ಅರಸಾಳಿನಲ್ಲಿ ಅಕ್ರಮ ಮದ್ಯ ಸೇವನೆಗೆ ಅವಕಾಶ: ಕಿರಾಣಿ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ

ಅರಸಾಳಿನಲ್ಲಿ ಅಕ್ರಮ ಮದ್ಯ ಸೇವನೆಗೆ ಅವಕಾಶ: ಕಿರಾಣಿ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ

Police raided a grocery shop in Arasalu village and seized illegal whisky pouches allegedly being sold for public drinking. A case has been registered against the shop owner.

ಶಿವಮೊಗ್ಗ ಜಿಲ್ಲೆ ಅರಸಾಳು ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟ ಆರೋಪದಡಿ ಕಿರಾಣಿ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ.

ಮೇ 20ರಂದು ಬೆಳಿಗ್ಗೆ 9.45ರ ಸುಮಾರಿಗೆ ಅರಸಾಳು ಗ್ರಾಮದ ಬಳಿ ಪೊಲೀಸರು ಇದ್ದ ವೇಳೆ, ಬೋರೆಗೌಡ ತಂದೆ ಮರಿಯಪ್ಪ ಅವರ ಕಿರಾಣಿ ಅಂಗಡಿ ಮುಂಭಾಗದಲ್ಲಿ ಬ್ರಾಂಡಿ ಪೌಚ್‌ಗಳನ್ನು ಸಾರ್ವಜನಿಕರಿಗೆ ಚಿಲ್ಲರೆಯಾಗಿ ನೀಡುತ್ತಿದ್ದು, ಅಲ್ಲೇ ಕುಡಿಯಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಬಾತ್ಮಿದಾರರಿಂದ ಲಭಿಸಿತು.

ತಕ್ಷಣವೇ ಸಿಬ್ಬಂದಿ ಹಾಗೂ ಪಂಚರನ್ನು ಕರೆದುಕೊಂಡು ಬೆಳಿಗ್ಗೆ 10.15ಕ್ಕೆ ಸ್ಥಳಕ್ಕೆ ಧಾಳಿ ನಡೆಸಿದ ಪೊಲೀಸರು, ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡಿ ಜನರಿಗೆ ತೊಂದರೆ ಉಂಟು ಮಾಡುತ್ತಿದ್ದವರನ್ನು ವಶಕ್ಕೆ ಪಡೆದರು.

ದಾಳಿಯ ವೇಳೆ ಆರೋಪಿತನ ಬಳಿ ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್‌ನಲ್ಲಿ 90 ಎಂಎಲ್‌ನ “ORIGINAL CHOICE DELUXE WHISKY” ಲೇಬಲ್ ಹೊಂದಿದ್ದ 11 ಮದ್ಯದ ಪೌಚ್‌ಗಳು ಪತ್ತೆಯಾಗಿದ್ದು, ಪ್ರತಿಯೊಂದರ ಬೆಲೆ ₹50ರಂತೆ ಒಟ್ಟು ₹550 ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ.ಇದೇ ವೇಳೆ “Hywards Cheers Whisky” ಲೇಬಲ್ ಹೊಂದಿದ್ದ 4 ಖಾಲಿ ಪೌಚ್‌ಗಳು ಹಾಗೂ ಎರಡು ಪ್ಲಾಸ್ಟಿಕ್ ಲೋಟಗಳು ಕೂಡ ಪತ್ತೆಯಾಗಿದ್ದು, ಅವುಗಳನ್ನು ಪೊಲೀಸರು ಅಮಾನತ್ತುಪಡಿಸಿಕೊಂಡಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಸೇವನೆಗೆ ಅವಕಾಶ ನೀಡಿದ ಆರೋಪದಡಿ ಆರೋಪಿತನ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಸಾಗರ ಗ್ರಾಮಾಂತರ ಠಾಣೆಯ ನೂತನ ಪಿಎಸ್‌ಐ ಆಗಿ ಶಂಕರ್ ಗೌಡ ಪಾಟೀಲ್ ನೇಮಕ

ಸಾಗರ ಗ್ರಾಮಾಂತರ ಠಾಣೆಯ ನೂತನ ಪಿಎಸ್‌ಐ ಆಗಿ ಶಂಕರ್ ಗೌಡ ಪಾಟೀಲ್ ನೇಮಕ PSI Shankar Gowda Patil has…

