ಬ್ರೋಕರ್ ಮೂಲಕ ಮದುವೆಯಾದ ಯುವಕ | ಒಂದೇ ತಿಂಗಳಿಗೆ ಹೆಂಡತಿ , ಬ್ರೋಕರ್ ಇಬ್ಬರು ಎಸ್ಕೇಪ್ – ಸಿಂಗಲ್ಸ್ ನೋಡಲೇಬೇಕಾದ ಸುದ್ದಿ.!!
ಶಿವಮೊಗ್ಗ: 30 ದಾಟಿದ ಯುವಕರಿಗೆ ಈಗ ಹುಡುಗಿಯರು ಸಿಗೋದೇ ಕಠಿಣವಾಗಿದೆ. ಹೀಗಾಗಿ ಜನರು ಮ್ಯಾರೆಜ್ ಬ್ರೋಕರ್ ಮೊರೆ ಹೋಗುತ್ತಿದ್ದಾರೆ. ಹೀಗೆ ಮ್ಯಾರೆಜ್ ಬ್ರೋಕರ್ ಬಳಿ ಹೋಗಿ ಅವರಿಗೆ ಲಕ್ಷ ಲಕ್ಷ ಹಣ ನೀಡಿ ಯಾಮಾರಿದ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ್ನಲ್ಲಿ ನಡೆದಿದೆ.ಶಿವಮೊಗ್ಗದ ಮಂಜುಳಾ ಸೇರಿ 7 ಜನರ ಮೇಲೆ ಪ್ರಕರಣ ದಾಖಲು.
ಮುಧೋಳ್ ತಾಲೂಕಿನ ಸೋಮಶೇಖರ್ ಎಂಬ ವ್ಯಕ್ತಿ ಮದುವೆಗಾಗಿ ಹೆಣ್ಣು ಹುಡುಕುತ್ತಿದ್ದರು. ಇವರನ್ನೇ ಟಾರ್ಗೆಟ್ ಮಾಡಿದ ಮ್ಯಾರೇಜ್ ಬ್ರೋಕರ್ ಟೀಮ್ ಹೆಣ್ಣು ಕೊಡಸ್ತೀವಿ ಅಂತ ಹೇಳಿ 4 ಲಕ್ಷ ರೂಪಾಯಿ ಹಣಕ್ಕೆ ಡಿಮ್ಯಾಂಡ್ ಇಟ್ಟಿತ್ತು. ಹೆಣ್ಣು ಸಿಗದೆ ಪರದಾಡುತ್ತಿದ್ದ ಸೋಮಶೇಖರ್ ಇದಕ್ಕೆ ಒಪ್ಪಿಕೊಂಡಿದ್ದರು.
ಕೊನೆಗೆ ಮುಧೋಳ್ನ ಕಾಳಿಕಾದೇವಿ ದೇಗುಲದಲ್ಲಿ ವರ್ಷದ ಹಿಂದೆ ಶಿವಮೊಹ್ಗದ ಯುವತಿ ಜೊತೆ ಮದುವೆಯೂ ಆಯ್ತು. ಮದುವೆಯ ದಿನವೇ4 ಲಕ್ಷ ರೂಪಾಯಿ ಹಣ ಪಡೆದಿದ್ದ ಬ್ರೋಕರ್. ಮದುವೆಯಾಗಿ ಒಂದೇ ತಿಂಗಳಲ್ಲಿ ಸೋಮಶೇಖರ್ ಪತ್ನಿ ಮನೆಯಿಂದ ಎಸ್ಕೇಪ್ ಆಗಿದ್ದಾಳೆ.
ಈ ಬಗ್ಗೆ ಕೇಳೋಣ ಅಂತ ಬ್ರೋಕರ್ ಹತ್ತಿರ ಹೋದ್ರೆ ಆ ಕಡೆ ಅವನು ಎಸ್ಕೇಪ್ ಆಗಿದ್ದಾನೆ.
