ಈದ್ ಮಿಲಾದ್ ಮೆರವಣಿಗೆಯಲ್ಲಿ ಡಿಜೆ ನಿಯಮ ಉಲ್ಲಂಘನೆ; ಶಿವಮೊಗ್ಗದಲ್ಲಿ ಒಟ್ಟು 5 ಪ್ರಕರಣ ದಾಖಲು
Shivamogga police have registered three more cases over the alleged use of prohibited DJ systems and laser lights during Eid Milad processions, taking the total number of cases to five.
ಶಿವಮೊಗ್ಗ: ನಗರದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆ ವೇಳೆ ನಿಯಮಗಳನ್ನು ಉಲ್ಲಂಘಿಸಿ ನಿಷೇಧಿತ ಡಿಜೆ ಸಿಸ್ಟಮ್ ಹಾಗೂ ಲೇಸರ್ ಲೈಟ್‌ಗಳನ್ನು ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕ್ರಮವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಈಗಾಗಲೇ ಕೋಟೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದು, ಇದೀಗ ತುಂಗಾನಗರ ಹಾಗೂ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೊಸದಾಗಿ ಮೂರು ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೂಳೇಬೈಲು ಪ್ರದೇಶದಲ್ಲಿ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಟ್ರ್ಯಾಕ್ಟರ್‌ನಲ್ಲಿ ಡಿಜೆ ಸಿಸ್ಟಮ್ ಹಾಗೂ ಲೇಸರ್ ಲೈಟ್‌ಗಳನ್ನು ಬಳಸಿದ ಆರೋಪ ಕೇಳಿಬಂದಿದೆ. ಈ ವೇಳೆ ಶಬ್ದ ಮಾಲಿನ್ಯ ಉಂಟುಮಾಡಿದ ಹಿನ್ನೆಲೆಯಲ್ಲಿ ಡಿಜೆ ಮಾಲೀಕ, ವಾಹನ ಚಾಲಕ ಹಾಗೂ ಸ್ಥಳೀಯ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇನ್ನು ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಸವನಗಂಗೂರಿನಲ್ಲಿ ಅನುಮತಿಯಿಲ್ಲದೆ ಲಾರಿಯಲ್ಲಿ ಡಿಜೆ ಸೌಂಡ್ ಸಿಸ್ಟಮ್ ಬಳಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ರೀತಿ ಬೊಮ್ಮನಕಟ್ಟೆ ಕೊನೆ ಬಸ್ ನಿಲ್ದಾಣದ ಸಮೀಪ ಬೊಲೆರೋ ವಾಹನದಲ್ಲಿ ಡಿಜೆ ಸೌಂಡ್ ಬಾಕ್ಸ್ ಅಳವಡಿಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಿದ ಆರೋಪವೂ ದಾಖಲಾಗಿದೆ.
ಈ ಎರಡೂ ಘಟನೆಗಳಿಗೆ ಸಂಬಂಧಿಸಿದಂತೆ ನಿಯಮ ಉಲ್ಲಂಘಿಸಿದ ಆಯೋಜಕರು, ವಾಹನ ಮಾಲೀಕರು ಹಾಗೂ ಡಿಜೆ ಸಿಸ್ಟಮ್ ಮಾಲೀಕರ ವಿರುದ್ಧ ವಿನೋಬನಗರ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಈದ್ ಮಿಲಾದ್ ಮೆರವಣಿಗೆ ವೇಳೆ ನಿಯಮ ಉಲ್ಲಂಘಿಸಿ ಡಿಜೆ ಮತ್ತು ಲೇಸರ್ ಲೈಟ್ ಬಳಕೆ ಮಾಡಿದ ಪ್ರಕರಣಗಳ ವಿರುದ್ಧ ಶಿವಮೊಗ್ಗ ಪೊಲೀಸರು ಕ್ರಮ ಮುಂದುವರಿಸಿದ್ದು, ಇದುವರೆಗೆ ಒಟ್ಟು ಐದು ಪ್ರಕರಣಗಳು ದಾಖಲಾಗಿವೆ.
ಹೊಸನಗರ ಪಿಎಸ್‌ಐ ಶಂಕರ್ ಗೌಡ ಪಾಟೀಲ್ ವರ್ಗಾವಣೆ; ನೂತನ ಪಿಎಸ್‌ಐ ಆಗಿ ಸಂತೋಷ್ ಬಾಗೋಜಿ ಅಧಿಕಾರ ಸ್ವೀಕಾರ Hosanagara PSI…
ದೇವಸ್ಥಾನಕ್ಕೆ ತೆರಳಿದ್ದ ಪೋಷಕರು ವಾಪಸ್ ಬರುವಷ್ಟರಲ್ಲಿ ಸಂಭವಿಸಿತ್ತು ದುರಂತ - 9ನೇ ತರಗತಿ ವಿದ್ಯಾರ್ಥಿನಿ ಸಾವು A tragic incident…
ಶಿವಮೊಗ್ಗದಲ್ಲಿ ತಡರಾತ್ರಿ ಕಿಡಿಗೇಡಿಗಳ ಕೃತ್ಯ: ನಿಲ್ಲಿಸಿದ್ದ ಎರಡು ಬೈಕ್‌ಗಳಿಗೆ ಬೆಂಕಿ Miscreants allegedly set two parked bikes on…
ತೋಟದಲ್ಲಿ ಪ್ರತ್ಯಕ್ಷವಾದ 27.7 ಕೆಜಿ ಬೃಹತ್ ಹೆಬ್ಬಾವು! A massive 27.7 kg python was spotted in a…
ತೀರ್ಥಹಳ್ಳಿಗೆ ಯುವ ಐಪಿಎಸ್ ಅಧಿಕಾರಿ: ನೂತನ ಡಿವೈಎಸ್ಪಿಯಾಗಿ ಭಾನುಪ್ರಕಾಶ್ ಜೆ. ನೇಮಕ Young IPS officer Bhanu Prakash J.…
ಹೋಟೆಲ್, ಸರ್ಕಾರಿ ಹಾಸ್ಟೆಲ್‌ಗಳಿಗೆ ಅಧಿಕಾರಿಗಳ ದಿಢೀರ್ ಭೇಟಿ: ಆಹಾರ ಸುರಕ್ಷತೆ ಪರಿಶೀಲನೆ Shivamogga officials led by SDO Dr.…