Headlines

ಚೋರಡಿಯ ಬಳಿ ಎರಡು ಬಸ್ಸುಗಳ ನಡುವೆ ಭೀಕರ ಅಪಘಾತ – 8 ರಿಂದ ಹತ್ತು ಮಂದಿ ಸಾವನ್ನಪ್ಪಿರುವ ಶಂಕೆ

ಶಿವಮೊಗ್ಗ – ಸಾಗರ ಹೆದ್ದಾರಿಯ ಚೋರಡಿ ಬಳಿಯಲ್ಲಿ ಕೆಲವು ಎರಡು ಬಸ್ಸುಗಳ ನಡುವೆ ಭೀಕರ ಅಪಘಾತ ಸಂಭವಿಸಿ ಸಾವು ನೋವುಗಳು ಸಂಭವಿಸಿವೆ ಎನ್ನಲಾಗುತ್ತಿದೆ.




ಬಲ್ಲ ಮೂಲಗಳ ಪ್ರಕಾರ 8 ರಿಂದ 10 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ.ಅನೇಕ ಮಂದಿಗೆ ಗಂಭೀರ ಗಾಯಗಳಾಗಿರುವ ಮಾಹಿತಿ ಇದೆ.

ಶಿಕಾರಿಪುರದಿಂದ ಶಿವಮೊಗ್ಗಕ್ಕೆ ತೆರಳುತಿದ್ದ ಬಸ್ಸು ಹಾಗೂ ಶಿಕಾರಿಪುರದಿಂದ (ಹಿತ್ಲ ಕಲ್ಮನೆ ಮಾರ್ಗ) ಶಿವಮೊಗ್ಗಕ್ಕೆ ತೆರಳುತಿದ್ದ ಎರಡು ಬಸ್ ಗಳ ನಡುವೆ ಡಿಕ್ಕಿಯಾಗಿದೆ.




ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಿಂದ 5 ಅಂಬ್ಯುಲೆನ್ಸ್ ಗಳು ಮತ್ತು ಅಗ್ನಿಶಾಮಕ ದಳ ಧಾವಿಸಿದೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

 ಕುಂಸಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ.



Leave a Reply

Your email address will not be published. Required fields are marked *