ಗ್ಯಾರಂಟಿ ಯೋಜನೆಯ ನೋಂದಣಿಗೆ ಫಲಾನುಭವಿಗಳಿಂದ ಭರ್ಜರಿ ಸುಲಿಗೆ – ಒಂದು ಅರ್ಜಿಗೆ 50 ರಿಂದ 100 ರೂ ಶುಲ್ಕ….!!! ಅಧಿಕಾರಿಗಳ ದಿವ್ಯ ಮೌನ
ಹೊಸನಗರ : ರಾಜ್ಯದ ಕಾಂಗ್ರೆಸ್ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಲಾದ ಐದು ಗ್ಯಾರಂಟಿ ಯೋಜನೆಯಡಿ ಗೃಹ ಜ್ಯೋತಿ ಕಾರ್ಡ್ ನೋಂದಣಿಗೆ ಗ್ರಾಮ ಒನ್ ಮತ್ತು ಸೇವಾಸಿಂಧು ಗಳಿಗೆ ನೀಡುವ ಮೂಲಕ ಉಚಿತ ನೋಂದಣಿಯೆಂದು ಹೇಳಲಾಗಿದ್ದರೂ ಕೂಡಾ ಹೊಸನಗರ ತಾಲ್ಲೂಕಿನ ಕೆಲವು ಸೇವಾಸಿಂಧು ಮತ್ತು ಗ್ರಾಮ ಒನ್ ಕೇಂದ್ರದಲ್ಲಿ ಫಲಾನುಭವಿಗಳಿಂದ ಮನಸ್ಸಿಗೆ ಬಂದಂತೆ 50,100 ರೂಗಳನ್ನು ಸುಲಿಗೆ ಮಾಡುತ್ತಿದ್ದಾರೆಂದು ಸಾರ್ವಜನಿಕರು ಆರೋಪಿಸುತಿದ್ದಾರೆ.
ಇಂದು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಈ ರೀತಿಯಲ್ಲಿ ಸರ್ಕಾರದ ಗ್ರಾಮ ಒನ್ ಮತ್ತು ಸೇವಾಸಿಂಧು ಸೇವಾ ಕೇಂದ್ರದಲ್ಲಿ ಗ್ಯಾರಂಟಿ ಕಾರ್ಡ್ ಯೋಜನೆಗೆ ಫಲಾನುಭವಿಗಳಿಂದ ಹಣ ವಸೂಲಾತಿ ಮಾಡುತ್ತಿದ್ದಾರೆಂದು ದೂರು ಬಂದರೆ ಅಂತಹ ಕೇಂದ್ರದ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದರೊಂದಿಗೆ ಪರವಾನಿಗೆ ರದ್ದು ಮಾಡುವುದಾಗಿ ಎಚ್ಚರಿಕೆಯನ್ನು ಸಹ ನೀಡಲಾಗಿದ್ದರೂ ಕೂಡಾ ಹೊಸನಗರ ತಾಲ್ಲೂಕ್ ವ್ಯಾಪ್ತಿಯ ಹಲವು ಗ್ರಾಮ ಒನ್ ಮತ್ತು ಸೇವಾಸಿಂಧು ಕೇಂದ್ರಗಳಲ್ಲಿ ಫಲಾನುಭವಿಗಳನ್ನು ಸುಲಿಗೆ ಮಾಡುತ್ತಿದ್ದಾರೆಂದು ಸಾರ್ವಜನಿಕರು ಆರೋಪಿಸುತಿದ್ದಾರೆ.
ಒಂದು ಕಡೆಯಲ್ಲಿ ಸರ್ವರ್ ಸಮಸ್ಯೆ ಇನ್ನೊಂದು ಕಡೆಯಲ್ಲಿ ಸರ್ಕಾರದ ಐದು ಗ್ಯಾರಂಟಿ ಯೋಜನೆಯಡಿಯಲ್ಲಿ ಫಲಾನುಭವಿಗಳಿಂದ ಭರ್ಜರಿ ಸುಲಿಗೆ ಒಂದು ಗ್ಯಾರಂಟಿ ಯೋಜನೆಗೆ ಬರೋಬರಿ 100 ಹಣ ವಸೂಲಾತಿ ನಡೆಯುತ್ತಿದ್ದರೂ ಕೂಡಾ ತಾಲ್ಲೂಕ್ ಮಟ್ಟದ ಅಧಿಕಾರಿ ವರ್ಗ ಕಣ್ಣಿದು…………..! ಕಿವಿಯಿದ್ದು…………………!
ಜಾಣ ಕುರುಡರಂತಾಗಿ ಮೌನಕ್ಕೆ ಶರಣಾಗಿದ್ದಾರೆ.
ಇನ್ನಾದರೂ ಜನಪ್ರತಿನಿಧಿಗಳು ಮತ್ತು ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳು ತಹಶೀಲ್ದಾರ್ ಉಪತಹಶೀಲ್ದಾರ್ ಇವರು ತಾಲ್ಲೂಕ್ ವ್ಯಾಪ್ತಿಯಲ್ಲಿನ ಗ್ರಾಮ ಒನ್ ಮತ್ತು ಸೇವಾಸಿಂಧು ಕೇಂದ್ರದಲ್ಲಿ ನಡೆಯುತ್ತಿರುವ ಸುಲಿಗೆ ದಂದೆಗೆ ಕಡಿವಾಣ ಹಾಕುವರೇ ಕಾದು ನೋಡಬೇಕಾಗಿದೆ.
ಒಟ್ಟಾರೆಯಾಗಿ ಸರ್ಕಾರದ ಇಂತಹ ಜನಹಿತ ಕಾರ್ಯಕ್ರಮಗಳ ಹೆಸರಿನಲ್ಲಿ “ಹುಚ್ಚುಮುಂಡೆ ಮದುವೆಯಲ್ಲಿ ಉಂಡವನೇ ಜಾಣ ಎಂಬಂತೆ ಮಧ್ಯವರ್ತಿಗಳ ಜೊತೆ ಹೋದರೆ 50 ರೂ ನೇರವಾಗಿ ಹೋದ ಫಲಾನುಭವಿಗೆ 100 ರೂ ಹೀಗೆ ಬ್ರೋಕರ್ ಗಳಿಗೂ ಶುಕ್ರದಸೆ ಆರಂಭವಾದಂತಾಗಿದೆ ಎನ್ನಲಾಗಿದೆ