Ripponpete | ಎರಡು ಬೈಕ್ ನಡುವೆ ಮುಖಾಮುಖಿ ಡಿಕ್ಕಿ – ಇಬ್ಬರು ಗಂಭೀರ

ಎರಡು ಬೈಕ್ ನಡುವೆ ಮುಖಾಮುಖಿ ಡಿಕ್ಕಿ – ಇಬ್ಬರು ಗಂಭೀರ

ರಿಪ್ಪನ್‌ಪೇಟೆ : ಎರಡು ಬೈಕ್(bike) ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ(accident) ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಸಿದ್ದಪ್ಪನಗುಡಿ ಬಳಿಯಲ್ಲಿ ನಡೆದಿದೆ.


ಬಾಳೂರು(baluru) ಗ್ರಾಪಂ ವ್ಯಾಪ್ತಿಯ ಹಾಲುಗುಡ್ಡೆ ಗ್ರಾಮದ ರಾಮಚಂದ್ರ (24) ಮತ್ತು ಅರುಣ್ ಕುಮಾರ್ (30) ಗಂಭೀರ ಗಾಯಗೊಂಡಿದ್ದಾರೆ.

ನಡೆದಿದ್ದೇನು..!?

ಸಿದ್ದಪ್ಪನಗುಡಿ – ಕೆಂಚನಾಲ(Kenchanala) ರಸ್ತೆಯಲ್ಲಿ ಬಜಾಜ್ ಪಲ್ಸರ್ ಬೈಕ್ ಹಾಗೂ ರಾಯಲ್ Enfield ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.

ಅಪಘಾತದಲ್ಲಿ ಪಲ್ಸರ್ ಬೈಕ್ ನಲ್ಲಿದ್ದ ರಾಮಚಂದ್ರ ಮತ್ತು ಅರುಣ್ ಕುಮಾರ್ ಕಾಲು ಮುರಿತವಾಗಿದೆ. ರಾಯಲ್ Enfield ಬೈಕ್ ನಲ್ಲಿದ್ದ
ಕಲ್ಲೂರು ಗ್ರಾಮದ ಅಭಿಷೇಕ್ ಎಂಬಾತನಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದುಬಂದಿದೆ.

ಗಾಯಾಳುಗಳಿ ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ರವಾನಿಸಲಾಗಿದೆ.

ಕೆಂಚನಾಲ ಮಾರಿಕಾಂಬಾ ಜಾತ್ರೆಗೆ ತೆರಳಿ ಹಿಂದಿರುಗುತ್ತಿರುವಾಗ ಈ ಅಪಘಾತ ನಡೆದಿದೆ.