ಸರ್ಕಾರದ ಮುಂಗಡ ಪತ್ರದ ಕಾರ್ಯಕ್ರಮಗಳು ಅವಶ್ಯಕತೆ ಇರುವ ಪ್ರತಿಯೊಬ್ಬರಿಗೂ ತಲುಪಬೇಕು -ಡಾ|| ಧನಂಜಯ ಕೆ .ಬಿ.
ರಿಪ್ಪನ್ಪೇಟೆ : ಸರ್ಕಾರದ ಮುಂಗಡ ಪತ್ರದ ಕಾರ್ಯಕ್ರಮಗಳು ಅವಶ್ಯಕತೆ ಇರುವ ಪ್ರತಿಯೊಬ್ಬರಿಗೂ ತಲುಪಬೇಕು ಎಂದು ಎನ್. ಆರ್. ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ|| ಧನಂಜಯ ಕೆ .ಬಿ
ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜು, ರಿಪ್ಪನ್ ಪೇಟೆಯ ಅರ್ಥಶಾಸ್ತ್ರ ವೇದಿಕೆ ಹಾಗೂ ಐಕ್ಯೂಎಸಿ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶೇಷ ಉಪನ್ಯಾಸ “ಕರ್ನಾಟಕ ರಾಜ್ಯ ಮುಂಗಡ ಪತ್ರ- 2023-24 ವಿಶ್ಲೇಷಣೆ” ಕಾರ್ಯಕ್ರಮದಲ್ಲಿ ಮುಂಗಡ ಪತ್ರದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಅರ್ಥಶಾಸ್ತ್ರದ ವಿದ್ಯಾರ್ಥಿಗಳಿಗೆ ಮುಂಗಡ ಪತ್ರದ ಪರಿಪೂರ್ಣ ಜ್ಞಾನವಿರಬೇಕು.ಉತ್ತಮ ಮುಂಗಡ ಪತ್ರ ಮಂಡಿಸಿದಾಗ ಉತ್ತಮ ಆಡಳಿತವನ್ನು ಜನರಿಗೆ ನೀಡಲು ಸಾಧ್ಯವೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ. ಟಿ. ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಡಾ. ಎಚ್. ಎಸ್. ವಿರೂಪಾಕ್ಷಪ್ಪ, ರಜನಿಕಾಂತ್, ಹರ್ಷ ಕುಮಾರ್ ಕೆ. ಆರ್, ಹರೀಶ್ ಕೆ.ಎಂ. ಮುಂತಾದವರು ಉಪಸ್ಥಿತರಿದ್ದರು.