ಶಿವಮೊಗ್ಗ : ಸಾಗರ ರಸ್ತೆಯ ಪೆಸಿಟ್ ಕಾಲೇಜಿನ ಬಳಿ ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಲಾರಿ ಡಿವೈಡರ್ ಗೆ ಡಿಕ್ಕಿ ಒಡೆದಿದೆ. ಲಾರಿಯ ಮುಂಭಾಗ ನುಜ್ಜುಗುಜ್ಜಾಗಿದೆ
ಶಿವಮೊಗ್ಗ ಕಡೆ ಹೊರಟಿದ್ದ ಲಾರಿ ಮತ್ತು ಆಯನೂರು ಕಡೆ ಹೊರಟಿದ್ದ ಲಾರಿ ಎರಡೂ ಮುಖಾಮುಖಿ ಡಿಕ್ಕಿ ಉಂಟಾಗಿದೆ. ಶಿವಮೊಗ್ಗದಿಂದ ಆಯನೂರು ಕಡೆ ಹೋಗುತ್ತಿದ್ದ ಕಾರು ಲಾರಿಯನ್ನ ಓವರ್ ಟೇಕ್ ಮಾಡುವ ವೇಳೆಯಲ್ಲಿ ಲಾರಿಗಳ ಚಾಲಕರಿಗೆ ಲಾರಿ ಚಾಲನೆಯ ನಿಯಂತ್ರಣ ತಪ್ಪಿದೆ. ಎರಡು ಲಾರಿ ಡಿಕ್ಕಿ ಹೊಡೆದಿದೆ. ಈ ಸಂಧರ್ಭದಲ್ಲಿ ಒಂದು ಲಾರಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ.
ಲಾರಿ ಚಾಲಕ ಸಂಮೃದ್ದ್ ಎಂಬಾತನ ಕೈ ಮುರಿದಿದೆ. ಆತನನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ.
ತುಂಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.