ಸಿದ್ದರಾಮಯ್ಯ ಬಜೆಟ್ ನಲ್ಲಿ ಶಿವಮೊಗ್ಗ ಜಿಲ್ಲೆಗೆ ಸಿಕ್ಕಿದೇನು .?? ಇಲ್ಲಿದೆ ಮಾಹಿತಿ | Budget
ಸಿದ್ದರಾಮಯ್ಯ ಬಜೆಟ್ ನಲ್ಲಿ ಶಿವಮೊಗ್ಗ ಜಿಲ್ಲೆಗೆ ಸಿಕ್ಕಿದೇನು .?? ಇಲ್ಲಿದೆ ಮಾಹಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ನಲ್ಲಿ ಶಿವಮೊಗ್ಗಕ್ಕೆ ಹಲವು ಯೋಜನೆಗಳನ್ನ ಘೋಷಿಸಲಾಗಿದೆ. ಆಹಾರ ಪಾರ್ಕ್, IPHL ಪ್ರಯೋಗಾಲಯ, ಶಿವಮೊಗ್ಗ-ಬೊಮ್ಮನ್ ಕಟ್ಟೆ ರಸ್ತೆಯಲ್ಲಿ ರೈಲು ಮೇಲು-ಕೆಳ ಸೇತುವೆ, ತಾರಾಲಾಯ/ವಿಜ್ಞಾನ ಕೇಂದ್ರ ಸ್ಥಾಪನೆ, ಹೈಸೆಕ್ಯೂರಿಟಿ ಕಾರಾಗೃಹ ನಿರ್ಮಾಣದ ಘೋಷಣೆಯನ್ನ ಮಾಡಲಾಗಿದೆ. 1. ರಾಜ್ಯದಲ್ಲಿರುವ ವಿಮಾನ ನಿಲ್ದಾಣಗಳ ಹತ್ತಿರದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಆಹಾರ ಪಾರ್ಕ್‌ಗಳನ್ನು ಸ್ಥಾಪಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಶಿವಮೊಗ್ಗದ ಸೋಗಾನೆ, ವಿಜಯಪುರದ ಇಟ್ಟಂಗಿಹಾಳ ಮತ್ತು ಬೆಂಗಳೂರು ಗ್ರಾಮಾಂತರದ…