POSTMANNEWS

ನೈಜ ಸುದ್ದಿ ನೇರ ಬಿತ್ತರ..

ವೀಲ್ ಕಟ್ ಆಗಿ ನಿಯಂತ್ರಣ ತಪ್ಪಿ ಅಡಕೆ ತೋಟಕ್ಕೆ ನುಗ್ಗಿದ ಬಸ್ – 25 ಪ್ರಯಾಣಿಕರು ಪಾರು

A private bus lost control after a wheel cut near Sheerihalli village in Shikaripura taluk of Shivamogga district and crashed into an areca nut garden. Over 25 passengers escaped with minor injuries.

ವೀಲ್ ಕಟ್ ಆಗಿ ನಿಯಂತ್ರಣ ತಪ್ಪಿ ಅಡಕೆ ತೋಟಕ್ಕೆ ನುಗ್ಗಿದ ಬಸ್ – 25 ಪ್ರಯಾಣಿಕರು ಪಾರು

ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲೂಕಿನ ಶೀರಿಹಳ್ಳಿ ಗ್ರಾಮದ ಬಳಿ ಖಾಸಗಿ ಬಸ್‌ನ ಚಕ್ರದ ವೀಲ್ ಹಠಾತ್ತನೆ ಕಟ್ ಆಗಿ, ಬಸ್ ರಸ್ತೆ ಬದಿಯ ಅಡಕೆ ತೋಟಕ್ಕೆ ನುಗ್ಗಿದ ಭೀಕರ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 25ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚಿಕ್ಕೇರೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಶೀರಿಹಳ್ಳಿ ಸಮೀಪ ಚಲಿಸುತ್ತಿದ್ದ ವೇಳೆ, ಏಕಾಏಕಿ ಚಕ್ರದ ವೀಲ್ ಕಟ್ ಆಗಿದ್ದು, ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ಅಡಕೆ ತೋಟಕ್ಕೆ ನುಗ್ಗಿದೆ. ನಂತರ ತೋಟದಲ್ಲಿದ್ದ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದು ಬಸ್ ನಿಂತಿದೆ.

ತೆಂಗಿನ ಮರಕ್ಕೆ ಡಿಕ್ಕಿ ಹೊಡೆಯದೇ ಇದ್ದಿದ್ದರೆ ಬಸ್ ಪಲ್ಟಿಯಾಗಿ ಭಾರೀ ಪ್ರಾಣಹಾನಿ ಸಂಭವಿಸುವ ಸಾಧ್ಯತೆ ಇತ್ತು ಎನ್ನಲಾಗಿದೆ. ಬಸ್ಸಿನಲ್ಲಿ ಶಾಲಾ–ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ 25ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು.

ಅಪಘಾತದ ತೀವ್ರತೆಯಿಂದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದಿಂದ ಬಸ್ಸಿನ ಮುಂಭಾಗಕ್ಕೆ ಭಾರೀ ಹಾನಿಯಾಗಿದೆ.

About The Author