w
Headlines
Home » ನಾಳೆ(27-12-2024) ರಿಪ್ಪನ್‌ಪೇಟೆಯಲ್ಲಿ ನಾರಸಿಂಹ ನೃತ್ಯ ರೂಪಕ –

ನಾಳೆ(27-12-2024) ರಿಪ್ಪನ್‌ಪೇಟೆಯಲ್ಲಿ ನಾರಸಿಂಹ ನೃತ್ಯ ರೂಪಕ –

GridArt 20241226 145812819.jpg

ನಾಳೆ(27-12-2024) ರಿಪ್ಪನ್‌ಪೇಟೆಯಲ್ಲಿ ನಾರಸಿಂಹ ನೃತ್ಯ ರೂಪಕ –

ರಿಪ್ಪನ್‌ಪೇಟೆ : ಭರತನಾಟ್ಯವನ್ನು ಕೇಂದ್ರವಾಗಿಟ್ಟುಕೊಂಡು ಶಾಸ್ತ್ರೀಯ ನೃತ್ಯದ ಎಲ್ಲ ಪ್ರಾಕಾರಗಳ ಬೆಳವಣಿಗೆಗೆ ಶ್ರಮಿಸುತ್ತಿರುವ ನೃತ್ಯ ನಿಕೇತನ ಕೊಡವೂರು ಸಂಸ್ಥೆಯ ನೃತ್ಯ ರೂಪಕ ಕಾರ್ಯಕ್ರಮವನ್ನು ನಾಳೆ ಶುಕ್ರವಾರ (27-13-2024) ರಂದು ಪಟ್ಟಣದಲ್ಲಿ ಆಯೋಜಿಸಲಾಗಿದೆ.

ಪಟ್ಟಣದ ಜಯಶ್ರೀ ಮತ್ತು ಶ್ರೀನಿವಾಸ್ ಆಚಾರ್ ದಂಪತಿಗಳು ದುರ್ಗಾಂಬಿಕ ಸಾಮಿಲ್ ಆವರಣದಲ್ಲಿ ಹಮ್ಮಿಕೊಂಡಿರುವ ಪಂಚಮಾ ನವ ಚಂಡಿಕಾ ಹೋಮ ಧಾರ್ಮಿಕ ಕಾರ್ಯದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಶುಕ್ರವಾರ ಮಧ್ಯಾಹ್ನ 12-30ಕ್ಕೆ ಪಂಚಮಾ ನವ ಚಂಡಿಕಾ ಹೋಮ,  ಸಂಜೆ 6 ಗಂಟೆಗೆ ಸರೋಜಮ್ಮ ಎಸ್ ಎಸ್ ಹೊನ್ನಪ್ಪಚಾರ್ ವೇದಿಕೆಯಲ್ಲಿ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು 07 ಗಂಟೆಗೆ ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ರಾತ್ರಿ 08 ಗಂಟೆಗೆ ಕಾಂತಾರ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ ಉಡುಪೊ ಕೊಡವೂರಿನ ನೃತ್ಯ ನಿಕೇತನ ತಂಡದವರಿಂದ ನೃತ್ಯರೂಪಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ದುರ್ಗಾಂಬಿಕಾ ಸಾಮಿಲ್ ಮಾಲೀಕರಾದ ಶ್ರೀನಿವಾಸ್ ಆಚಾರ್ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.