ರಿಪ್ಪನ್ಪೇಟೆ : ಇಲ್ಲಿನ ಸಮೀಪದ ಮೂಗೂಡ್ತಿ ಗ್ರಾಮದಲ್ಲಿ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿದ್ದು ಜಾನವಾರಿಗೆ ಬಳಸಲೆಂದು ಸಂಗ್ರಹಿಸಿಟ್ಟಿದ್ದ ಹುಲ್ಲು ಮತ್ತು ಶೇಖರಿಸಿಟ್ಟಿದ್ದ ಒಣ ಅಡಿಕೆ ಬೆಂಕಿಗೆ ಆಹುತಿಯಾಗಿದೆ.
ಮೂಗೂಡ್ತಿ ಗ್ರಾಮದ ಕೃಷಿಕ ರುದ್ರಪ್ಪ ಗೌಡ ಎಂ ಡಿ ಎಂಬುವವರಿಗೆ ಸೇರಿದ ಕೊಟ್ಟಿಗೆಯಲ್ಲಿ ಇಂದು ಸಂಜೆ ಬೆಂಕಿ ಕಾಣಿಸಿಕೊಂಡಿದೆ.ತಕ್ಷಣ ಸ್ಥಳೀಯರ ಸಹಕಾರದಿಂದ ಜಾನುವಾರುಗಳನ್ನು ಹೊರತೆಗೆಯಲಾಯಿತು.ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಸ್ಥಳಕ್ಕಾಗಿಸಿ ಕಾರ್ಯಾಚರಣೆ ನಡೆಸುತಿದ್ದಾರೆ.
ಕೊಟ್ಟಿಗೆಯಲ್ಲಿದ್ದ ಒಣ ಹುಲ್ಲು ಹಾಗೂ ಲಕ್ಷಾಂತರ ರೂ ಮೌಲ್ಯದ ಶೇಖರಿಸಿಟ್ಟಿದ್ದ ಗೋಟು ಅಡಿಕೆ ಬೆಂಕಿಗೆ ಅಹುತಿಯಾಗಿದೆ ಎನ್ನಲಾಗುತ್ತಿದೆ.
ಅಗ್ನಿಶಾಮಕ ದಳದವರ ಹಾಗೂ ಸ್ಥಳೀಯರ ಸೂಕ್ತ ಕಾರ್ಯಾಚರಣೆಯಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದ್ದು, ಮನೆಗೆ ಬೆಂಕಿ ತಗುಲಿ ಸಂಭವಿಸಬಹುದಾದಂತಹ ಹೆಚ್ಚಿನ ಅನಾಹುತ ತಪ್ಪಿದೆ.