POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಹಾಸ್ಟೆಲ್ ನಲ್ಲಿ ಡೆತ್ ನೋಟ್ ಬರೆದಿಟ್ಟು  ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

GridArt 20250529

ಹಾಸ್ಟೆಲ್ ನಲ್ಲಿ ಡೆತ್ ನೋಟ್ ಬರೆದಿಟ್ಟು  ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

ಕೊಡಗು: ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಸಿಇಟಿ ಕಾಲೇಜಿನ ಹಾಸ್ಟೆಲ್ ನಲ್ಲಿ ನಡೆದಿದೆ.

ರಾಯಚೂರು ಮೂಲದ ಪ್ರಥಮ ವರ್ಷದ ಎ.ಐ.ಎಂ.ಎಲ್ ವ್ಯಾಸಂಗ ಮಾಡುತ್ತಿರುವ ತೇಜಸ್ವಿನಿ(19) ಮೃತ  ವಿದ್ಯಾರ್ಥಿನಿ. ತೇಜಸ್ವಿನಿ ರಾಯಚೂರಿನ ಮಹಾಂತಪ್ಪ ಎಂಬುವರ ಏಕೈಕ ಪುತ್ರಿಯಾಗಿದ್ದಾಳೆ. ಸ್ಥಳಕ್ಕೆ ಪೊನ್ನಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,  ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದೆ.  ಆರು ಬ್ಯಾಕ್ ಲಾಗ್ ಇರುವ ಕಾರಣ,  ತನಗೆ ಮುಂದೆ ಓದಲು ಇಷ್ಟವಿಲ್ಲದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾಳೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.

ತೇಜಸ್ವಿನಿ ಮೂರು ದಿನಗಳ ಹಿಂದೆ ತನ್ನ ಸ್ನೇಹಿತರೊಂದಿಗೆ  ಹುಟ್ಟುಹಬ್ಬ ಆಚರಿಸಿಕೊಂಡಿದ್ದಳು. ಅಂದಿನ ಕಾರ್ಯಕ್ರಮಕ್ಕೆ ಬಾರದವರಿಗೆ ಕೂಡ ಹುಟ್ಟು ಹಬ್ಬದ ನಿಮಿತ್ತ, ಸ್ನೇಹಿತರಿಗೆ ಸಿಹಿ ಹಂಚಿದ್ದಳು.

ತರಗತಿಗೆ ಆಗಮಿಸಿದ ನಂತರ ಸಂಜೆ 4 ಗಂಟೆಗೆ ಹಾಸ್ಟೆಲ್ ಆತ್ಮಹತ್ಯೆಗೆ ಶರಣಾಗಿದ್ದು. 4.30 ಗಂಟೆಗೆ ಆಕೆಯ ಸಹಪಾಠಿ ಕೊಠಡಿಗೆ ಹೋದಾಗ ಬಾಗಿಲು ಒಳಗಿನಿಂದ ಹಾಕಿಕೊಂಡಿದ್ದಳು.

ನಂತರ ಸ್ನೇಹಿತರು ಎಷ್ಟೇ ಕೂಗಿದರೂ ಬಾರದಿದ್ದಾಗ  ಹಾಸ್ಟೆಲ್ ಮೇಲ್ವಿಚಾರಕರಿಗೆ  ವಿಷಯ ತಿಳಿಸಿ ಬಾಗಿಲು ತೆಗೆದು ನೋಡಿದಾಗ  ತೇಜಸ್ವಿನಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.