ಸೋಮಶೇಖರ್ಗೆ ಮೋಸವಾದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು. ಪತ್ನಿಯ ಬಗ್ಗೆ ವಿಚಾರಿಸಲು ಹೋದ ವೇಳೆ ಆಕೆಗೆ ಈ ಮೊದಲೇ ಎರಡು ಮದುವೆಯಾದ ವಿಷಯ ಬೆಳಕಿಗೆ ಬಂದಿದೆ. ಹಣ ಮಾಡಲು ಮಹಿಳೆಯನ್ನು ಮುಧೋಳಕ್ಕೆ ಈ ಗ್ಯಾಂಗ್ ಕರೆತಂದಿತ್ತು ಎಂದು ಹೇಳಲಾಗಿದೆ.
ಬ್ರೋಕರ್ ಟೀಮ್ಗೆ 4 ಲಕ್ಷ ಹಣ ಮರಳಿಸುವಂತೆ ಕೇಳಿಕೊಂಡಿದ್ದಾರೆ ಸೋಮಶೇಖರ್, ಕೊನೆಗೆ ಹಣ ಬಾರದೇ ಇದ್ದಾಗ ಮುಧೋಳ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸೋಮಶೇಖರ್ ಜೊತೆ ಶಿವಮೊಗ್ಗಾದ ಮಂಜುಳಾ ಎಂಬುವವಳ ಮದುವೆಯಾಗಿತ್ತು. ಸದ್ಯ ಮುಧೋಳ್ ಪೊಲೀಸ್ ಠಾಣೆಯಲ್ಲಿ ಆರೋಪಿ ಸತ್ಯಪ್ಪ ಮತ್ತು ಮಂಜುಳಾ ಸೇರಿ 7 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಈದ್ ಮಿಲಾದ್ ಹಿನ್ನೆಲೆ: ಶಿವಮೊಗ್ಗ ಜಿಲ್ಲೆಯಲ್ಲಿ ಬೈಕ್ ರ್ಯಾಲಿ, ಡಿಜೆ, ಸಿಡಿಮದ್ದು ನಿಷೇಧ - ಡಿಸಿ ಆದೇಶ Shivamogga district…
ದೀರ್ಘಕಾಲದಿಂದ ಗೈರುಹಾಜರಾಗಿದ್ದ ಮಕ್ಕಳನ್ನು ಶಾಲೆಗೆ ಮರಳಿ ಕರೆತರಲು ಜಾಗೃತಿ ಅಭಿಯಾನ Awareness campaign conducted by Government High School,…
ದುರಾಸೆ ಗೆಲ್ಲಲಿಲ್ಲ, ಪ್ರಾಮಾಣಿಕತೆ ಸೋಲಲಿಲ್ಲ! ಚಿನ್ನದ ಸರ ಮರಳಿಸಿ ಎಲ್ಲರ ಹೃದಯ ಗೆದ್ದ ಗುರುಶಕ್ತಿ ಬಸ್ ಸಿಬ್ಬಂದಿಗಳು Gold mangalsutra…
ರಿಪ್ಪನ್ ಪೇಟೆ : ಕೂಲಿ ಕೆಲಸಕ್ಕೆಂದು ಬಂದಿದ್ದ ಬಾಲಕಿಗೆ ಕಂಟಕವಾದ ಕಾಮುಕನಿಂದ , ಗರ್ಭಿಣಿ! ಆರೋಪಿಯ ಬಂಧನ A 16-year-old minor…
ರಿಪ್ಪನ್‌ಪೇಟೆ ಪೊಲೀಸ್ ಜೀಪ್‌ಗೆ ಅಪರಿಚಿತ ವಾಹನ ಡಿಕ್ಕಿ: ಮರಕ್ಕೆ ಅಪ್ಪಳಿಸಿದ ಜೀಪ್, ತಪ್ಪಿದ ಭಾರಿ ಅನಾಹುತ A major disaster…
ತುಂಗಾ ನದಿಗೆ ಮೂವರು ಮಕ್ಕಳೊಂದಿಗೆ ಹಾರಿದ ತಾಯಿ : ಇಬ್ಬರು ಹೆಣ್ಣು ಮಕ್ಕಳಿಗಾಗಿ ಶೋಧ ಮುಂದುವರಿಕೆ Mother and three…