ನವೋದಯ ಪ್ರವೇಶ ಪರೀಕ್ಷೆ ಬಗ್ಗೆ ಅರಿವು – ಹಳೆ ನವೋದಯ ವಿದ್ಯಾರ್ಥಿಗಳಿಂದ

“ನವೋದಯ ಪ್ರವೇಶ ಪರೀಕ್ಷೆ ಬಗ್ಗೆ ಅರಿವು – ಹಳೆ ನವೋದಯ ವಿದ್ಯಾರ್ಥಿಗಳಿಂದ “ ಜವಾಹರ್ ನವೋದಯ ವಿದ್ಯಾಲಯಗಳ (ಜೆಎನ್‌ವಿ) ಹಳೆಯ ವಿದ್ಯಾರ್ಥಿಗಳು ಪ್ರತಿಷ್ಠಿತ ನವೋದಯ ಶಾಲೆಗಳಿಗೆ ಸೇರಲು ಬಯಸುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲು ಒಗ್ಗೂಡಿದ್ದಾರೆ. ಈ ತಂಡವು ಹಿಂದುಳಿದ ಹಿನ್ನೆಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಅಡೆತಡೆಗಳಿಲ್ಲದೆ ಗುಣಮಟ್ಟದ ಶಿಕ್ಷಣವನ್ನು ಪಡೆಯುವ ಅವಕಾಶವನ್ನು ಖಾತರಿಪಡಿಸುವ ಗುರಿಯನ್ನು ಹೊಂದಿದೆ. ಪ್ರಸಕ್ತ ವರ್ಷದಲ್ಲಿ ನವೋದಯ ಮತ್ತು ಮೊರಾರ್ಜಿ ಉಚಿತ ತರಬೇತಿ ಶಿಬಿರ ಹುಂಚ, ಕೋಣಂದೂರು-ಪತ್ರಕಟ್ಟೆ ಮತ್ತು ಶಿಕಾರಿಪುರ-ನೆಲವಾಗಿಲು ಸ್ಥಳಗಳಲ್ಲಿ…

Read More

ಲಕ್ಷಾಂತರ ರೂ ಮೌಲ್ಯದ ಹಸುಗಳನ್ನು ಕಳ್ಳತನವೆಸಗಿದ್ದ ಆರೋಪಿಗಳು ಅರೆಸ್ಟ್

ಕಳುವಾಗಿದ್ದ 2.40 ಲಕ್ಷ ರೂ ಮೌಲ್ಯದ 4 ಹಸುಗಳನ್ನ ಪತ್ತೆ ಮಾಡುವಲ್ಲಿ ಶಿರಾಳಕೊಪ್ಪದ ಪೊಲೀಸರು ಯಶಸ್ವಿಯಾಗಿದ್ದಾರೆ. ನಡೆದಿದ್ದೇನು..!??? ದಿನಾಂಕಃ 09-08-2024  ರಂದು ರಾತ್ರಿ ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಜಂಬೂರು ಗ್ರಾಮದ ವಾಸಿ ಶ್ರೀ ಮೊಹಮದ್ ಆಲಿ ಖಾನ್, 34 ವರ್ಷ ರವರ ಫಾರಂ ಹೌಸ್ ನಲ್ಲಿದ್ದ 04 ಹಸುಗಳನ್ನು ಕಳುವು ಮಾಡಲಾಗಿತ್ತು.  ಬಿಎನ್ ಎಸ್ ಕಾಯ್ದೆ ಅಡಿ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದಲ್ಲಿ ಕಳುವಾದ ಮಾಲು ಹಾಗೂ ಮಾಲಿನ ಪತ್ತೆಗಾಗಿ ಜಿಲ್ಲಾರಕ್ಷಣಾಧಿಕಾರಿ ಮಿಥುನ್…

