ರಿಪ್ಪನ್‌ಪೇಟೆಯ ಪೆಟ್ರೋಲ್ ಬಂಕ್ ನಲ್ಲಿ ನಡೆದಿದ್ದೇನು… ?? ವೈರಲ್ ವೀಡಿಯೋನ ಸತ್ಯಾಸತ್ಯತೆಯೇನು..!!?? ಈ ಸುದ್ದಿ ನೋಡಿ
ರಿಪ್ಪನ್‌ಪೇಟೆ : ಪಟ್ಟಣದ ತೀರ್ಥಹಳ್ಳಿ ರಸ್ತೆಯಲ್ಲಿರುವ ಶ್ರೀ ಗಣೇಶ್ ಪೆಟ್ರೋಲ್ ಬಂಕ್ ನಲ್ಲಿ ಮೋಸ ನಡೆದಿದೆ ಎಂಬ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಘಟನೆ ನಡೆದಿದೆ.
ವೈರಲ್ ವೀಡಿಯೋದಲ್ಲೇನಿದೆ …!!?
ಪಟ್ಟಣದ ತೀರ್ಥಹಳ್ಳಿ ರಸ್ತೆಯ ಶ್ರೀ ಗಣೇಶ್ ಪೆಟ್ರೋಲ್ ಬಂಕ್ ನಲ್ಲಿ ಕಾರ್ತಿಕ್ ಎಂಬ ಯುವಕ ಮಂಗಳವಾರ ರಾತ್ರಿ ತನ್ನ ಬೈಕ್ ಗೆ 100 ರೂ ಪೆಟ್ರೋಲ್ ಹಾಕಿಸಿಕೊಂಡು ಕೇವಲ ಎರಡು ಕಿಮೀ ಕ್ರಮಿಸುವುದರೊಳಗೆ ಪೆಟ್ರೋಲ್ ಖಾಲಿಯಾಗಿ ನಿಂತು ಬಂಕ್ ನ ಕಾರ್ಯತತ್ಪರತೆಯ ಬಗ್ಗೆ ಅನುಮಾನಗೊಂಡು ಬುಧವಾರ ಬಂದು ಬಂಕ್ ವ್ಯವಸ್ಥಾಪಕರಲ್ಲಿ ವಿಚಾರಿಸಿದಾಗ ಅವರು ಉಡಾಫೆ ಉತ್ತರ ಕೊಟ್ಟಿದ್ದಾರೆ ಎಂದು ತನ್ನ INSTAGRAM ಖಾತೆಯಲ್ಲಿ ವೀಡಿಯೋವೊಂದನ್ನು ಅಪ್ಲೋಡ್ ಮಾಡಿದ್ದನು.
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಕ್ರಾಂತಿ ಎಬ್ಬಿಸಿದ್ದು ವಾಟ್ಸಾಪ್ , ಫೇಸ್ಬುಕ್ ಹಾಗೂ ಇನ್ನಿತರ ಜಾಲತಾಣದಲ್ಲಿ ಹರಿದಾಡಿದೆ.
ನಡೆದಿದ್ದೇನು..!!!????
