Headlines

ಶಾಸಕ ಬೇಳೂರು ಬಹಿರಂಗ ಕ್ಷಮೆಯಾಚನೆಗೆ ತಾಲೂಕ್ ವೀರಶೈವ ಲಿಂಗಾಯಿತ ಮಹಾಸಭಾ ಆಗ್ರಹ|rpet

ರಿಪ್ಪನ್‌ಪೇಟೆ : ಸಾಗರ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ರವರು ನಮ್ಮ ಸಮಾಜದ ಹಿರಿಯರಾದ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮತ್ತು ಅಖಿಲ ಭಾರತ ರಾಷ್ಟ್ರೀಯ ವೀರಶೈವ ಲಿಂಗಾಯಿತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ರವರ ಬಗ್ಗೆ ಹಗುರವಾಗಿ ಮಾತಾನಾಡಿರುವುದನ್ನ ಹೊಸನಗರ ತಾಲ್ಲೂಕು ಅಖಿಲಭಾರತ ವೀರಶೈವ ಮಹಾಸಭಾ ಘಟಕ ಖಂಡಿಸುತ್ತದೆ ಎಂದು ತಾಲ್ಲೂಕು ಘಟಕದ ಅಧ್ಯಕ್ಷರಾದ ಮಲ್ಲಿಕಾರ್ಜುನ್ ತಿಳಿಸಿದ್ದಾರೆ. 

ಪಟ್ಟಣದ ಕುವೆಂಪು ಸಭಾಂಗಣದಲ್ಲಿ ಪತ್ರೀಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಹೇಳಿಕೆಯಲ್ಲಿ ತಿಳಿಸಿದ ಬಿ.ಎಸ್.ಯಡಿಯೂರಪ್ಪನವರು ನಾಲ್ಕು ಬಾರಿ ಈ ರಾಜ್ಯದ ಮುಖ್ಯಮಂತ್ರಿಯಾಗಿ ಎಲ್ಲಾ ವರ್ಗದ ಜನರ ಒಳಿತಿಗಾಗಿ ಜನಪರ ಯೋಜನೆಗಳನ್ನ ನೀಡುವುದರ ಮೂಲಕ ತನ್ನದೇ ಆದ ಕೊಡುಗೆಯನ್ನು ಈ ರಾಜ್ಯಕ್ಕೆ ನೀಡಿದ್ದಾರೆ. ವಿಶೇಷವಾಗಿ ಜಿಲ್ಲೆಯ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನ ನೀಡಿದ್ದಾರೆ. ಇವರು ಯಾವುದೇ ಜಾತಿಯ ವ್ಯವಸ್ಥೆಯಲ್ಲಿ ರಾಜಕರಣ ಮಾಡದೇ ಸರ್ವರಿಗೂ ಸಮ ಬಾಳು ಸರ್ವರಿಗೂ ಸಮ ಪಾಲು ರೀತಿಯಲ್ಲಿ ಆಡಳಿತವನ್ನು ನೀಡಿದ್ದಾರೆ, ಇವರು ರೈತಪರ ಹೋರಾಟ ನಡೆಸುತ್ತಾ ಬಂದ ಇವರು ಈ ದೇಶದಲ್ಲಿಯೇ ಪ್ರತ್ಯೇಕ ಕೃಷಿ ಬಜೆಟ್ ಮಂಡನೆ ಮಾಡುವ ಮೂಲಕ ಕೃಷಿ ಕ್ರಾಂತಿಗೆ ಮುನ್ನುಡಿ ಬರೆದ, ಇಂತಹ ಮಹಾನ್ ನಾಯಕನ ಬಗ್ಗೆ ಶಾಸಕರಾದ ಗೋಪಾಲಕೃಷ್ಣ ಬೇಳೂರುರವರು ಆಡಿರುವ ಮಾತು ನಮ್ಮ ಮನಸ್ಸಿಗೆ ನೋವು ತಂದಿದೆ.

ಶಾಮನೂರು ಶಿವಶಂಕರಪ್ಪನವರು ಒಂದು ಸಮಾಜದ ಅಧ್ಯಕ್ಷರಾಗಿ ಸಮಾಜದ ಅಧಿಕಾರಿಗಳ ಸಂಕಷ್ಟದ ಬಗ್ಗೆ ಹೇಳಿರುವುದಕ್ಕೆ ಬಿಎಸ್ ವೈ ಸಹಮತ ವ್ಯಕ್ತಪಡಿಸಿ ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕೆಂದು ಕೇಳಿದ್ದರು ಅಷ್ಟೇ ಅದಕ್ಕೆ ಶಾಸಕರ ಈ ರೀತಿಯ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ,ಯಡಿಯೂರಪ್ಪನವರಿಗೆ ಮಾನ ಮರ್ಯಾದೆ ಇಲ್ಲ ಎಂದು ಹೇಳುವ ಶಾಸಕರು ಹಿಂದಿನದನ್ನು ಮರೆತಿದ್ದಾರೆ,ಹತ್ತು ವರ್ಷ ಶಾಸಕರಾಗಿದ್ದ ಅವರು ನಮ್ಮ ಸಮಾಜದ ಬೆಂಬಲವನ್ನು ಮರೆತಿದ್ದಾರೆ.ಕೂಡಲೇ ಇಂತಹ ಬೇಜವಾಬ್ದಾರಿ ಹೇಳಿಕೆಗೆ ಸಾರ್ವಜನಿಕವಾಗಿ ಶಾಸಕ ಬೇಳೂರು ಕ್ಷಮೆ ಯಾಚಿಸಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ನಂತರ ಮಾತನಾಡಿದ ಸೋಮಶೇಖರ್ (ರಾಜು ದೂನ ) ಶಾಸಕ ಬೇಳೂರು ಗೋಪಾಲಕೃಷ್ಣ ಯಡಿಯೂರಪ್ಪ ನವರಿಂದ ಎಲ್ಲವನ್ನೂ ಪಡೆದು ಈಗ ಅವರ ವಿರುದ್ದ ಆಧಾರ ರಹಿತವಾಗಿ ಶಾಸಕ ಬೇಳೂರು ಆರೋಪ ಮಾಡುತಿದ್ದು,ವೀರಶೈವ ಸಮಾಜ ಎಂದಿಗೂ ಭಿಕ್ಷೆ  ಕೊಟ್ಟಿರುವ ಸಮಾಜವೇ ಹೊರತು ಭಿಕ್ಷೆ ಬೇಡಿದ ಸಮಾಜವಲ್ಲ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ವೀರಶೈವ ಲಿಂಗಾಯತ ಮಹಾಸಭಾ ಹೊಸನಗರ ತಾಲ್ಲೂಕು ಘಟಕದ ಜೆ.ಎಂ.ಶಾಂತಕುಮಾರ್, ಬೆನವಳ್ಳಿ ಮಹೇಂದ್ರಗೌಡ, ಬಿ.ಬಿ.ಶಾಂತಪ್ಪಗೌಡ, ತಾಲ್ಲೂಕು ಯುವಘಟಕದ ಅಧ್ಯಕ್ಷ ಹೆಚ್.ಆರ್.ತೀರ್ಥೇಶ್, ಎಸ್.ಪಿ.ಧರ್ಮರಾಜ್‌ ರಿಪ್ಪನ್‌ಪೇಟೆ ಹಾಜರಿದ್ದರು.

Leave a Reply

Your email address will not be published. Required fields are marked *