ರೈಲಿಗೆ ತಲೆವೊಡ್ಡಿ ನಿವೃತ್ತ ಉಪನ್ಯಾಸಕ ಆತ್ಮಹತ್ಯೆ|train

ಶಿವಮೊಗ್ಗ : ಇಲ್ಲಿನ ವಿನೋಬ ನಗರದ  2ನೇ ಹಂತದ ಡೆಡ್ ಎಂಡ್‌ನಲ್ಲಿರುವ ರೈಲ್ವೆ ಟ್ರ್ಯಾಕ್ ಬಳಿ ನಿವೃತ್ತ ಉಪನ್ಯಾಸಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಡಿವಿಎಸ್ ಕಾಲೇಜಿನ ನಿವೃತ್ತ ಉಪನ್ಯಾಸಕ ವಿಶ್ವನಾಥ್‌ (70)  ಮೃತ ದುರ್ದೈವಿ.

ಡಿವಿಎಸ್ ಇಂಡಿಪೆಂಡೆಂಟ್ ಕಾಲೇಜಿನ ಫಿಸಿಕಲ್ ಡೈರೆಕ್ಟರ್ ಆಗಿದ್ದ ವಿಶ್ವನಾಥ್ ಅವರು 2013 ರಲ್ಲಿ ಉಪನ್ಯಾಸಕ ಹುದ್ದೆಯಿಂದ ನಿವೃತ್ತರಾಗಿದ್ದರು. ಸಾಲದಿಂದ ಬೇಸತ್ತು ರೈಲಿಗೆ ತಲೆವೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಶ್ವನಾಥ್ ಅವರು ಬೆಂಗಳೂರಿನ ಮಗನ ಮನೆಯಿಂದ ಮೊನ್ನೆ ವಾಪಸ್ಸಾಗಿದ್ದರು. ನಂತರ ಸಹೋದರಿಯೊಂದಿಗೆ ಬೇಸರದಿಂದ ಮಾತನಾಡಿದ್ದರು ಎನ್ನಲಾಗಿದೆ. ಇಂದು ಬೆಳಗ್ಗೆ ವಾಕಿಂಗ್‌ಗೆಂದು ಹೊರ ಹೋಗಿದ್ದ ವಿಶ್ವನಾಥ್‌, ತಾಳಗುಪ್ಪ ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಮೂರು ಭಾಗವಾಗಿ ದೇಹ ಬಿದ್ದಿದ್ದು, ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ರೈಲ್ವೆ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿದೆ.

Leave a Reply

Your email address will not be published. Required fields are marked *