w
Headlines
Home » ಸಾಗುವಾನಿ ಮರಗಳ ಅಕ್ರಮ ಕಡಿತಲೆ: ಮೂವರ ವಿರುದ್ಧ ಪ್ರಕರಣ

ಸಾಗುವಾನಿ ಮರಗಳ ಅಕ್ರಮ ಕಡಿತಲೆ: ಮೂವರ ವಿರುದ್ಧ ಪ್ರಕರಣ

IMG 20260115 161804 wm {"ServiceProvider":"meizhuo","Time":"2026-01-15 16:18:05.410","ContentID":"a4d9d49e7d8a4a89b533fc9e8dfb32f2"}

ಸಾಗುವಾನಿ ಮರಗಳ ಅಕ್ರಮ ಕಡಿತಲೆ: ಮೂವರ ವಿರುದ್ಧ ಪ್ರಕರಣ

ಆಯನೂರು : ಇಲ್ಲಿನ ಚೋರಡಿ ಉಪ ವಲಯ ಅರಣ್ಯ ಪ್ರದೇಶದ ಕೋಟೆಹಾಳ ಗ್ರಾಮ ಸಮೀಪ ಸಾಗುವಾನಿ ಮರಗಳನ್ನು ಅಕ್ರಮವಾಗಿ ಕಡಿತಲೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಅರಣ್ಯ ಇಲಾಖೆ ಮೂವರು ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿದೆ.

ಚೋರಡಿ ಉಪ ವಲಯ ಅರಣ್ಯಾಧಿಕಾರಿ ಕಾಮನಾಯ್ಕ್ ಅವರ ನೇತೃತ್ವದ ಅರಣ್ಯಾಧಿಕಾರಿಗಳ ತಂಡ ಕಾಡಿನಲ್ಲಿ ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ಕಡಿತಲೆ ಮಾಡಿ ಸಂಗ್ರಹಿಸಿಟ್ಟಿದ್ದ ಏಳು ಸಾಗುವಾನಿ ಮರದ ತುಂಡುಗಳನ್ನು ವಶಪಡಿಸಿಕೊಂಡಿದೆ.

ಈ ಪ್ರಕರಣದಲ್ಲಿ ಸತ್ಯನಾರಾಯಣ, ಶರಣು ಹಾಗೂ ಅಶೋಕ ಎಂಬವರ ವಿರುದ್ಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಕಾರ್ಯಾಚರಣೆ ಸಿಸಿಎಫ್ ಕೆ.ಟಿ. ಹನುಮಂತಪ್ಪ, ಡಿಎಫ್‌ಒ ಮೊಹಮ್ಮದ್ ಫಯಾಜುದ್ದೀನ್ ಹಾಗೂ ಸಾಗರ ಎಸಿಎಫ್ ಕೆ. ರವಿ ಅವರ ಮಾರ್ಗದರ್ಶನದಲ್ಲಿ ನಡೆದಿದ್ದು, ಸಾಗರ ವಲಯ ಅರಣ್ಯಾಧಿಕಾರಿ ಬಿ. ಅಣ್ಣಪ್ಪ, ಚೋರಡಿ ಡಿಆರ್‌ಎಫ್‌ಒ ಕಾಮನಾಯ್ಕ್ ಸೇರಿದಂತೆ ಅರಣ್ಯ ಸಿಬ್ಬಂದಿ ಪಾಲ್ಗೊಂಡಿದ್ದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.