ರಿಪ್ಪನ್‌ಪೇಟೆ : ದೇಶದಲ್ಲಿ ವಿದ್ಯಾರ್ಜನೆಗೆ ಪ್ರಸ್ತುತ ಸಂಧರ್ಭದಲ್ಲಿ ವಿಫುಲವಾದ ಅವಕಾಶವಿದ್ದು ಅದನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕಾಗಿದೆ,ನಮ್ಮ ದೇಶ ನಾಗಲೋಟದಲ್ಲಿ ಅಭಿವೃದ್ದಿಯತ್ತ ಸಾಗುತ್ತಿದೆ ಎಂದು ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.
ಅವರು ಇಂದು ಪಟ್ಟಣದಲ್ಲಿ 4 ಕೋಟಿ 86 ಲಕ್ಷ ರೂ ವೆಚ್ಚದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ ತಮ್ಮ ಅಧಿಕಾರಾವಧಿಯಲ್ಲಿ ಸಾಗರ ಹೊಸನಗರ ಕ್ಷೇತ್ರದಲ್ಲಿ ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಹಿಂದಿನವರು ಕೈಚೆಲ್ಲಿದ್ದ ಹಲವು ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳು ಈ ಅವಧಿಯಲ್ಲಿ ನಡೆದಿರುವುದು ಜನರ ಕಣ್ಣ ಮುಂದಿದೆ. ನೂರಾರು ನೂತನ ರಸ್ತೆ ನಿರ್ಮಾಣ, ಅಭಿವೃದ್ಧಿ ಕಾರ‍್ಯ ನಡೆಲಾಗಿದೆ. ಕುಡಿಯುವ ನೀರಿಗೆ ವಿಶೇಷ ಯೋಜನೆ ರೂಪುಗೊಂಡಿದೆ. ಬಿಜೆಪಿಯದ್ದು ಡಬಲ್ ಎಂಜಿನ್ ಸರಕಾರವಾಗಿದ್ದು, ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಿದೆ ಎಂದರು.
ಪಟ್ಟಣದಲ್ಲಿ 4.86 ಕೋಟಿ ರೂ ವೆಚ್ಚದಲ್ಲಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಲೋಕಾರ್ಪಣೆ ಮಾಡುತ್ತಿರುವುದ ನನಗೆ ಸಂತಸ ತಂದಿದೆ, ಶೋಷಿತ ,ಹಿಂದುಳಿದವರ ಮಕ್ಕಳ ಶೈಕ್ಷಣಿಕ ಅಭ್ಯುದಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಹಿಂದುಳಿದ ಸಮುದಾಯಗಳನ್ನು ಮುನ್ನೆಲೆಗೆ ತರಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ನಿರ್ದೇಶಕ ಎನ್ ಆರ್ ದೇವಾನಂದ್ ,ಗ್ರಾಪಂ ಅಧ್ಯಕ್ಷೆ ಮಂಜುಳಾ ಕೆ ರಾವ್ ಉಪಾಧ್ಯಕ್ಷೆ ಮಹಾಲಕ್ಷ್ಮಿ ಪ್ರವೀಣ್ ,ಉಪ ತಹಶೀಲ್ದಾರ್ ಹುಚ್ಚರಾಯಪ್ಪ,ಪಿಡಿಓ ಚಂದ್ರಶೇಖರ್ ಹಾಗೂ ಇನ್ನಿತರರಿದ್ದರು.
ಮುಡುಬಾ – ಬೈರಾಪುರ – ಬರುವೆ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ
ಶಿವಮೊಗ್ಗ ರಸ್ತೆಯ ಶಿವಗಂಗಾ ಪೆಟ್ರೋಲ್ ಬಂಕ್ ನಿಂದ ಮುಡುಬ-ಬೈರಾಪುರ-ಬರುವೆ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ 1 ಕೋಟಿ ರೂ ಅನುದಾನ ಬಿಡುಗಡೆಯಾಗಿದ್ದು ಆ ಹಿನ್ನಲೆಯಲ್ಲಿ ಶಾಸಕ ಹರತಾಳು ಹಾಲಪ್ಪ ಭೂಮಿ ಪೂಜೆ ನೆರವೇರಿಸಿದರು.
ನಂತರ 25 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಮುಡುಬ ಶ್ರೀ ಈಶ್ವರ ಗಣಪತಿ ದೇವಸ್ಥಾನದ ನೂತನ ಸಭಾಭವನ ಉದ್ಘಾಟಿಸಿ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ತಮ್ಮಡಿಕೊಪ್ಪ ಸೇತುವೆಗೆ 1 ಕೋಟಿ ಅನುದಾನ
ಅರಸಾಳು ಗ್ರಾ.ಪಂ ವ್ಯಾಪ್ತಿಯ ತಮ್ಮಡಿಕೊಪ್ಪ ಸೇತುವೆ ಸೈಡ್ ವಾಲ್ ಕಾಮಗಾರಿ ಮತ್ತು ಕಿರು ಸೇತುವೆ ನಿರ್ಮಾಣ ಕಾಮಗಾರಿಗೆ ಒಂದು ಕೋಟಿ ಅನುದಾನ ಬಿಡುಗಡೆಯಾಗಿದ್ದು ಈ ಹಿನ್ನಲೆಯಲ್ಲಿ ಶಾಸಕ ಹರತಾಳು ಹಾಲಪ್ಪ ಭೂಮಿ ಪೂಜೆ ನೆರವೇರಿಸಿದರು.
ಅಗ್ನಿ ಅವಘಡಕ್ಕೆ ಕೊಟ್ಟಿಗೆ ಭಸ್ಮ – ಸಾಂತ್ವಾನ
ಗುರುವಾರ ರಾತ್ರಿ ಆಕಸ್ಮಿಕ ಬೆಂಕಿ ಅವಘಡದಿಂದ ಬಾಳೂರು ಗ್ರಾ.ಪಂ, ಹಾಲುಗುಡ್ಡೆ ಗ್ರಾಮದ ಮಾದ್ಲಾರದಿಂಬ ಷಣ್ಮುಖಪ್ಪ ಗೌಡರ ಕೊಟ್ಟಿಗೆ ಹಾನಿಗೊಳಗಾಗಿ ಅಪಾರ ಹಾನಿ ಉಂಟಾಗಿತ್ತು.
ಶಾಸಕ ಹೆಚ್.ಹಾಲಪ್ಪ ನವರು ಇಂದು ಷಣ್ಮುಖಪ್ಪರವರ ಮನೆಗೆ ಭೇಟಿ ನೀಡಿ ಹಾನಿಗೊಳಗಾದ ಕೊಟ್ಟಿಗೆ ವೀಕ್ಷಿಸಿ ವೈಯಕ್ತಿಕ ಧನ ಸಹಾಯ ಮಾಡಿ ಸಾಂತ್ವನ ಹೇಳಿದರು.