Headlines

ನಿಲ್ಲಿಸಿದ್ದ ಲಾರಿಗೆ ಕಾರು ಡಿಕ್ಕಿ – ಓರ್ವ ಸಾವು , ಮೂವರು ಗಂಭೀರ!

ನಿಲ್ಲಿಸಿದ್ದ ಲಾರಿಗೆ ಕಾರು ಡಿಕ್ಕಿ – ಓರ್ವ ಸಾವು , ಮೂವರಿಗೆ ಗಾಯ

ನಿಶ್ಚಿತಾರ್ಥದ ಫೋಟೋಶೂಟಿಂಗ್ ಕೆಲಸಕ್ಕಾಗಿ ನಾಲ್ವರು ಕ್ರೆಟಾ ಕಾರಿನಲ್ಲಿ ಹೋಗುವಾಗ ನಿಲ್ಲಿಸಿದ್ದ ಲಾರಿಗೆ ಕಾರು ಡಿಕ್ಕಿಯಾದ ಪರಿಣಾಮ ಕಾರಿನ ಮುಂದಿನ ಭಾಗ ಸಂಪೂರ್ಣ ಜಖಂಗೊಂಡಿದ್ದು, ಚಾಲಕ ಅರ್ಜುನ್ ಎಂಬಾತನಿಗೆ ಗಂಭೀರವಾಗಿ ಗಾಯವಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದ್ದಷ್ಟರಲ್ಲಿ ಮೃತಪಟ್ಟಿದ್ದಾರೆ.

ಬಳ್ಳಾರಿಯಲ್ಲಿ ನಡೆಯಲಿದ್ದ ನಿಶ್ಚಿತಾರ್ಥ ಕಾರ್ಯಕ್ರಮದ ಫೋಟೋ ಶೂಟಿಂಗ್‌ಗೆ ತೆರಳುತ್ತಿದ್ದ ಶಿವಮೊಗ್ಗದ ಯುವಕರ ಕಾರು ಚಳ್ಳಕೆರೆ ಹತ್ತಿರ ನಿಲ್ಲಿಸಿದ್ದ ಲಾರಿಗೆ ಡಿಕ್ಕಿಯಾಗಿದ್ದು, ಘಟನೆದಲ್ಲಿ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗುರುವಾರ ಮುಂಜಾನೆ ನಡೆದಿದೆ.

ಶಿವಮೊಗ್ಗದ ಎಲ್‌ಬಿಎಸ್ ನಗರದ ಮೂಲದ 37 ವರ್ಷದ ಅರ್ಜುನ್ ಮೃತಪಟ್ಟ ದುರ್ದೈವಿಗಳು. ಶರತ್, ಬಸವರಾಜ್ ಮತ್ತು ನವೀನ್ ಗಾಯಗೊಂಡಿದ್ದು, ಒಬ್ಬರನ್ನು ಚಳ್ಳಕೆರೆ ಸರ್ಕಾರಿ ಆಸ್ಪತ್ರೆಗೆ ಹಾಗೂ ಇನ್ನಿಬ್ಬರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರಿಗೂ ಪ್ರಾಣಾಪಾಯ ತಪ್ಪಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ.

ನಿಶ್ಚಿತಾರ್ಥದ ಫೋಟೋಶೂಟಿಂಗ್ ಕೆಲಸಕ್ಕಾಗಿ ನಾಲ್ವರು ಕ್ರೆಟಾ ಕಾರಿನಲ್ಲಿ ಬಳ್ಳಾರಿಯ ಕಡೆ ಹೊರಟಿದ್ದರು. ಚಳ್ಳಕೆರೆ ಸಮೀಪ ನಿಲ್ಲಿಸಿದ್ದ ಲಾರಿಗೆ ಕಾರು ಡಿಕ್ಕಿಯಾದ ಪರಿಣಾಮ ಕಾರಿನ ಮುಂದಿಭಾಗ ಸಂಪೂರ್ಣ ಜಖಂಗೊಂಡಿದ್ದು, ಚಾಲಕನಾಗಿದ್ದ ಅರ್ಜುನ್ ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಚಿತ್ರದುರ್ಗ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದ್ದಷ್ಟರಲ್ಲಿ ಅವರು ಮೃತಪಟ್ಟರು.

ಘಟನೆಯ ನಂತರ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.