ನಿಯಾಮವಳಿಗಳ ಪ್ರಕಾರ ಪ್ರತಿಯೊಂದು ಪೆಟ್ರೋಲ್ ಬಂಕ್ ನಲ್ಲಿಯೂ ಎಲ್ಲ ವ್ಯವಹಾರಗಳನ್ನು ಪಾರದರ್ಶಕವಾಗಿಡುವ ಉದ್ದೇಶದಿಂದ ಗ್ರಾಹಕ ಪೆಟ್ರೋಲ್ ಅಥವಾ ಡಿಸೇಲ್ ಹಾಕಿಸಿದ ನಂತರ ಅನುಮಾನವಿದ್ದರೆ ಬಂಕ್ ನಲ್ಲಿರುವ ರೀಡಿಂಗ್ ನ್ನು ನೋಡಬಹುದು ಈ ವ್ಯವಸ್ಥೆಯನ್ನು ಮಾಲೀಕರು ಕಲ್ಪಿಸಿಕೊಡಬೇಕು ಆದರೆ ರಿಪ್ಪನ್‌ಪೇಟೆಯ ಶ್ರೀ ಗಣೇಶ್ ಪೆಟ್ರೋಲ್ ಬಂಕ್ ಇತ್ತೀಚೆಗೆ ಪ್ರಾರಂಭವಾಗಿದ್ದರಿಂದ ಆಟೋಮೆಟಿಕ್ ವ್ಯವಸ್ಥೆ ಕಲ್ಪಿಸಲಾಗಿದೆ. ಮ್ಯಾನ್ಯುಯಲ್ ರೀಡಿಂಗ್ ನೋಡಬೇಕಾದರೆ 14 transaction ಒಳಗೆ ನೋಡಬೇಕಾಗಿರುತ್ತದೆ.
ಆದರೆ ಈ ಪ್ರಕರಣದಲ್ಲಿ ಆರೋಪವೆಸಗಿರುವ ಕಾರ್ತಿಕ್ ಪೆಟ್ರೋಲ್ ಹಾಕಿಸಿಕೊಂಡು 30 ಗಂಟೆಗಳ ನಂತರ ಬಂಕ್ ನಲ್ಲಿ ಬಂದು ವಿಚಾರಿಸಿದ್ದಾನೆ ಈ ಸಂಧರ್ಭದಲ್ಲಿ ಬಂಕ್ ನ ವ್ಯವಸ್ಥಾಪಕ ಉಡಾಫೆಯಾಗಿ ಉತ್ತರಿಸಿರುವುದು ಕಾರ್ತಿಕ್ ನನ್ನು ಕೆರಳಿಸಿದೆ ಈ ಹಿನ್ನಲೆಯಲ್ಲಿ ತನ್ನ Instagram ಖಾತೆಯಲ್ಲಿ ವೀಡಿಯೋವನ್ನು ಹಂಚಿಕೊಂಡಿದ್ದಾನೆ..
ಘಟನೆ ಬಗ್ಗೆ ಕಾರ್ತಿಕ್ ಹೇಳುವುದೇನು…!???
ಪಟ್ಟಣದ ತೀರ್ಥಹಳ್ಳಿ ರಸ್ತೆಯ ಶ್ರೀ ಗಣೇಶ್ ಪೆಟ್ರೋಲ್ ಬಂಕ್ ನಲ್ಲಿ ಮಂಗಳವಾರ ರಾತ್ರಿ 100 ಪೆಟ್ರೋಲ್ ಹಾಕಿಸಿಕೊಂಡು ಕೇವಲ 2 ಕಿಮೀ ಹೋಗುವಷ್ಟರಲ್ಲಿ ಪೆಟ್ರೋಲ್ ಖಾಲಿಯಾಗಿತ್ತು ನಂತರ ಬೈಕನ್ನು ತಳ್ಳಿಕೊಂಡು ಹೋಗಿ ಬೇರೆ ಕಡೆ ಪೆಟ್ರೋಲ್ ಹಾಕಿಸಿಕೊಂಡು ಮನೆಗೆ ಹೋಗುವ ಪರಿಸ್ಥಿತಿ ಬಂದಿತ್ತು ಮಾರನೇ ದಿನ ಮನೆ ಬಳಿಯಲ್ಲಿ ಕೆಲಸವಿದ್ದಿದ್ದರಿಂದ ಸಂಜೆ ಪೆಟ್ರೋಲ್ ಬಂಕ್ ಗೆ ಹೋಗಿ ವಿಚಾರಿಸಿದಾಗ ಬಂಕ್ ನ ವ್ಯವಸ್ಥಾಪಕರು ಸರಿಯಾಗಿ ಸ್ಪಂದಿಸಲಿಲ್ಲ ಹೀಗಾಗಿ ನನ್ನ Instagram ಖಾತೆಯಲ್ಲಿ ವೀಡಿಯೋ ಹಂಚಿಕೊಂಡಿದ್ದೇನೆ ಎನ್ನುತ್ತಾನೆ.
