾನೆಯೊಂದ ಮೇಲೆ ತುಂಗನಗರ ಪೊಲೀಸರು ಬೆಳ್ಳಂಬೆಳಿಗ್ಗೆನೇ ದಾಳಿ ನಡೆಸಿ 8 ಗೋವುಗಳನ್ನ ರಕ್ಷಿಸಿದ್ದಾರೆ. ಆದರೆ 7 ಗೋವುಗಳ ಕತ್ತು ಸೀಳಿ ಹತ್ಯೆ ಮಾಡಿರುವ ದೃಶ್ಯಗಳು ಲಭ್ಯವಾಗಿವೆ.

ಸೂಳೆಬೈಲಿನ ಅಜೀಜ್ ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿ 7 ಹಸುಗಳನ್ನ ದಾರುಣವಾಗಿ ಹತ್ಯೆ ಮಾಡಲಾಗಿದ್ದು ಉಳಿದ 8 ಗೋವುಗಳನ್ನ ಸಂರಕ್ಷಿಸಲಾಗಿದೆ. ಈ ವೇಳೆ ಅಜೀಜ್ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ.




ಗುಪ್ತಚರ ಮಾಹಿತಿ ಹಿನ್ನಲೆಯಲ್ಲಿ ತುಂಗನಗರ ಪೊಲೀಸ್ ಇನ್ ಸ್ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆದಿದೆ. ದಾಳಿಯಲ್ಲಿ ಗೋವುಗಳ ಕಾಲುಗಳನ್ನ ಕಟ್ಟಿ ಕುತ್ತಿಗೆಯನ್ನ ಸೀಳಿ ಹತ್ಯೆ ಮಾಡಲಾಗಿದೆ. ಹಸುಗಳು ರಕ್ತದ ಮಡುವಿನಲ್ಲಿ ಮಲಗಿರುವ ದೃಶ್ಯ ಲಭ್ಯವಾಗಿವೆ.

8 ಗೋವುಗಳು ಜೀವಂತವಾಗಿ ಪತ್ತೆಯಾಗಿವೆ. ಇವುಗಳನ್ನ ತುಂಗಾ ನಗರ ಪೊಲೀಸರು ರಕ್ಷಿಸಿದ್ದಾರೆ. ಗೋಮಾಂಸ ಮಾರಾಟಕ್ಕೆ ಗೋವುಗಳನ್ನ ಕೊಂದಿರುವುದಾಗಿ ತಿಳಿದು ಬಂದಿದೆ.



Leave a Reply

Your email address will not be published. Required fields are marked *