POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಹೊಸನಗರ | ಬಸ್ಸು ಡಿಕ್ಕಿಯಾಗಿ ಪ್ರಪಾತಕ್ಕೆ ಉರುಳಿದ ಕಾರು – ಓರ್ವ ಸಾವು – ಮೂವರಿಗೆ ಗಾಯ

GridArt 20251020 100048452 wm

ಹೊಸನಗರ | ಬಸ್ಸು ಡಿಕ್ಕಿಯಾಗಿ ಪ್ರಪಾತಕ್ಕೆ ಉರುಳಿದ ಕಾರು – ಓರ್ವ ಸಾವು – ಮೂವರಿಗೆ ಗಾಯ

Car falls into ravine after hitting bus – one dead, three injured

ಶಿವಮೊಗ್ಗ : ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸಿಗೆ ಡಿಕ್ಕಿಯಾಗಿ ಹಿನ್ನೀರಿನ ಪ್ರಪಾತಕ್ಕೆ ಕಾರು ಉರುಳಿಬಿದ್ದ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟು ಮೂವರು ಗಂಭೀರ ಗಾಯಗೊಂಡಿರುವ ಘಟನೆ ಹೊಸನಗರ ತಾಲೂಕಿನ ನಿಟ್ಟೂರು ಸಮೀಪದ ಮಂಡೋಡಿ ಎಂಬುವಲ್ಲಿ ನಡೆದಿದೆ.

ಕಾರು ಚಲಾಯಿಸುತ್ತಿದ್ದ ಮಂಡೋಡಿ ಗ್ರಾಮದ  ಹರಿ ಭಟ್ ( 76) ಮೃತಪಟ್ಟಿರುವ ದುರ್ಧೈವಿಯಾಗಿದ್ದಾರೆ.

ಮೃತರ  ಪತ್ನಿ ಕಮಲಾಕ್ಷಿ, ಸುಜಾತಾ ಮತ್ತು ಲೀಲಾವತಿ ಎಂಬುವವರ ಜೊತೆಗೆ ಕಾರಿನಲ್ಲಿ ಹೊಸನಗರ ತಾಲೂಕಿನ ನಿಟ್ಟೂರಿನಿಂದ ಮತ್ತಿಕೈ ಗ್ರಾಮಕ್ಕೆ ತೆರಳುತ್ತಿದ್ದಾಗ ಶಿವಮೊಗ್ಗದಿಂದ ಸಿಗಂದೂರಿಗೆ ತೆರಳುತಿದ್ದ ಭಾಗ್ಯಲಕ್ಷ್ಮಿ ಬಸ್ ಗೆ ಡಿಕ್ಕಿಯಾದ ಪರಿಣಾಮ ಈ ದುರ್ಘಟನೆ ನಡೆದಿದೆ.

ನಿಟ್ಟೂರು – ನಾಗೋಡಿ ಸಮೀಪದ ಮಡೋಡಿ ಗ್ರಾಮದ ಬಳಿ ಹರಿ ಭಟ್‌ ಅವರು ಚಲಾಯಿಸುತ್ತಿದ್ದ ಕಾರು ಭಾಗ್ಯಲಕ್ಷ್ಮಿ ಬಸ್ಸಿನ ಮಧ್ಯ ಭಾಗಕ್ಕೆ ಡಿಕ್ಕಿಯಾಗಿದೆ. ಈ ವೇಳೆ ನಿಯಂತ್ರಣ ತಪ್ಪಿ ಶರಾವತಿ ಹಿನ್ನೀರಿನತ್ತ ಸಾಗಿ ಹಲವು ಬಾರಿ ಪಲ್ಟಿಯಾಗಿದೆ. ಈ ಸಂದರ್ಭ ಹರಿ ಭಟ್‌ ಅವರಿಗೆ ಗಂಭೀರ ಗಾಯವಾಗಿತ್ತು. ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕೊನೆಯುಸಿರೆಳೆದಿದ್ದರು ಎಂದು ತಿಳಿದು ಬಂದಿದೆ.

ಪತ್ನಿ ಕಮಲಾಕ್ಷಿ, ಸುಜಾತಾ ಮತ್ತು ಲೀಲಾವತಿ ಅವರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.