ದುರಾಸೆ ಗೆಲ್ಲಲಿಲ್ಲ, ಪ್ರಾಮಾಣಿಕತೆ ಸೋಲಲಿಲ್ಲ! ಚಿನ್ನದ ಸರ ಮರಳಿಸಿ ಎಲ್ಲರ ಹೃದಯ ಗೆದ್ದ ಗುರುಶಕ್ತಿ ಬಸ್ ಸಿಬ್ಬಂದಿಗಳು
Gold mangalsutra lost in Gurushakti bus returned to its owner by honest bus staff Ashraf and Moujim, earning appreciation for their integrity and humanity.
ರಿಪ್ಪನ್‌ಪೇಟೆ: ಗುರುಶಕ್ತಿ ಬಸ್‌ನಲ್ಲಿ ಪ್ರಯಾಣಿಸುವ ವೇಳೆ ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದ ಬಂಗಾರದ ಮಾಂಗಲ್ಯ ಸರವನ್ನು ಬಸ್ ಸಿಬ್ಬಂದಿ ಪ್ರಾಮಾಣಿಕತೆಯಿಂದ ಮಾಲೀಕರಿಗೆ ಹಸ್ತಾಂತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕೆಎ-15 9446 ನೋಂದಣಿಯ ಗುರುಶಕ್ತಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಚಿಕ್ಕ ಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಪ್ಪಿಗ ನಿವಾಸಿ ಸುಲೋಚನಾ ಅವರು ತಮ್ಮ ಬಂಗಾರದ ಮಾಂಗಲ್ಯ ಸರವನ್ನು ಕಳೆದುಕೊಂಡಿದ್ದರು.
ಬಸ್‌ನಲ್ಲಿ ಸರ ಪತ್ತೆಯಾದ ಬಳಿಕ ಕಾರ್ಯನಿರ್ವಾಹಕ ಅಶ್ರಫ್ ಜಯನಗರ ಹಾಗೂ ಚಾಲಕ ಮೌಜಿಮ್ ಹೊಸನಗರ ಅವರು ಅದನ್ನು ಸುರಕ್ಷಿತವಾಗಿ ಇಟ್ಟು, ನೈಜ ಮಾಲೀಕರಿಗೆ ತಲುಪಿಸುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಇಂದು ಮಧ್ಯಾಹ್ನ ಜೇನಿ ಗ್ರಾಮದ ರಾಜಣ್ಣ ಅವರ ಸಮ್ಮುಖದಲ್ಲಿ ಸರವನ್ನು ಸುಲೋಚನಾ ಅವರ ಪರವಾಗಿ ಭಾಸ್ಕರಾಚಾರ್ ಅವರು ಸ್ವೀಕರಿಸಿದರು. ಈ ವೇಳೆ ಸಿಬ್ಬಂದಿಯ ಪ್ರಾಮಾಣಿಕತೆಗೆ ಕೃತಜ್ಞತೆ ಸಲ್ಲಿಸಲಾಯಿತು.
ಬೆಲೆಬಾಳುವ ವಸ್ತು ದೊರೆತರೂ ಅದನ್ನು ತಮ್ಮ ಬಳಿ ಇಟ್ಟುಕೊಳ್ಳದೆ ಮಾಲೀಕರಿಗೆ ಮರಳಿಸಿದ ಅಶ್ರಫ್ ಮತ್ತು ಮೌಜಿಮ್ ಅವರ ನಡೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಇಂತಹ ಪ್ರಾಮಾಣಿಕ ಕಾರ್ಯಗಳು ಸಾರ್ವಜನಿಕ ಸಾರಿಗೆ ಸಿಬ್ಬಂದಿಯ ಮೇಲಿನ ನಂಬಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ.
ರಿಪ್ಪನ್‌ಪೇಟೆ ಪಟ್ಟಣದ ನಾಲ್ಕು ರಸ್ತೆಗಳಿಗೆ ಬೆಳಕಿನ ಭಾಗ್ಯ: ಬೇಳೂರು ಗೋಪಾಲಕೃಷ್ಣರಿಂದ ಚಾಲನೆ “ಕೊಟ್ಟ ಮಾತಿನಂತೆ ವಿದ್ಯುತ್ ದೀಪ ಅಳವಡಿಸಿದ್ದೇನೆ” —…
ರಿಪ್ಪನ್‌ಪೇಟೆಯಲ್ಲಿ 59ನೇ ವರ್ಷದ ಗಣಪತಿ ಪ್ರತಿಷ್ಠಾಪನಾ ಭವ್ಯ ಮೆರವಣಿಗೆ Ripponpete celebrates the 59th annual Ganapati festival with…
ಕಾಡುಪ್ರಾಣಿ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರು – ತಪ್ಪಿದ ಭಾರಿ ಅನಾಹುತ A car crashed into…
ರಿಪ್ಪನ್‌ಪೇಟೆಯಲ್ಲಿ 59ನೇ ಗಣೇಶೋತ್ಸವಕ್ಕೆ ಭರದ ಸಿದ್ದತೆ : ಸೆ.14ರಿಂದ 11 ದಿನಗಳ ಸಾಂಸ್ಕೃತಿಕ ಸಂಭ್ರಮ Rippanpete Ganeshotsava 2026: Karnataka…
ಹೊಸನಗರದಲ್ಲಿ ಸೆ.14ರಿಂದ 28ರವರೆಗೆ 8ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ: ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ಧತೆ Hosanagara Hindu Mahasabha…
ಜಿಂಕೆ ಮಾಂಸ ಸಾಗಾಟದ ಆರೋಪ: 34 ಕೆ.ಜಿ.ಗೂ ಅಧಿಕ ಮಾಂಸ ವಶ, ಓರ್ವ ಬಂಧನ Forest mobile squad seizes…