ಜೀರೋ ಟ್ರಾಫಿಕ್ ನಲ್ಲಿ ಒಂದು ದಿನದ ಮಗುವನ್ನು ದಾವಣಗೆರೆಯಿಂದ ಶಿವಮೊಗ್ಗಕ್ಕೆ ಶಿಫ್ಟ್|zero traffic

ಜೀರೋ ಟ್ರಾಫಿಕ್ ನಲ್ಲಿ ಒಂದು ದಿನದ ಮಗುವನ್ನು ದಾವಣಗೆರೆಯಿಂದ ಶಿವಮೊಗ್ಗಕ್ಕೆ ಶಿಫ್ಟ್

ಶಿವಮೊಗ್ಗ ; ಹುಟ್ಟಿದ ಒಂದು ದಿನದ ಮಗುವನ್ನು ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ದಾವಣಗೆಯಿಂದ ಶಿವಮೊಗ್ಗಕ್ಕೆ ಸ್ಥಳಾಂತರಿಸಲಾಗಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಮಗುವನ್ನು ದಾವಣಗೆರೆಯ ಚಿಟಗೇರಿ ಆಸ್ಪತ್ರೆಯಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ವಿಶೇಷ ಆ್ಯಂಬುಲೆನ್ಸ್ ನೊಂದಿಗೆ ಮಗುವಿನ ರವಾನೆಗೆ, ಟ್ರಾಫಿಕ್​ ಪೊಲೀಸರು ಹಾಗೂ ಆ್ಯಂಬುಲೆನ್ಸ್​ ಚಾಲಕರು ಸಾಥ್ ನೀಡಿದ್ದಾರೆ. 

ಹಾಲೇಶ್ ದಂಪತಿಯ ಮಗು ಹುಟ್ಟುವಾಗಲೆ ಅನಾರೋಗ್ಯದಿಂದ ಬಳಲಿದೆ. ಈ ಹಿನ್ನೆಲೆಯಲ್ಲಿ ಆ ಮಗುವಿಗೆ ಹೆಚ್ಚಿನ ಚಿಕಿತ್ಸೆ ಒದಗಿಸಲು ಶಿವಮೊಗ್ಗ ಆಸ್ಪತ್ರೆಗೆ ಶಿಫ್ಟ್  ಮಾಡುವ ಅನಿವಾರ್ಯ ಎದುರಾಗಿತ್ತು. 

ಈ ಹಿನ್ನೆಲೆಯಲ್ಲಿ ಎರಡು ಜಿಲ್ಲೆಯ ಪೊಲೀಸರ ಸಹಾಯ ಪಡೆದು ಆ್ಯಂಬುಲೆನ್ಸ್​ನಲ್ಲಿ ಮಗುವನ್ನು ಶಿವಮೊಗ್ಗ ಏಂಜೆಲ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಮಗುವಿಗೆ ವಿಶೇಷ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದ್ದಾರೆ. 

Leave a Reply

Your email address will not be published. Required fields are marked *