ಕೆಟ್ಟು ನಿಂತಿದ್ದ ಖಾಸಗಿ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಗೆಗೆ ಬಸ್ ಸುಟ್ಟು ಹೋಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಆನಂದಪುರ ಬಳಿ ಘಟನೆ ಸಂಭವಿಸಿದೆ. ಖಾಸಗಿ ಬಸ್ ಕೆಟ್ಟು ರಸ್ತೆ ಬದಿ ನಿಂತಿತ್ತು. ಇವತ್ತು ರಿಪೇರಿ ಕೆಲಸ ನಡೆಯುತ್ತಿತ್ತು.
ಈ ವೇಳೆ ಆಕಸ್ಮಿಕವಾಗಿ ಬೆಂಕಿ ಹೊತ್ತುಕೊಂಡಿದೆ ಎಂದು ಹೇಳಲಾಗುತ್ತಿದೆ. ಬೆಂಕಿಯಿಂದಾಗಿ ದಟ್ಟ ಹೊಗೆ ಆವರಿಸಿಕೊಂಡಿದೆ.
ಕಳೆದ ಎರಡು ದಿನಗಳಿಂದ ಸಾಗರದ ಗಜಾನನ ಸಾರಿಗೆ ಬಸ್ ಆನಂದಪುರದ ರೈಲ್ವೆ ಗೇಟ್ ಹತ್ತಿರ ಕೆಟ್ಟು ನಿಂತಿತ್ತು.ಸೋಮವಾರ ಬೆಳಗಿನ ಜಾವ ಬಸ್ಸಿನಲ್ಲಿ ಏಕಾಎಕಿ ಬೆಂಕಿ ಕಾಣಿಸಿಕೊಂಡಿದೆ.ನೋಡ ನೋಡುತ್ತಿದ್ದಂತೆ ಬೆಂಕಿಯೂ ಅಬ್ಬರ ಜಾಸ್ತಿಯಾಗಿ ಬಸ್ಸು ಭಾಗಶಃ ಹಾನಿಯಾಗಿದೆ.
ಬಸ್ಸಿನಲ್ಲಿ ಚಾಲಕ,ನಿರ್ವಾಹಕರು ರಾತ್ರಿ ವೇಳೆ ಮಲಗಿ ಬೆಳಗಿನ ಜಾವ ಚಾ ಕುಡಿಯಲು ಹೋಗಿದ್ದಾಗ ಈ ಘಟನೆ ನಡೆದಿದೆ.
ಈ ಕುರಿತು ಆನಂದಪುರ ಪೋಲಿಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ಗಜಾನನ ಸಾರಿಗೆ ಸಂಸ್ಥೆಯ ಆಡಳಿತ ಮಂಡಳಿ ತಿಳಿಸಿದೆ.