Read More

Ripponpete | ವಿದ್ಯಾರ್ಥಿಗಳಲ್ಲಿ ಕಾನೂನಿನ ಅರಿವು ಅತ್ಯಗತ್ಯ – ಪಿಎಸ್‌ಐ ಪ್ರವೀಣ್ ಎಸ್ ಪಿ

Ripponpete | ವಿದ್ಯಾರ್ಥಿಗಳಲ್ಲಿ ಕಾನೂನಿನ ಅರಿವು ಅತ್ಯಗತ್ಯ – ಪಿಎಸ್‌ಐ ಪ್ರವೀಣ್ ಎಸ್ ಪಿ ರಿಪ್ಪನ್‌ಪೇಟೆ : ವಿದ್ಯಾರ್ಥಿಗಳು ಪೊಲೀಸ್‌ ಕಾನೂನು, ರಸ್ತೆ ಸುರಕ್ಷ ತೆ ಮುಂತಾದ ನಿಯಮಗಳ ಬಗ್ಗೆ ಅರಿವು ಹೊಂದುವ ಅಗತ್ಯವಿದೆ ಎಂದು ಪಿಎಸ್‌ಐ ಪ್ರವೀಣ್ ಎಸ್ ಪಿ ಹೇಳಿದರು. ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಪೊಲೀಸ್‌ ಇಲಾಖೆಯ ಕಾನೂನು, ನಿಯಮಗಳ ಬಗ್ಗೆ ಅರಿವು ಹೊಂದಿ ಪೋಷಕರು ಹಾಗೂ ಸಾರ್ವಜನಿಕರನ್ನು ಜಾಗೃತಿಗೊಳಿಸುವಷ್ಟು ಪ್ರಬುದ್ಧರಾಗಬೇಕು…

Read More

ನಾಯಿ ಕಚ್ಚಿ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವು

ನಾಯಿ ಕಚ್ಚಿ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವು ಹೊಸನಗರ : ನಾಯಿ ಕಚ್ಚಿ ಸಕಾಲದಲ್ಲಿ ಚಿಕಿತ್ಸೆ ಸಿಗದೇ ಶಂಕಿತ ರೇಬಿಸ್ ಗೆ ಮಹಿಳೆಯೊಬ್ಬರು ಬಲಿಯಾದ ಘಟನೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಗೇರುಪುರ ಮೂಲದ ಸಂಗೀತಾ (38) ಮೃತ ದುರ್ಧೈವಿಯಾಗಿದ್ದಾರೆ ಕಳೆದ ಜುಲೈ 14ರಂದು ಇವರಿಗೆ ನಾಯಿ ಕಚ್ಚಿತ್ತು. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆಯದಿದ್ದರಿಂದ ರೇಬೀಸ್ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ‌. ನಂತರ ಹೊಸನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ರೋಗ ಉಲ್ಬಣಗೊಂಡಿದ್ದರಿಂದ ಇವರನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ…

Read More

ಅಂಗನವಾಡಿ ಕಾರ್ಯಕರ್ತೆಯ ಮಾಂಗಲ್ಯ ಸರ ಕಿತ್ತು ಪರಾರಿ

ಅಂಗನವಾಡಿ ಕಾರ್ಯಕರ್ತೆಯ ಮಾಂಗಲ್ಯ ಸರ ಕಿತ್ತು ಪರಾರಿ ಅಂಗನವಾಡಿಯಲ್ಲಿ ಕಾರ್ಯನಿರತರಾಗಿದ್ದ ಅಂಗನವಾಡಿ ಕಾರ್ಯಕರ್ತೆಯೊಬ್ಬರ ಚಿನ್ನದ ಮಾಂಗಲ್ಯ ಸರವನ್ನು ಅಪರಿಚಿತ ವ್ಯಕ್ತಿಯೊಬ್ಬ ಕಿತ್ತುಕೊಂಡು ಹೋಗಿರುವ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪುರಪ್ಪೆಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬೈಲು ಗ್ರಾಮದ ಮಿನಿ ಅಂಗನವಾಡಿಯಲ್ಲಿ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ತಾರಾಮತಿ ಎಂಬವರು ಆ. 22ರಂದು ಕರ್ತವ್ಯ ನಿರತರಾಗಿದ್ದಾಗ ಸಂಜೆ 4 ಗಂಟೆ ಸುಮಾರಿಗೆ ನೀಲಿ ಬಣ್ಣದ ಜರ್ಕಿನ್ ಹಾಕಿಕೊಂಡು ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ಅಪರಿಚಿತ ವ್ಯಕ್ತಿಯೋರ್ವ ಅಂಗನವಾಡಿಗೆ ನುಗ್ಗಿ…

