w
Headlines
Home » ಹೊಸನಗರ, ಸಾಗರ ತಾಲೂಕುಗಳೂ ಬರಪೀಡಿತ ಪಟ್ಟಿಗೆ ಸೇರ್ಪಡೆ: ಸರ್ಕಾರದ ಆದೇಶಕ್ಕೆ ಜೆಡಿಎಸ್ ಸ್ವಾಗತ

ಹೊಸನಗರ, ಸಾಗರ ತಾಲೂಕುಗಳೂ ಬರಪೀಡಿತ ಪಟ್ಟಿಗೆ ಸೇರ್ಪಡೆ: ಸರ್ಕಾರದ ಆದೇಶಕ್ಕೆ ಜೆಡಿಎಸ್ ಸ್ವಾಗತ

Screenshot 2026 10 14 21 34 50 937 com.openai.chatgpt edit

ಹೊಸನಗರ, ಸಾಗರ ತಾಲೂಕುಗಳೂ ಬರಪೀಡಿತ ಪಟ್ಟಿಗೆ ಸೇರ್ಪಡೆ: ಸರ್ಕಾರದ ಆದೇಶಕ್ಕೆ ಜೆಡಿಎಸ್ ಸ್ವಾಗತ | Karnataka government adds Hosanagara and Sagara taluks to the drought-affected list for the 2026 monsoon season. Hosanagara JD(S) welcomes the decision.

ಹೊಸನಗರ: 2026ರ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯ ಹಿನ್ನೆಲೆಯಲ್ಲಿ ಹೊಸನಗರ ಮತ್ತು ಸಾಗರ ತಾಲೂಕುಗಳನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಇದರಿಂದ ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕುಗಳು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಯಾದಂತಾಗಿದೆ.

ಸರ್ಕಾರದ ಈ ನಿರ್ಧಾರವನ್ನು ಹೊಸನಗರ ತಾಲೂಕು ಜೆಡಿಎಸ್ ಸ್ವಾಗತಿಸಿದೆ. ಶಿವಮೊಗ್ಗ ಜಿಲ್ಲೆಯ ಐದು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ, ಹೊಸನಗರ ಮತ್ತು ಸಾಗರ ತಾಲೂಕುಗಳನ್ನು ಪಟ್ಟಿಯಿಂದ ಕೈಬಿಟ್ಟಿದ್ದ ಹಿನ್ನೆಲೆಯಲ್ಲಿ ತಾಲೂಕು ಜೆಡಿಎಸ್ ವತಿಯಿಂದ ಹೊಸನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು.

ಇದೀಗ ಸರ್ಕಾರ ಎರಡೂ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆಗೊಳಿಸಿರುವುದರಿಂದ ತಾಲೂಕಿನ ರೈತರ ಪರವಾಗಿ ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಸಚಿವ ಆರಗ ಜ್ಞಾನೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಆರ್.ಎ. ಚಾಬುಸಾಬ್ ಮತ್ತು ತಾಲೂಕು ಅಧ್ಯಕ್ಷ ಎನ್. ವರ್ತೇಶ್ ತಿಳಿಸಿದ್ದಾರೆ.

ಮಳೆ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸರ್ಕಾರದ ಈ ನಿರ್ಧಾರದಿಂದ ಬರ ಪರಿಹಾರ ಸೇರಿದಂತೆ ಅಗತ್ಯ ನೆರವು ದೊರೆಯುವ ನಿರೀಕ್ಷೆಯಿದೆ.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಎಂ ವಿ ಜಯರಾಂ , ಹಾಲಪ್ಪಗೌಡ, ಷಣ್ಮುಖ, ಕೆ.ಆರ್. ವಿಶ್ವನಾಥ್, ರಾಜೇಂದ್ರಗೌಡ, ಸುಮತಿ ಪೂಜಾರಿ, ಉಮೇಶ್, ಚಂದ್ರಣ್ಣ, ಫಾರೂಕ್, ಮಲ್ಲೇಶ್, ವೀರಪ್ಪ ಕಲ್ಲುಗುಡ್ಡೆ, ವಿಶ್ವನಾಥ್, ರಘು ಪೂಜಾರಿ, ಕಾಯಿ ನಾಗೇಶ್, ಹಾಲುಗುಡ್ಡೆ ಹರೀಶ್, ಆನೆಗದ್ದೆ ವೀರೇಶ್, ಮಲ್ಲೇಶಪ್ಪ, ದೇವರಾಜ, ನಟರಾಜ್ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.