ನವಜಾತ ಶಿಶುವನ್ನು ತೋಟದಲ್ಲಿ ಎಸೆದುಹೋದ ಪಾಪಿ ತಾಯಿ..!! | crime news
ರಾಜ್ಯದ ಹಲವೆಡೆ ಭ್ರೂಣ ಹತ್ಯೆ ಪ್ರಕರಣಗಳು ಸದ್ದು ಮಾಡುತ್ತಿರುವ ಬೆನ್ನಲ್ಲೇ ಶಿವಮೊಗ್ಗ ತಾಲ್ಲೂಕಿನ ಹೊಳಲೂರು ಮುಖ್ಯ ರಸ್ತೆಯ ತೋಟದಲ್ಲಿ ಗುರುವಾರ ಬೆಳಗ್ಗೆ ನವಜಾತ ಗಂಡು ಶಿಶುವಿನ ಮೃತದೇಹ ಪತ್ತೆಯಾಗಿದೆ.
ಆಗಷ್ಟೇ ಜನಿಸಿದ ಶಿಶುವನ್ನು ತಾಯಿ ಅಲ್ಲೇ ಬಿಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಶಿಶುವನ್ನು ಮರಣೋತ್ತರ ಪರೀಕ್ಷೆಗೆ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಹೊಳಲೂರಿನಿಂದ ಹೊಳೆಹೊಟ್ಟಿಗೆ ಹೋಗುವ ಮಾರ್ಗದಲ್ಲಿ ಇರುವಂತಹ ವೆಲ್ಡಿಂಗ್ ಶಾಪ್ ಎದುರು ಬಯಲಿನ ಜಾಗದಲ್ಲಿ ಶಿಶು ದೇಹ ಪತ್ತೆಯಾಗಿದೆ. ಅನೈತಿಕ ಸಂಬಂಧಕ್ಕೆ ಜನಿಸಿದ್ದೋ ಅಥವಾ ಬೇರೆ ಯಾವ ಕಾರಣಕ್ಕೆ ಶಿಶುವನ್ನು ಬಿಸಾಡಿ ಹೋಗಿದ್ದಾರೋ ತಿಳಿದಿಲ್ಲ. ಒಂಬತ್ತು 9 ತಿಂಗಳು ತುಂಬಿರದ ಶಿಶುವಿನ ಮೃತದೇಹ ಪತ್ತೆಯಾಗಿದ್ದ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಸ್ಥಳೀಯರು ಬೆಳಗ್ಗೆ ಮಗುವಿನ ಮೃತದೇಹ ಬಿದ್ದಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.