Read More

RIPPONPETE | ಗ್ರಾಮಸ್ಥರಿಗೆ ಆಸಕ್ತಿ ಇಲ್ಲದ ಗ್ರಾಮಸಭೆ

RIPPONPETE | ಗ್ರಾಮಸ್ಥರಿಗೆ ಆಸಕ್ತಿ ಇಲ್ಲದ ಗ್ರಾಮಸಭೆ ರಿಪ್ಪನ್‌ಪೇಟೆ : ಸಾರ್ವಜನಿಕರಿಗೆ ಅನುಕೂಲವಾಗಲೆಂದು ನಡೆಸುವ ಗ್ರಾಮಸಭೆಯ ಬಗ್ಗೆ ಕಳೆದ ಒಂದು ವಾರದಿಂದ ವ್ಯಾಪಕ ಪ್ರಚಾರ ನಡೆಸಿದರೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸದ ಹಿನ್ನಲೆ ಗ್ರಾಮಸಭೆಯಲ್ಲಿ ಖಾಲಿ ಕುರ್ಚಿಗಳು ಎದ್ದು ಕಾಣುತಿದ್ದು ಸಾರ್ವಜನಿಕರ ನಿರಾಸಕ್ತಿಗೆ ಗ್ರಾಮಾಡಳಿತ ಬೇಸರ ವ್ಯಕ್ತ ಪಡಿಸಿರುವ ಘಟನೆ ನಡೆದಿದೆ. ಗ್ರಾಮಸಭೆಯಲ್ಲಿ ಏನೇನಾಯ್ತು…!? ಪಟ್ಟಣದ ಬಸ್ ನಿಲ್ದಾಣಕ್ಕಾಗಿ ಕಾಯ್ದಿರಿಸಲಾಗಿರುವ 32 ಗುಂಟೆ ಜಾಗವನ್ನು ಕೂಡಲೇ ತೆರವುಗೊಳಿಸಿ ಬಸ್ ನಿಲ್ದಾಣವನ್ನು ನಿರ್ಮಿಸುವಂತೆ ಮತ್ತು ವಿನಾಯಕ ವೃತ್ತದಲ್ಲಿನ ಆಟೋ…

Read More

ತುಂಡಾಗಿದ್ದ ಕೈಯನ್ನು ಜೋಡಿಸಿದ ಶಿವಮೊಗ್ಗದ ವೈದ್ಯರು

ತುಂಡಾಗಿದ್ದ ಕೈಯನ್ನು ಜೋಡಿಸಿದ ಶಿವಮೊಗ್ಗದ ವೈದ್ಯರು ಶಿವಮೊಗ್ಗ ಆಸ್ಪತ್ರೆಯ ವೈದ್ಯರು ತುಂಡಾಗಿದ್ದ ಕೈಯನ್ನು ಜೋಡಿಸುವ ಆಪರೇಷನ್‌ ನಡೆಸಿ ಎರಡು ತುಂಡಾಗಿದ್ದ ಕೈಯನ್ನ ಜೋಡಿಸಿದ್ದಾರೆ. ಎರಡು ತುಂಡಾಗಿದ್ದ ಕೈಗೆ ಶಸ್ತ್ರ ಚಿಕಿತ್ಸೆ ನಡೆಸಿ, ಮರು ಜೋಡಿಸುವಲ್ಲಿ ಸರ್ಜಿ ಸೂಪರ್ ಸ್ಪೆಷಾಲಿಟಿ ತಜ್ಞ ವೈದ್ಯರ ತಂಡ ಯಶಸ್ವಿಯಾಗಿದೆ.  ಸತತ ಏಳು ಗಂಟೆಗಳ ಕಾಲ ನಡೆದ ಆಪರೇಷನ್ ಸಕ್ಸಸ್ ಆಗಿದೆ. ಏನಿದು ಘಟನೆ : ಶಿಕಾರಿಪುರ ತಾಲೂಕಿನ ಸಾಮಿಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ, ಮುಂಗೈ ಕತ್ತರಿಸಿಕಿಂಡು ಬಿಟ್ಟಿದ್ದ. ಸಂಪೂರ್ಣವಾಗಿಯೇ ಮುಂಗೈ ಕಟ್ ಆಗಿತ್ತು….

