ರಿಪ್ಪನ್‌ಪೇಟೆ ಪೊಲೀಸ್ ಜೀಪ್‌ಗೆ ಅಪರಿಚಿತ ವಾಹನ ಡಿಕ್ಕಿ: ಮರಕ್ಕೆ ಅಪ್ಪಳಿಸಿದ ಜೀಪ್, ತಪ್ಪಿದ ಭಾರಿ ಅನಾಹುತ
A major disaster was averted when a Ripponpet police jeep on Eid Milad patrol hit a tree after being rear-ended by an unknown vehicle near Hirejeni. PSI Raju Reddy and staff escaped with minor injuries thanks to airbags.
ರಿಪ್ಪನ್‌ಪೇಟೆ: ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಜೀಪ್‌ಗೆ ಅಪರಿಚಿತ ವಾಹನವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ, ನಿಯಂತ್ರಣ ಕಳೆದುಕೊಂಡ ಜೀಪ್ ಮರಕ್ಕೆ ಅಪ್ಪಳಿಸಿದ ಘಟನೆ ಹಿರೇಜೇನಿ ಸಮೀಪ ನಡೆದಿದೆ.
ಪಿಎಸ್‌ಐ ರಾಜುರೆಡ್ಡಿ, ಸಿಬ್ಬಂದಿ ವಿಶ್ವನಾಥ್ ಹಾಗೂ ಚಾಲಕ ಅವಿನಾಶ್ ಅವರು ಬಟ್ಟೆಮಲ್ಲಪ್ಪ ಮತ್ತು ಕೋಡೂರು ಭಾಗದಲ್ಲಿ ಗಸ್ತು ಮುಗಿಸಿ ರಿಪ್ಪನ್‌ಪೇಟೆಗೆ ಹಿಂದಿರುಗುತ್ತಿದ್ದರು. ರಾತ್ರಿ ಸುಮಾರು 2:30ರ ವೇಳೆಯಲ್ಲಿ ಹಿರೇಜೇನಿ ಬಳಿ ಈ ಅಪಘಾತ ಸಂಭವಿಸಿದೆ. ವಾಹನದಲ್ಲಿದ್ದ ಎಲ್ಲರೂ ಸೀಟ್ ಬೆಲ್ಟ್ ಧರಿಸಿದ್ದ ಕಾರಣ ಹಾಗೂ ಡಿಕ್ಕಿಯ ರಭಸಕ್ಕೆ ತಕ್ಷಣವೇ ಏರ್ ಬ್ಯಾಗ್ ತೆರೆದುಕೊಂಡಿದ್ದರಿಂದ ಜೀಪಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಭಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪೊಲೀಸ್ ಜೀಪ್‌ಗೆ ಡಿಕ್ಕಿ ಹೊಡೆದ ವಾಹನ ಚಾಲಕ ವಾಹನವನ್ನು ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದ. ಆದರೆ, ಬೆಳಗಿನ ಜಾವ ಕರಿಗೆರಸು ಸಮೀಪ ಆತ ಚಲಾಯಿಸುತ್ತಿದ್ದ ಫೋರ್ಡ್ ಈಕೋ ಸ್ಪೋರ್ಟ್ಸ್ (Ford EcoSport) ಕಾರನ್ನು ಬಿಟ್ಟು ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.
ಅಪಘಾತದ ಸುದ್ದಿ ತಿಳಿದ ಕೂಡಲೇ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಗಾಯಗೊಂಡ ಪಿಎಸ್‌ಐ ರಾಜುರೆಡ್ಡಿ ಹಾಗೂ ಸಿಬ್ಬಂದಿಗೆ ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದ್ದಾರೆ.
ಘಟನೆ ಕುರಿತು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ರಿಪ್ಪನ್‌ಪೇಟೆ ಪಟ್ಟಣದ ನಾಲ್ಕು ರಸ್ತೆಗಳಿಗೆ ಬೆಳಕಿನ ಭಾಗ್ಯ: ಬೇಳೂರು ಗೋಪಾಲಕೃಷ್ಣರಿಂದ ಚಾಲನೆ “ಕೊಟ್ಟ ಮಾತಿನಂತೆ ವಿದ್ಯುತ್ ದೀಪ ಅಳವಡಿಸಿದ್ದೇನೆ” —…
ರಿಪ್ಪನ್‌ಪೇಟೆಯಲ್ಲಿ 59ನೇ ವರ್ಷದ ಗಣಪತಿ ಪ್ರತಿಷ್ಠಾಪನಾ ಭವ್ಯ ಮೆರವಣಿಗೆ Ripponpete celebrates the 59th annual Ganapati festival with…
ಕಾಡುಪ್ರಾಣಿ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರು – ತಪ್ಪಿದ ಭಾರಿ ಅನಾಹುತ A car crashed into…
ರಿಪ್ಪನ್‌ಪೇಟೆಯಲ್ಲಿ 59ನೇ ಗಣೇಶೋತ್ಸವಕ್ಕೆ ಭರದ ಸಿದ್ದತೆ : ಸೆ.14ರಿಂದ 11 ದಿನಗಳ ಸಾಂಸ್ಕೃತಿಕ ಸಂಭ್ರಮ Rippanpete Ganeshotsava 2026: Karnataka…
ಹೊಸನಗರದಲ್ಲಿ ಸೆ.14ರಿಂದ 28ರವರೆಗೆ 8ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ: ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ಧತೆ Hosanagara Hindu Mahasabha…
ಜಿಂಕೆ ಮಾಂಸ ಸಾಗಾಟದ ಆರೋಪ: 34 ಕೆ.ಜಿ.ಗೂ ಅಧಿಕ ಮಾಂಸ ವಶ, ಓರ್ವ ಬಂಧನ Forest mobile squad seizes…