ರಿಪ್ಪನ್‌ಪೇಟೆಯಲ್ಲಿ ಶ್ರದ್ಧಾಭಕ್ತಿಯಿಂದ ಸಾಮೂಹಿಕ ಋಗ್ವೇದ ಉಪಾಕರ್ಮ ಯಜ್ಞ ಮಹೋತ್ಸವ

ರಿಪ್ಪನ್‌ಪೇಟೆಯಲ್ಲಿ ಶ್ರದ್ಧಾಭಕ್ತಿಯಿಂದ ಸಾಮೂಹಿಕ ಋಗ್ವೇದ ಉಪಾಕರ್ಮ ಯಜ್ಞ ಮಹೋತ್ಸವ

Rituals of Rigveda Upakarma and Vishwakarma Yajna were performed with devotion at a mass religious ceremony in Ripponpete.

ರಿಪ್ಪನ್‌ಪೇಟೆ: ಪಟ್ಟಣದಲ್ಲಿ ಸಾಮೂಹಿಕ ಋಗ್ವೇದ ನಿತ್ಯ ಹಾಗೂ ನೂತನ ಉಪಾಕರ್ಮ ಯಜ್ಞ ಮಹೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ತೀರ್ಥಹಳ್ಳಿಯ ಚೇತನ್ ಪುರೋಹಿತ್ ಅವರ ಸಮ್ಮುಖದಲ್ಲಿ ವೈದಿಕ ವಿಧಿವಿಧಾನಗಳು ನೆರವೇರಿದವು. ಕಾರ್ಯಕ್ರಮದಲ್ಲಿ ಗಣಪತಿ ಪೂಜೆ, ಸಪ್ತಋಷಿ ಪೂಜೆ, ಮಾತೃಕಾ ಪೂಜೆ ಹಾಗೂ ಪುಣ್ಯಾಹವಾಚನ ಸೇರಿದಂತೆ ವಿವಿಧ ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಯಿತು.

ನಂತರ ನೂತನ ಉಪಾಕರ್ಮ ಹೋಮವನ್ನು ವಿಧಿವತ್ತಾಗಿ ನೆರವೇರಿಸಿ, ವೇದಮಂತ್ರಗಳ ಘೋಷದೊಂದಿಗೆ ಸಾಮೂಹಿಕ ಯಜ್ಞೋಪವೀತ ಧಾರಣೆ ಕಾರ್ಯಕ್ರಮ ನಡೆಯಿತು. ವಿಶ್ವಕರ್ಮ ಯಜ್ಞವನ್ನೂ ನೆರವೇರಿಸಲಾಯಿತು. ಭಕ್ತರು ಹಾಗೂ ಸಮುದಾಯದ ಸದಸ್ಯರು ಶ್ರದ್ಧೆಯಿಂದ ಪಾಲ್ಗೊಂಡು ಧಾರ್ಮಿಕ ಸಂಪ್ರದಾಯವನ್ನು ಆಚರಿಸಿದರು.

ಕಾರ್ಯಕ್ರಮದಲ್ಲಿ ಸಮುದಾಯದ ಗ್ರಾಮ ಮುಕ್ತೇಸರರಾದ ಶ್ರೀಧರ ಆಚಾರ್ಯ ಕೆಂಚನಾಲ, ವಿರಾಟ್ ವಿಶ್ವಕರ್ಮ ಸಂಘಟನೆ ರಿಪ್ಪನ್‌ಪೇಟೆ ಅಧ್ಯಕ್ಷ ಮಂಜುನಾಥ ಆಚಾರ್ಯ, ಮಂಜುನಾಥ್ ಆಚಾರ್ಯ ಗ್ಯಾರೇಜ್, ಆರ್.ಆರ್. ಕೃಷ್ಣ ಆಚಾರ್ಯ, ಸತ್ಯನಾರಾಯಣ ಆಚಾರ್ಯ, ರವಿ ಆಚಾರ್ಯ, ಪ್ರಭಾಕರ ಆಚಾರ್ಯ, ಶಶಿಧರ ಆಚಾರ್ಯ, ರಾಘವೇಂದ್ರ ಆಚಾರ್ಯ, ಶ್ರೀಕಾಂತ್ ಆಚಾರ್ಯ, ಗಿರೀಶ ಆಚಾರ್ಯ, ಮನೋಹರ್ ಆಚಾರ್ಯ, ಸುದೇಶ್ ಆಚಾರ್ಯ, ಮಹೇಶ್ ಆಚಾರ್ಯ, ಜನಾರ್ದನ ಆಚಾರ್ಯ ಮೂಗುಡ್ತಿ, ಪ್ರವೀಣ್ ಆಚಾರ್ಯ, ಕಾರ್ತಿಕ್ ಆಚಾರ್ಯ, ಅನಿಲ್ ಆಚಾರ್ಯ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.

ವೇದಮಂತ್ರಗಳ ಪಠಣ, ಪೂಜೆ, ಹೋಮ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಾರ್ಯಕ್ರಮವು ಭಕ್ತಿಭಾವದ ವಾತಾವರಣದಲ್ಲಿ ನೆರವೇರಿತು.

About The Author