Read More

ಪೊಲೀಸ್ ಅಧಿಕಾರಿಯ ದರ್ಪದ ವರ್ತನೆಯ ಆರೋಪ – ಕ್ರಮಕ್ಕೆ ಆಗ್ರಹ

ಪೊಲೀಸ್ ಅಧಿಕಾರಿಯ ದರ್ಪದ ವರ್ತನೆಯ ಆರೋಪ – ಕ್ರಮಕ್ಕೆ ಆಗ್ರಹ ತೀರ್ಥಹಳ್ಳಿ ಪೊಲೀಸ್ ಇನ್‌ಸ್ಪೆಕ್ಟರ್ ಅಶ್ವಥ್ ಗೌಡ ಅವರು ಪತ್ರಕರ್ತರೊಂದಿಗೆ ದರ್ಪದಿಂದ ವರ್ತಿಸಿದ್ದಾರೆ ಎಂದು ಆರೋಪಿಸಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಹಾಗೂ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಸದಸ್ಯರು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಗುರುವಾರ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ತೀರ್ಥಹಳ್ಳಿಯ ‘ಪ್ರಜಾವಾಣಿ’ಯ ಅರೆಕಾಲಿಕ ವರದಿಗಾರ ನಿರಂಜನ್ ರಥಬೀದಿಯಲ್ಲಿ ವರದಿಗಾಗಿ ತೆರಳಿದ…

Read More

RIPPONPETE | ಗೋಮಾಂಸ ಸಾಗಾಟ – ವಾಹನ ಸಹಿತ ಮೂವರ ಬಂಧನ

RIPPONPETE | ಗೋಮಾಂಸ ಸಾಗಾಟ – ವಾಹನ ಸಹಿತ ಮೂವರ ಬಂಧನ ರಿಪ್ಪನ್‌ಪೇಟೆ : ಅಕ್ರಮವಾಗಿ ಗೋಮಾಂಸ ಸಾಗಿಸುತಿದ್ದ ಮೂವರು ಆರೋಪಿಗಳನ್ನು ಮಾಲು ಸಮೇತ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಇಂದು ಬೆಳಿಗ್ಗೆ ತೀರ್ಥಹಳ್ಳಿ ರಸ್ತೆಯ ಕಣಬಂದೂರು ರಸ್ತೆಯ ಬಳಿ ಪೊಲೀಸ್ ಸಿಬ್ಬಂದಿಗಳು ಗಸ್ತು ತಿರುಗುತಿದ್ದಾಗ ಪ್ಯಾಸೆಂಜರ್ ಆಟೋವೊಂದನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಸುಮಾರು 19ಸಾವಿರ ರೂ ಮೌಲ್ಯದ 80 ಕೆ ಜಿ ದನದ ಮಾಂಸವಿರುವುದ ಕಂಡು ಬಂದಿದೆ. ಮಾಂಸವನ್ನು ಎಲ್ಲಿಂದ ತಂದಿರುವುದಾಗಿ ಆರೋಪಿಗಳನ್ನು  ವಿಚಾರಿಸಿದಾಗ ಗರ್ತಿಕೆರೆ…

Read More

ANANDAPURA | ಚಂಪಕ ಸರಸ್ ನಲ್ಲಿ ಈಜಲು ಇಳಿದ ಯುವಕ ಸಾವು

ANANDAPURA | ಚಂಪಕ ಸರಸ್ ನಲ್ಲಿ ಈಜಲು ಇಳಿದ ಯುವಕ ಸಾವು ಆನಂದಪುರ : ಇಲ್ಲಿನ ಮಹಂತಿನ ಮಠ ಚಂಪಕ ಸರಸ್ ನಲ್ಲಿ ಈಜಲು ಇಳಿದ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಂಗಳೂರು ಮೂಲದ ಕುಶಾಲ್ (22) ಎಂಬ ಇಂಜಿನಿಯರ್ ಸಾವನ್ನಪ್ಪಿರುವ ದುರ್ದೈವಿ. ಕುಶಾಲ್, ಸಾಯಿ ರಾಮ್ ಹಾಗೂ ಯಶ್ವಂತ್ ಎಂಬ ಯುವಕರು ಬೆಂಗಳೂರಿನಿಂದ ಕುವೆಂಪುರವರ ಮನೆಗೆ ತೆರಳುವ ಉದ್ದೇಶದಿಂದ ಟ್ರಿಪ್ ಪ್ಲಾನ್ ಮಾಡಿ ಬಂದಿದ್ದರು, ಶಿವಮೊಗ್ಗ ಸಮೀಪಿಸುತ್ತಿದ್ದಂತೆ ಕುಶಾಲ್ ರವರ ಸ್ನೇಹಿತ ಆನಂದಪುರ ಸಮೀಪ ಚಂಪಕ…

Read More