ಘಟನೆ ಬಗ್ಗೆ ಮಾಲೀಕರ ನಿಲುವೇನು..!????
MRPL ಬಂಕ್ ಅತ್ಯುತ್ತಮ ಹೆಸರು ಪಡೆದ ಕಂಪನಿಯಾಗಿದ್ದು ನಮ್ಮಲ್ಲಿ ಎಲ್ಲಾ ವ್ಯವಹಾರಗಳು ಪಾರದರ್ಶಕವಾಗಿರುತ್ತದೆ. ನಮ್ಮಲ್ಲಿ ಆಟೋಮೆಟಿಕ್ ರೀಡಿಂಗ್ ವ್ಯವಸ್ಥೆ ಇದ್ದು ಆ ಪ್ರಕಾರ ಕೇವಲ 14 Transaction ಮಾತ್ರ ಸಿಗುತ್ತದೆ ಆದರೆ ಗ್ರಾಹಕ ಕಾರ್ತಿಕ್ ರವರು 30 ಗಂಟೆಗಳ ನಂತರ ಬಂದ ಹಿನ್ನಲೆಯಲ್ಲಿ ಅವರಿ ರೀಡಿಂಗ್ ತೋರಿಸಲು ಸಾಧ್ಯವಾಗಿಲ್ಲ ಆದರೂ ಕಂಪನಿ ಕಡೆಯಿಂದ ಪಿಡಿಎಫ್ ಮೂಲಕ ರೀಡಿಂಗ್ ನ್ನು ತೋರಿಸಿದ್ದೇವೆ. ನಮ್ಮಲ್ಲಿ ಯಾವುದೇ ರೀತಿಯಾಗಿ ಗ್ರಾಹಕರಿಗೆ ಮೋಸವಾಗುವಂತಹ ವ್ಯವಸ್ತ್ಗೆ ಇಲ್ಲಾ ಎನ್ನುತ್ತಾರೆ.
ಒಟ್ಟಾರೆಯಾಗಿ ವೈರಲ್ ಆಗಿರುವ ವೀಡಿಯೋದಲ್ಲಿ ಇರುವ ಯುವಕನ ಆರೋಪದ ಪ್ರಕಾರ ಆತನ ಬೈಕ್ ಗೆ ಪೆಟ್ರೋಲ್ ಹಾಕದೇ ಮೋಸ ಮಾಡಿರುವ ಬಗ್ಗೆ ಯಾವುದೇ ನಿಖರ ಸಾಕ್ಷ್ಯಾಧಾರಗಳು ಇಲ್ಲದೇ ಇದ್ದರೂ ವೈರಲ್ ವೀಡಿಯೋದಲ್ಲಿ ಕಾಣಿಸಿರುವ ಪೆಟ್ರೋಲ್ ಬಂಕ್ ವ್ಯವಸ್ಥಾಪಕರ ಬೇಜವಬ್ದಾರಿ ಹೇಳಿಕೆ ರಾಜ್ಯಾದ್ಯಂತ ಉತ್ತಮ ಹೆಸರನ್ನು ಪಡೆದಿರುವ MRPL ಪೆಟ್ರೋಲ್ ಬಂಕ್ ನ ಕಾರ್ಯಕ್ಷಮತೆಯ ಬಗ್ಗೆ ಅನುಮಾನ ಹುಟ್ಟಿಸುವಂತಿದೆ.ಈ ಪ್ರಕರಣ ನ್ಯಾಯಲಯದ ಮೆಟ್ಟಿಲೇರುವ ಸಾಧ್ಯತೆಯಿದ್ದು ಮುಂದಿನ ತನಿಖೆಯಾಗುವರೆಗೂ ಕಾದುನೋಡಬೇಕಾಗಿದೆ.