Headlines

ಮಕ್ಕಳಿಗೆ ಸಿಹಿ ನೀಡುವ ಮೂಲಕ ಮೇ 31ರಿಂದ ಶಾಲೆ ಆರಂಭ: ಸಚಿವ ಮಧು ಬಂಗಾರಪ್ಪ


ರಾಜ್ಯದ 2023-24 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲೆ ಮೇ 31 ರಿಂದ ಆರಂಭವಾಗಲಿದ್ದು, ಮಕ್ಕಳಿಗೆ ಸಿಹಿ ನೀಡುವ ಮೂಲಕ ಮೇ 31 ರಿಂದ ಆರಂಭವಾಗಲಿದೆ. ಈ ಬಗ್ಗೆ ಪ್ರಾಥಮಿಕ ಮತ್ತು ಫ್ರೌಢ ಶಿಕ್ಷಣ ಇಲಾಖೆ ನೂತನ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.

ಮಧು ಬಂಗಾರಪ್ಪ ಅವರು ಶಾಲಾ ಆರಂಭದ ಬಗ್ಗೆ ಫೇಸ್‌ ಬುಕ್‌ ನಲ್ಲಿ ಪೋಸ್ಟ್ ಹಾಕಿ, ಶುಭಾಶಯ ತಿಳಿಸಿದ್ದಾರೆ.

ಶಾಲೆಯಲ್ಲಿ ಪೂರಕ ಸಿದ್ಧತೆಗಳು ಇಂದಿನಿಂದಲೇ ಆರಂಭಗೊಂಡಿವೆ. ಆರೋಗ್ಯಕರ ವಾತಾವರಣದಲ್ಲಿ ಖುಷಿಯ ಕಲಿಕೆ ನಿಮ್ಮದಾಗಲಿ. ಮಾದರಿ ಶಿಕ್ಷಣ ವ್ಯವಸ್ಥೆಗೆ ಶಿಕ್ಷಕರ, ಪೋಷಕರ ಹಾಗೂ ಕನ್ನಡಿಗರ ಸಹಕಾರವಿರಲಿ ಎಂದು ಮಧು ಬಂಗಾರಪ್ಪ ಫೇಸ್‌ಬುಕ್‌ ಫೋಸ್ಟ್ ಹಾಕಿದ್ದಾರೆ.

About The Author

Leave a Reply

Your email address will not be published. Required fields are marked *