POSTMAN NEWS

ನೈಜ ಸುದ್ದಿ ನೇರ ಬಿತ್ತರ..

RIPPONPETE | ಬುದ್ದಿಮಾಂದ್ಯ ವ್ಯಕ್ತಿ ನಾಪತ್ತೆ – ಪತ್ತೆಗೆ ಮನವಿ

GridArt 20250131 145659876.jpg

RIPPONPETE | ಬುದ್ದಿಮಾಂದ್ಯ ವ್ಯಕ್ತಿ ನಾಪತ್ತೆ – ಪತ್ತೆಗೆ ಮನವಿ

ರಿಪ್ಪನ್‌ಪೇಟೆ ; ಇಲ್ಲಿನ ಸಮೀಪದ ಬೆಳ್ಳೂರು ಗ್ರಾಪಂ ವ್ಯಾಪ್ತಿಯ ಗುಬ್ಬಿಗ ಗ್ರಾಮದ ಬುದ್ದಿಮಾಂದ್ಯ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ನಡೆದಿದೆ.

ಗುಬ್ಬಿಗ ಸಮೀಪದ ಸಾರನಜಡ್ಡು ಗ್ರಾಮದ ಬಸಪ್ಪ ಬಿನ್ ಪುಟ್ಟನಾಯ್ಕ (68) ನಾಪತ್ತೆಯಾಗಿರುವ ವ್ಯಕ್ತಿಯಾಗಿದ್ದಾರೆ.

ದಿನಾಂಕ 12-01-2025 ರಂದು ಮನೆಯಿಂದ ಹೊರಹೋದ ಬಸಪ್ಪ ರವರು ಮನೆಗೆ ಹಿಂದಿರುಗಿರುವುದಿಲ್ಲ, ಈ ಹಿಂದೆ ಹಲವು ಬಾರಿ ಹೋದವರು ವಾರದಲ್ಲಿ ಹಿಂದಿರುಗಿದ್ದಾರೆ.ಸಂಬಂಧಿಕರ ಬಳಿ ಎಲ್ಲಾ ವಿಚಾರಿಸಿದಾಗ ಎಲ್ಲೂ ಪತ್ತೆಯಾಗಿರುವುದಿಲ್ಲ , ಈ ಸಂಬಂಧ ಜ.12ರಿಂದ ಇವರು ನಾಪತ್ತೆಯಾಗಿರುವುದಾಗಿ ಸಂಬಂಧಿ ಪ್ರಭಾಕರ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಪತ್ತೆಗಾಗಿ ಮನವಿ ಮಾಡಿದ್ದಾರೆ.

ಈ ವ್ಯಕ್ತಿಯನ್ನು ಯಾರಾದರೂ ಕಂಡಲ್ಲಿ ರಿಪ್ಪನ್‌ಪೇಟೆ ಪೊಲೀಸರಿಗೆ ಮಾಹಿತಿ ನೀಡುವಂತೆ ವಿನಂತಿಸಿದ್ದಾರೆ.

ಸಂಪರ್ಕಿಸಿ : 9480803635 , 9972721268

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.