ಹೆದ್ದಾರಿಪುರ ಗ್ರಾ.ಪಂ.ಅಧ್ಯಕ್ಷರಾಗಿ ವಿನಂತಿ ರಾಘವೇಂದ್ರ ಉಪಾಧ್ಯಕ್ಷರಾಗಿ ವನಿತಾ ಗಂಗಾಧರ್ ಆಯ್ಕೆ
ರಿಪ್ಪನ್‌ಪೇಟೆ;-ಸಮೀಪದ ಹೆದ್ದಾರಿಪುರ ಗ್ರಾಮ ಪಂಚಾಯ್ತಿನ ಎರಡನೇ ಅವಧಿಗೆ ನಡೆದ ಅಧ್ಯಕ್ಷ ಉಪಾಧ್ಯಕ್ಷೆ ಚುನಾವಣೆಯಲ್ಲಿ ಆಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯ ವಿನಂತಿ ರಾಘವೇಂದ್ರ ಉಪಾಧ್ಯಕ್ಷರಾಗಿ ವನಿತಾ ಗಂಗಾಧರ್ ಆಯ್ಕೆಯಾಗಿದ್ದಾರೆ.
15 ಸದಸ್ಯರನ್ನು ಹೊಂದಿರುವ ಹೆದ್ದಾರಿಪುರ ಗ್ರಾಮ ಪಂಚಾಯ್ತಿಯಲ್ಲಿ ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯ ವಿನಂತಿ ರಾಘವೇಂದ್ರ 08 ಮತಗಳನ್ನು ಪಡೆದರೆ ಉಪಾಧ್ಯಕ್ಷೆ ಸ್ಥಾನಕ್ಕೆ ಸ್ಪರ್ಧಿಸಿದ್ದ ವನಿತಾ ಗಂಗಾಧರ್ ಕ್ರಮವಾಗಿ 09 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಕಾಂಗ್ರೆಸ್ ಮುಖಂಡರಾದ ಕಲಗೋಡು ರತ್ನಾಕರ್, ಬಿ ಪಿ ರಾಮಚಂದ್ರ ,ಪ್ರವೀಣ್ ಸುಳುಗೋಡು ಹಾಗೂ ಇನ್ನಿತರರು ಶುಭಾಶಯ ಕೋರಿದರು.