4 hours ago

ಶತಮಾನದ ಸಂಭ್ರಮದಲ್ಲಿ ರಿಪ್ಪನ್‌ಪೇಟೆ ಬಾಲಕರ ಶಾಲೆ: ಸೆ. 3ಕ್ಕೆ ಹಳೆಯ ವಿದ್ಯಾರ್ಥಿಗಳ ಪೂರ್ವಭಾವಿ ಸಭೆ

ಶತಮಾನದ ಸಂಭ್ರಮದಲ್ಲಿ ರಿಪ್ಪನ್‌ಪೇಟೆ ಬಾಲಕರ ಶಾಲೆ: ಸೆ. 3ಕ್ಕೆ ಹಳೆಯ ವಿದ್ಯಾರ್ಥಿಗಳ ಪೂರ್ವಭಾವಿ ಸಭೆ Ripponpete Government Model Boys…

5 hours ago

ಪ್ಲಾಸ್ಟಿಕ್ ಚೀಲಗಳ ನಡುವೆ ಅಡಗಿದ್ದ 7.5 ಅಡಿ ಬೃಹತ್ ಹೆಬ್ಬಾವು ಸೆರೆ

ಪ್ಲಾಸ್ಟಿಕ್ ಚೀಲಗಳ ನಡುವೆ ಅಡಗಿದ್ದ 7.5 ಅಡಿ ಬೃಹತ್ ಹೆಬ್ಬಾವು ಸೆರೆ A 7.5-foot-long, 10 kg giant python…

6 hours ago

ಈದ್ ಮಿಲಾದ್ – ಗಣೇಶೋತ್ಸವಕ್ಕೆ ಅನುಮತಿ ಇಲ್ಲದೆ ಡಿಜೆ ಹಾಕಿದರೆ ಕೇಸ್ ! ಸೌಂಡ್ ಸಿಸ್ಟಂ ಮಾಲೀಕರಿಗೆ ಪೊಲೀಸರಿಂದ ಖಡಕ್ ವಾರ್ನಿಂಗ್

ಈದ್ ಮಿಲಾದ್ - ಗಣೇಶೋತ್ಸವಕ್ಕೆ ಅನುಮತಿ ಇಲ್ಲದೆ ಡಿಜೆ ಹಾಕಿದರೆ ಕೇಸ್ ! ಸೌಂಡ್ ಸಿಸ್ಟಂ ಮಾಲೀಕರಿಗೆ ಪೊಲೀಸರಿಂದ ಖಡಕ್…

7 hours ago

ಅಕ್ರಮ ಜಂಬಿಟ್ಟಿಗೆ ಕಲ್ಲು ಕ್ವಾರಿಗೆ ತಹಶೀಲ್ದಾರ್ ದಿಢೀರ್ ದಾಳಿ; ಜೆಸಿಬಿ ವಶಕ್ಕೆ, ಪ್ರಕರಣ ದಾಖಲು

ಅಕ್ರಮ ಜಂಬಿಟ್ಟಿಗೆ ಕಲ್ಲು ಕ್ವಾರಿಗೆ ತಹಶೀಲ್ದಾರ್ ದಿಢೀರ್ ದಾಳಿ; ಜೆಸಿಬಿ ವಶಕ್ಕೆ, ಪ್ರಕರಣ ದಾಖಲು Sagar Tahsildar Dr. Prathibha…

14 hours ago

ಗೋಡಾನ್ ಜಾಲರಿ ಮುರಿದು ಅಡಕೆ ಕಳವು; ₹2.50 ಲಕ್ಷ ಮೌಲ್ಯದ 4.80 ಕ್ವಿಂಟಾಲ್ ಅಡಕೆ ದೋಚಿದ ಕಳ್ಳರು

ಗೋಡಾನ್ ಜಾಲರಿ ಮುರಿದು ಅಡಕೆ ಕಳವು; ₹2.50 ಲಕ್ಷ ಮೌಲ್ಯದ 4.80 ಕ್ವಿಂಟಾಲ್ ಅಡಕೆ ದೋಚಿದ ಕಳ್ಳರು Thieves broke…

14 hours ago