ಮದುವೆಗೆ ಒಪ್ಪದ ಪ್ರೇಯಸಿ – ಭದ್ರಾ ಕಾಲುವೆಗೆ ತಳ್ಳಿ ಪ್ರಿಯಕರನಿಂದಲೇ ಪ್ರೇಯಸಿಯ ಕೊಲೆ!
ಮದುವೆ ವಿಚಾರವಾಗಿ ಪ್ರೇಮಿಗಳ ನಡುವೆ ಗಲಾಟೆ ನಡೆದಿದೆ. ಈ ವೇಳೆ ಭದ್ರಾ ಕಾಲುವೆಗೆ ಪ್ರೇಯಸಿಯನ್ನು ತಳ್ಳಿ ಪ್ರಿಯಕರ ಹತ್ಯೆಗೈಯ್ದಿದ್ದಾನೆ. ಮೋಸದಿಂದ ಪ್ರಿಯತಮೆಯನ್ನು ಕರೆದೋಯ್ದು ಕೊಲೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಯಕ್ಕುಂದದಲ್ಲಿ ನಡೆದಿದೆ.
ನಿನ್ನೆ ಭದ್ರಾ ಕಾಲುವೆಯಲ್ಲಿ ಯುವತಿ ಸ್ವಾತೀ ಶವ ಪತ್ತೆಯಾಗಿದೆ. ತೆರೇನಹಳ್ಳಿಯ ಸ್ವಾತಿ ಹಾಗೂ ಸೂರ್ಯ ನಡುವೆ ಪ್ರೇಮಾಂಕುರವಾಗಿತ್ತು. ಇಬ್ಬರ ಮದುವೆಗೆ ಯುವತಿ ಸ್ವಾತಿ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ವಿರೋಧ ಇದ್ದರೂ ಕೂಡ ಸ್ವಾತಿಗೆ ಮದುವೆಯಾಗಲು ಸೂರ್ಯ ಕಾಟ ಕೊಟ್ಟಿದ್ದಾನೇ. ಸೆಪ್ಟೆಂಬರ್ 21ರಂದು ಪ್ರಿಯಕರ ಸೂರ್ಯ ಸ್ವಾತಿಯನ್ನು ಕರೆದುಕೊಂಡು ಹೋಗಿದ್ದಾನೆ.
ನಿನ್ನೆ ಸಂಜೆ ಭದ್ರಾ ಕಾಲುವೆಯಲ್ಲಿ ಸ್ವಾತಿಯ ಮೃತ ದೇಹ ಪತ್ತೆಯಾಗಿದೆ. ಯುವತಿ ಸಾವಿನ ಸುತ್ತ ಇದೀಗ ನೂರಾರು ಅನುಮಾನಗಳು ಹುಟ್ಟಿಕೊಂಡಿವೆ. ಮದುವೆ ವಿಚಾರಕ್ಕೆ ಸೂರ್ಯ ಮತ್ತು ಸ್ವಾತಿ ನಡುವೆ ಗಲಾಟೆ ಆಗಿದೆ. ಸೆಪ್ಟೆಂಬರ್ 21ರಂದು ಪ್ರಿಯಕರ ಸೂರ್ಯ ಮತ್ತು ಪ್ರೇಯಸಿ ಸ್ವಾತಿ ಗಲಾಟೆ ಮಾಡಿಕೊಂಡಿದ್ದಾರೆ. ಯುವತಿ ಸ್ವಾತಿ ಡಿಗ್ರಿ ಎರಡನೇ ವರ್ಷ ಓದುತ್ತಿದ್ದಳು. ಸ್ವಾತಿಯನ್ನು ಸೂರ್ಯ ಮೋಸದಿಂದ ಕರೆದುಕೊಂಡು ಹೋಗಿದ್ದಾನೆ ಎಂದು ಸೆಪ್ಟೆಂಬರ್ 23 ರಂದು ಭದ್ರಾವತಿ ಠಾಣೆಗೆ ಸ್ವಾತಿ ಪೋಷಕರು ದೂರು ನೀಡಿದ್ದಾರೆ.
ಸೆ.21ರಂದು ಸ್ವಾತಿಯನ್ನು ಸೂರ್ಯ ಮನೆಯಿಂದ ಭದ್ರಾ ಕಾಲುವೆಗೆ ಕರೆದೊಯ್ದು ಅಲ್ಲಿಂದ ತಳ್ಳಿ ಕೊಲೆ ಮಾಡಿರುವ ಆರೋಪ ಮಾಡಲಾಗಿದೆ. ಮಂಗಳವಾರ ಸಂಜೆ ಯುವತಿಯ ಶವ ಪತ್ತೆಯಾಗಿದೆ. ಸ್ವಾತಿ ಕುಟುಂಬಸ್ಥರಿಂದ ಸೂರ್ಯ ಮತ್ತು ಕೊಲೆಗೆ ಕುಮ್ಮಕ್ಕು ಹಿನ್ನಲೆ ಆತನ ತಂದೆ ಸ್ವಾಮಿ ಮೇಲೆ ಸೆ. 23 ರಂದು ಭದ್ರಾವತಿ ಠಾಣೆಗೆ ದೂರು ನೀಡಿದ್ದರು.
ಸದ್ಯ ಭದ್ರಾವತಿ ಗ್ರಾಮಾಂತರ ಪೊಲೀಸರು ಎ1 ಸೂರ್ಯ ಮತ್ತು ಎ2 ಸ್ವಾಮಿ ವಿರುದ್ಧ ಕೊಲೆ ಕೇಸ್ ದಾಖಲಿಸಿ, ಈಗಾಗಲೇ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
