POSTMANNEWS

ನೈಜ ಸುದ್ದಿ ನೇರ ಬಿತ್ತರ..

ದೂರ ಶಿಕ್ಷಣದಲ್ಲಿ ನಾವೀನ್ಯತೆ: ಹುಂಚದ ಅಭಿಷೇಕ್ ಗೆ ಒಲಿದ ‘ಸ್ವಾಮಿ ವಿವೇಕಾನಂದ’ ರಾಷ್ಟ್ರೀಯ ಪ್ರಶಸ್ತಿ

Abhishek K, Founder and Head of Reom Education Academy, has been honored with the 2026 Swami Vivekananda National Inspiration Award for his outstanding contribution to the distance education sector

ದೂರ ಶಿಕ್ಷಣದಲ್ಲಿ ನಾವೀನ್ಯತೆ: ಹುಂಚದ ಅಭಿಷೇಕ್ ಗೆ ಒಲಿದ ‘ಸ್ವಾಮಿ ವಿವೇಕಾನಂದ’ ರಾಷ್ಟ್ರೀಯ ಪ್ರಶಸ್ತಿ

ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಅಂಗವಾಗಿ ದಿ ಇಂಡಿಯನ್ ಫೋರಂ ಫಾರ್ ಸೋಶಿಯಲ್ ಲೀಡರ್ಸ್ ಅಂಡ್ ಅಚೀವರ್ಸ್ (The Indian Forum for Social Leaders and Achievers), ಚೆನ್ನೈ ಸಂಸ್ಥೆಯು ನೀಡುವ 2026ನೇ ಸಾಲಿನ ರಾಷ್ಟ್ರೀಯ ಸ್ವಾಮಿ ವಿವೇಕಾನಂದ ಸಂಶೋಧನೆ ಮತ್ತು ನಾವೀನ್ಯತೆ ಶ್ರೇಷ್ಠತಾ ಪ್ರಶಸ್ತಿ ಅನ್ನು ಅಭಿಷೇಕ್ ಕೆ ಅವರಿಗೆ ನೀಡಿ ಗೌರವಿಸಿದೆ.

ಹೊಸನಗರ ತಾಲೂಕಿನ ಹುಂಚ ಗ್ರಾಮದ ನಿವಾಸಿಯಾಗಿರುವ ಅಭಿಷೇಕ್ ಕೆ ಅವರು ರಿಯೋಮ್ ಎಜುಕೇಶನ್ ಅಕಾಡೆಮಿಯ ಸಂಸ್ಥಾಪಕ ಹಾಗೂ ಮುಖ್ಯಸ್ಥರಾಗಿದ್ದಾರೆ. ದೂರ ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ವಿಶಿಷ್ಟ ಸೇವೆ, ಸಂಶೋಧನೆ ಮತ್ತು ನಾವೀನ್ಯತೆಯ ಮೂಲಕ ಸಮಾಜಮುಖಿ ಶಿಕ್ಷಣವನ್ನು ಬಲಪಡಿಸಿರುವುದನ್ನು ಗುರುತಿಸಿ ಅವರಿಗೆ ಈ ಗೌರವ ಲಭಿಸಿದೆ.

ಸ್ವಾಮಿ ವಿವೇಕಾನಂದರ ಆದರ್ಶಗಳು, ಚಿಂತನೆಗಳು ಹಾಗೂ ಯುವಶಕ್ತಿಗೆ ಪ್ರೇರಣೆಯಾಗುವ ಕಾರ್ಯಗಳನ್ನು ಮುಂದುವರೆಸುವ ಸಾಧಕರನ್ನು ಗುರುತಿಸುವ ಉದ್ದೇಶದಿಂದ ಈ ರಾಷ್ಟ್ರೀಯ ಪ್ರೇರಣಾ ಪ್ರಶಸ್ತಿಯನ್ನು ಪ್ರತಿವರ್ಷ ನೀಡಲಾಗುತ್ತದೆ. 2026ನೇ ಸಾಲಿನ “Swami Vivekananda National Inspiration Award” ಅನ್ನು ಅಭಿಷೇಕ್ ಕೆ ಅವರಿಗೆ ನೀಡುವ ಮೂಲಕ, ಅವರ ಶೈಕ್ಷಣಿಕ ನಾಯಕತ್ವ ಹಾಗೂ ಸಾಮಾಜಿಕ ಬದ್ಧತೆಯನ್ನು ಪ್ರಶಸ್ತಿ ಸಮಿತಿ ಶ್ಲಾಘಿಸಿದೆ.

ಈ ಗೌರವವು ದೂರ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು ಮತ್ತು ಯುವ ಶಿಕ್ಷಣ ನಾಯಕರಿಗೆ ಮತ್ತಷ್ಟು ಪ್ರೇರಣೆಯಾಗಿ ಪರಿಣಮಿಸಿದೆ.

ದೂರ ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ವಿಶಿಷ್ಟ ಸೇವೆ, ಸಂಶೋಧನೆ ಮತ್ತು ನಾವೀನ್ಯತೆಯ ಮೂಲಕ ಸಮಾಜಮುಖಿ ಶಿಕ್ಷಣವನ್ನು ಬಲಪಡಿಸಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಅಭಿಷೇಕ್ ರವರಿಗೆ ಪೋಸ್ಟ್ ಮ್ಯಾನ್ ನ್ಯೂಸ್ ಬಳದ ವತಿಯಿಂದ ಅಭಿನಂದನೆಗಳು.

About The Author