ಹೊಂಬುಜ : ಹಿರಿಯ ರಾಜಕಾರಣಿ, ಶಿವಮೊಗ್ಗ ನಗರದ ಜನಪ್ರೀಯ ಮಾಜಿ ಶಾಸಕರು ಹಾಗೂ ಕರ್ನಾಟಕ ಘನ ಸರ್ಕಾರದ ಮಾಜಿ ಉಪ ಮುಖ್ಯಮಂತ್ರಿಗಳಾದ ಕೆ.ಎಸ್. ಈಶ್ವರಪ್ಪರವರಿಗೆ 75ನೇ ಜನ್ಮ ದಿನಾಚರಣೆಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಹೊಂಬುಜ ಜೈನ ಮಠದ ಪೀಠಾಧಿಕಾರಿಗಳಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಇವರ ಸೇವೆಗಾಗಿ ಅಭಿನಂದಿಸಿ, “ಸಮಾಜಭೂಷಣ” ಉಪಾಧಿಯನ್ನು ನೀಡಿ ಗೌರವಿಸಿ, ಶ್ರೀಕ್ಷೇತ್ರ ಹೊಂಬುಜದ ಭಗವಾನ ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಶ್ರೀ ಪದ್ಮಾವತಿ ಅಮ್ಮನವರ ಅನುಗ್ರಹ ಸದಾ ನಿಮ್ಮ ಮೇಲಿರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅವರ ಕುಟುಂಬಸ್ಥರು ಹಾಗೂ ಶಿವಮೊಗ್ಗದ ಆಶ್ರಯ ಸಮಿತಿಯ ಸದಸ್ಯರಾದ ಯಶೋಧರ ಹೆಗ್ಡೆ, ದಿಗಂಬರ ಜೈನ ಸಮಾಜದ ಅಧ್ಯಕ್ಷರಾದ ಪ್ರಭಾಕರ ಗೋಗಿ ಹಾಗೂ ಸರ್ವಸದಸ್ಯರು, ಕೆ.ಜೆ.ಎ. ನಿರ್ದೇಶಕರಾದ ಶಿವಮೊಗ್ಗದ ರತ್ನಕುಮಾರ್ ಜೈನ್ರವರು ಉಪಸ್ಥಿತರಿದ್ದರು.
ಪರಮಪೂಜ್ಯ ಶ್ರೀಗಳವರಿಗೆ ಕುಟುಂಬಸ್ಥರು ಸನ್ಮಾನಿಸಿ ಗೌರವ ಸಮರ್ಪಿಸಿದರು.