ಈದ್ ಮಿಲಾದ್ ಮೆರವಣಿಗೆಯಲ್ಲಿ ಪಾನೀಯ ವಿತರಿಸಿ ಸೌಹಾರ್ಧತೆ ಮೆರೆದ ಹಿಂದೂ ಸಂಘಟನೆಯ ಕಾರ್ಯಕರ್ತರು :
ರಿಪ್ಪನ್‌ಪೇಟೆ : ಪಟ್ಟಣದಲ್ಲಿ ಇಂದು ಪ್ರವಾದಿ ಮುಹಮ್ಮದ್ ಪೈಗಂಬರ್ ರವರ 1499ನೇ ಜನ್ಮ ದಿನಾಚರಣೆ ಅಂಗವಾಗಿ ನಡೆದ ಈದ್ ಮಿಲಾದ್ ಮೆರವಣಿಗೆ ವಿನಾಯಕ ವೃತ್ತಕ್ಕೆ ಆಗಮಿಸುತಿದ್ದಂತೆ ಹಿಂದೂ ಸಂಘಟನೆಯ ಕಾರ್ಯಕರ್ತರು ಎಲ್ಲರಿಗೂ ಪಾನೀಯ ವಿತರಿಸಿ ಸೌಹಾರ್ಧತೆ ಮೆರೆದರು.
ಈದ್ ಮಿಲಾದ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರಿಗೆ ಹಾಗೂ ಮೆರವಣಿಗೆ ನೋಡಲು ಬಂದಿದ್ದ ಮಹಿಳೆಯರಿಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ತಂಪು ಪಾನೀಯ ವಿತರಿಸಿದ್ದಾರೆ. ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಎಸ್ ಪಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಸಾಗುತಿದ್ದವರು ಹಿಂದೂ ಸಂಘಟನೆಯವರ ಸೌಹಾರ್ಧತೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಅವರಿಗೂ ಈದ್ ಮಿಲಾದ್ ಹಬ್ಬದ ಶುಭಾಶಯಗಳನ್ನು ಕೋರಿದರು.
ಈ ಸಂಧರ್ಭದಲ್ಲಿ ಗ್ರಾಪಂ ಸದಸ್ಯ ನಿರೂಪ್ ಕುಮಾರ್ , ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಅಧ್ಯಕ್ಷ ರಾಮಚಂದ್ರ ಬಳೆಗಾರ್ , ಮುಖಂಡರಾದ ಪಿ ರಮೇಶ್ ,ಆಟೋ ಸುಜಯ್ ,ಪ್ರವೀಣ್ ಆಚಾರ್, ಸುದೇಶ್ ,ಶ್ರೀನಿವಾಸ್ ಆಚಾರ್ , ಹಾಗೂ ಇನ್ನಿತರರಿದ್ದರು.


